ಭೂತಾನ್‌ ದೇಶದ ಮೂಲಸೌಕರ್ಯ ಯೋಜನೆಗಳಿಗೆ ಭಾರತದಿಂದ 279.2 ಕೋಟಿ ನೆರವು | ಭಾರತವು ಭೂತಾನ್‌ ನೆರವಿಗೆ ನಿಲ್ಲುತ್ತಿರುವುದು ಏಕೆ?

October 16, 2022
8:31 PM
ಭೂತಾನ್‌ ಅಡಿಕೆ ಆಮದು ಬಗ್ಗೆ ಕಳೆದ ಹಲವು ದಿನಗಳಿಂದ ಭಾರತದ ಅದರಲ್ಲೂ ಕರ್ನಾಟಕದ ಗ್ರಾಮೀಣ ಭಾಗದಲ್ಲೂ ಚರ್ಚೆಯಾಗುತ್ತಿದೆ. ಹೀಗೆ ಅಡಿಕೆ ಆಮದು ಮಾಡಲೂ ಕಾರಣವಿದೆ. ಭೂತಾನ್‌ ಜೊತೆಗಿನ ಸ್ನೇಹವನ್ನು ಭಾರತ ಹೆಚ್ಚು ಬಯಸುತ್ತಿದೆ. ಭೂತಾನ್‌ ಕೂಡಾ ಭಾರತದ ಸ್ನೇಹವನ್ನು ನಿರೀಕ್ಷೆ ಮಾಡುತ್ತಿದೆ. ಇದರ ಹಿಂದೆ ಸೂಕ್ಷ್ಮ ನೋಟವೂ ಕಂಡುಬಂದಿದೆ. ಈ ನಡುವೆಯೇ ಭಾರತವು ಭೂತಾನ್‌ ದೇಶದ ಮೂಲಸೌಕರ್ಯಗಳಿಗೆ ನೆರವು ನೀಡುತ್ತಿದೆ.

ಭೂತಾನ್‌ನಲ್ಲಿನ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಭಾರತವು 279.2 ಕೋಟಿ ರೂಪಾಯಿಗಳ ಅಭಿವೃದ್ಧಿ ಸಹಾಯವನ್ನು ಒದಗಿಸುತ್ತಿದೆ. ರಸ್ತೆ ಮೂಲಸೌಕರ್ಯ, ನಗರಾಭಿವೃದ್ಧಿ, ಕೃಷಿ, ಕೈಗಾರಿಕಾ ಅಭಿವೃದ್ಧಿ, ಆರೋಗ್ಯ ಮೂಲಸೌಕರ್ಯ, ಶಿಕ್ಷಣ ಮತ್ತು ಸಂಸ್ಕೃತಿ ಸಂರಕ್ಷಣೆಯಂತಹ ಕ್ಷೇತ್ರಗಳಲ್ಲಿ ಅನುಷ್ಟಾನ ಮಾಡಲಾಗುತ್ತದೆ  ಎಂದು ಭೂತಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

Advertisement

ಭೂತಾನ್‌ನಲ್ಲಿ ವ್ಯಾಪಾರ ಮೂಲಸೌಕರ್ಯ ಮತ್ತು ಆಡಳಿತ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಲು ಪರಿವರ್ತನಾ ವ್ಯಾಪಾರ ಬೆಂಬಲ ಸೌಲಭ್ಯಕ್ಕಾಗಿ ಕೂಡಾ ನೆರವು ನೀಡಲಾಗುತ್ತಿದೆ. ಭಾರತವು ಭೂತಾನ್‌ನಾದ್ಯಂತ ಹಲವಾರು  ಯೋಜನೆಗಳ ಅಭಿವೃದ್ಧಿಯನ್ನು ಬೆಂಬಲಿಸುತ್ತಿದೆ. ಭೂತಾನ್ ಭಾರತದ ಉತ್ತಮ ಸ್ನೇಹಿತ ದೇಶವಾಗಿ ಮುಂದುವರಿಯುತ್ತಿದೆ. ಭಾರತಕ್ಕೆ ಭೂತಾನ್‌ ದೇಶವು ವಿವಿಧ ಕಾರಣಗಳಿಗೆ ಹತ್ತಿರವಾಗಿದೆ. ಈಗ ಉಭಯ ದೇಶಗಳ ನಡುವಿನ ರಾಜಕೀಯ ಸಂಬಂಧಗಳು ಕೂಡ ಬಹಳ ಉತ್ತಮವಾಗಿವೆ. ಭೂತಾನ್ ಎಲ್ಲಾ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತಕ್ಕೆ ಬೆಂಬಲವನ್ನು ನೀಡುತ್ತದೆ.

ಇದಕ್ಕೆ ಪ್ರಮುಖ ಕಾರಣ ಇದೆ. ಭೂತಾನ್ ಚೀನಾದೊಂದಿಗೆ ಈಚೆಗೆ ಸೀಮಿತ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದೆ. ಭೂತಾನ್ ಮೇಲೆ ಭಾರತದ ಒತ್ತಡವೇ ಕಾರಣ ಎಂದು ಚೀನಾ ಈಚೆಗೆ ಹೇಳಿದೆ. ಭೂತಾನ್ ದೇಶವು ಭಾರತ ಮತ್ತು ಚೀನಾ ನಡುವಿನ ಬಫರ್ ದೇಶವಾಗಿದೆ. ಹೀಗಾಗಿ ಈಗ ಭಾರತಕ್ಕೆ ಭೂತಾನ್‌ ದೇಶವು ಹೆಚ್ಚು ಆಪ್ತವಾಗಿದೆ. ಭೂತಾನ್‌ ಚೀತಾನದೊಂದಿಗೆ ಸೀಮಿತ ಸಂಬಂಧ ಹೊಂದಿದೆ. ಆದರೆ ಭಾರತವು ಈಗ ಭೂತಾನ್‌ಗೆ ಹೆಚ್ಚಿನ ಅನುದಾನದ ನೆರವು ಒದಗಿಸುವ ದೇಶವಾಗಿದೆ.

ಭಾರತವು ಈಗ ಭೂತಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ  ದೇಶವೂ ಆಗಿದೆ. ಇತ್ತೀಚೆಗೆ, ಭೂತಾನ್ ಸರ್ಕಾರದ ಕೋರಿಕೆಯ ಮೇರೆಗೆ ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಭಾರತವು ನಿಯಮಾವಳಿಗಳನ್ನು ಸಡಿಲಗೊಳಿಸಿದೆ. ಭಾರತ ಸರ್ಕಾರವು ಭೂತಾನ್‌ನಿಂದ ವಾರ್ಷಿಕವಾಗಿ 17,000 ಟನ್ ಹಸಿರು ಅಡಿಕೆಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ.‌ ಭೂತಾನ್‌ ದೇಶವು ಭಾರತದ ಅಡಿಕೆ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಕೂಡಾ ಸಿದ್ಧತೆ ಮಾಡಿಕೊಂಡಿದೆ.

ಹೀಗಾಗಿ ಸದ್ಯ ಭೂತಾನ್‌ ದೇಶದಿಂದ ಅಡಿಕೆ ಆಮದು ಸ್ಥಗಿತಗೊಳ್ಳುವುದು ಕಷ್ಟವಿದೆ. ಭಾರತಕ್ಕೆ ಅಂತರಾಷ್ಟ್ರೀಯ ಸಂಬಂಧ ಗಟ್ಟಿಯಾಗಲು ಹಾಗೂ ನೆರೆಯ ಚೀನಾ ದೇಶವನ್ನು ಬಗ್ಗು ಬಡಿಯಲು ಭೂತಾನ್‌ ನೆರವು ಅಗತ್ಯವಿದೆ. ಇದಕ್ಕಾಗಿ ಕೆಲವೊಂದು ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದೆ ಎನ್ನುವುದು ರಾಜಕೀಯ ವಿಶ್ಲೇಷಣೆಯ ವರದಿಯಾಗಿದೆ.

 

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group