ಅಡಿಕೆ ಕಳ್ಳಸಾಗಾಟದ ಕಿನ್‌ಪಿನ್‌ ವಶಕ್ಕೆ ಪಡೆದ ಡಿಆರ್‌ಐ | 65 ಮೆಟ್ರಿಕ್ ಟನ್ ಅಡಿಕೆ ಸಹಿತ ಆರೋಪಿ ಸೆರೆ |

November 7, 2023
8:50 PM
ಅಡಿಕೆ ಅಕ್ರಮವಾಗಿ ಆಮದು ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಡಿಆರ್‌ಐ ವಶಕ್ಕೆ ಪಡೆದಿದೆ.

ಅಡಿಕೆ ಕಳ್ಳಸಾಗಣೆ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಡಿಆರ್‌ಐ(The Department of Revenue Intelligence) ವಶಕ್ಕೆ ಪಡೆದಿದೆ. ಆರೋಪಿ ರವಿಕುಮಾರ್‌ ಎಂಬವರನ್ನು ಸೋಮವಾರ ಮಧುರೈನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದೇ ವೇಳೆ 4 ಕೋಟಿ ಮೌಲ್ಯದ 65 ಮೆಟ್ರಿಕ್ ಟನ್ ಅಡಿಕೆ ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇಗೆರೆ ದಾಳಿ ನಡೆಸಿದ ಡಿಆರ್‌ಐ , ಟ್ಯುಟಿಕೋರಿನ್‌ನಲ್ಲಿ ನಾಲ್ಕು 40  ಕಂಟೈನರ್‌ಗಳನ್ನು ತಡೆಹಿಡಿಯಿತು. ಇಂಡೋನೇಷ್ಯಾದ ಜಕಾರ್ತಾದಿಂದ ಹತ್ತಿ ಉತ್ಪನ್ನದ ನೆಪದಲ್ಲಿ ಅಡಿಕೆಯನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿತ್ತು. ತಪಾಸಣೆಯ ವೇಳೆ ಹತ್ತಿಯ ಒಳಗಡೆ ಅಡಿಕೆ ಪತ್ತೆಯಾಗಿದೆ. 65 ಮೆಟ್ರಿಕ್ ಟನ್ ತೂಕದ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ತನಿಖೆಯ ಬಳಿಕ ಲಾಜಿಸ್ಟಿಕ್ಸ್ ಕಂಪನಿಯ ಮಾಲೀಕರಾಗಿರುವ ರವಿಕುಮಾರ್‌ ಎಂಬವರನ್ನು ವಶಕ್ಕೆ ಪಡೆಯಲಾಗಿತ್ತು.

ಮಾಹಿತಿ ಪ್ರಕಾರ, ಕೆಲವು ಅಧಿಕಾರಿಗಳು ಈ ಕಳ್ಳಸಾಗಾಣಿಕೆಯ ಚಟುವಟಿಕೆಗೆ ನೆರವಾಗುತ್ತಿದ್ದಾರೆ. ಅವರ ಸಹಾಯದಿಂದಲೇ ಆಮದು ವಸ್ತುಗಳನ್ನು ತಪ್ಪಾಗಿ ನಮೂದಿಸಿ ಅಡಿಕೆ ಸಾಗಾಣಿಕೆ ಮಾಡಲಾಗುತ್ತಿದೆ. ಇದೀಗ  ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಡಿಆರ್‌ಐ ಮೂಲ ತಿಳಿಸಿದೆ ಎಂದು TOI ವರದಿ ಮಾಡಿದೆ.

DRI (The Department of Revenue Intelligence) has arrested the main accused who was smuggling arecanut.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror