ಅಡಿಕೆ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.ಮೇಘಾಲಯದ ಗಡಿಯಲ್ಲಿ ಬರ್ಮಾ ಅಡಿಕೆ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ತಡೆದು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಕಳ್ಳಸಾಗಾಣಿಕೆದಾರರನ್ನು ಜಬೀರ್ ಹುಸೇನ್ ಮತ್ತು ಜಾಸಿಂ ಉದ್ದೀನ್ ಎಂದು ಗುರುತಿಸಲಾಗಿದೆ.
ಬರ್ಮಾ ಅಡಿಕೆಯನ್ನು ಕಳೆದ ಕೆಲವಾರು ಸಮಯಗಳಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಇದನ್ನು ಸತತವಾಗಿ ತಡೆಯುವ ಪ್ರಯತ್ನ ಮಾಡಲಾಗಿತ್ತು. ಆರೋಪಿಗಳು ಪತ್ತೆಯಾದರೂ ಮತ್ತೆ ಮತ್ತೆ ಇದೇ ರೀತಿಯಲ್ಲಿ ಕಳ್ಳಸಾಗಾಣಿಕೆ ನಡೆಯುತ್ತಲೇ ಇದೆ. ಇದೀಗ ಆರೋಪಿಗಳೂ ಅಸ್ಸಾಂನಲ್ಲಿ ಪೊಲೀಸರಿಗೆ ಹಲ್ಲೆ ನಡೆಸುವವರೆಗೂ ತಲಪಿದ್ದಾರೆ.
ಈ ಪ್ರಕರಣದಲ್ಲೂ ವಶಕ್ಕೆ ತೆಗೆದುಕೊಂಡಿದ್ದ ಆರೋಪಿಗಳನ್ನು ಪೊಲೀಸರು ಕರೆದೊಯ್ಯುವ ವೇಳೆ, ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel