ಅಡಿಕೆ ಬೆಳೆಯುವ ನಾಡಲ್ಲಿ ಉದ್ಯಮಗಳು ಏಕಿಲ್ಲ… ? | ಸರ್ಕಾರದ ನೆರವು, ಉದ್ಯಮಗಳ ಸ್ಥಾಪನೆಗೆ ಏಕೆ ಪ್ರಯತ್ನವಾಗುತ್ತಿಲ್ಲ.. ? |

August 28, 2022
7:39 PM

ದಕ್ಷಿಣ ಕನ್ನಡ ಜಿಲ್ಲೆಗೆ ದೇಶದ ಆದರಣೀಯ ಪ್ರಧಾನಮಂತ್ರಿಗಳು ಆಗಮಿಸುತ್ತಿದ್ದಾರೆ. ಅದೂ ಅಭಿವೃದ್ಧಿ ಪರವಾದ ಚಿಂತನೆಗಳನ್ನು ಇರಿಸಿಕೊಂಡು. ಬಹಳ ಸಂತಸದ ಸಂಗತಿ. ಸುಮಾರು 4000 ಕೋಟಿ ರೂಪಾಯಿ ಮಾತುಗಳು ಕೇಳಿಬರುತ್ತದೆ. ಅಭಿವೃದ್ಧಿಯ ಪಥವೇ ಇಲ್ಲಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಹೊರತುಪಡಿಸಿದರೆ ಉಳಿದೆಲ್ಲಾ ತಾಲೂಕುಗಳು, ವಿಧಾನಸಭಾ ಕ್ಷೇತ್ರಗಳು ಕೃಷಿ ಪ್ರಧಾನವಾದ ಪ್ರದೇಶಗಳು. ಇಲ್ಲಿ ಬಹುಪಾಲು ಮಂದಿ ಅಡಿಕೆ ಬೆಳೆಯುತ್ತಾರೆ, ಸುಳ್ಯ, ಬೆಳ್ತಂಗಡಿ, ಪುತ್ತೂರು ಭಾಗಶ: ಪ್ರದೇಶದಲ್ಲಿ ರಬ್ಬರ್‌ ಬೆಳೆಯುತ್ತಾರೆ. ಸದ್ಯ ಅಡಿಕೆಗೆ ಧಾರಣೆ ಇದೆ, ರಬ್ಬರ್‌ ಬೆಲೆ ಕುಸಿದಿದೆ. ರಬ್ಬರ್‌ ಅಂತರಾಷ್ಟ್ರೀಯ ಮಾರುಕಟ್ಟೆ, ಅಡಿಕೆ ಸ್ಥಳೀಯ ಹಾಗೂ ಯಾವುದೇ ಹಿಡಿತ ಇಲ್ಲದೆ, ಬೇಡಿಕೆ ಹಾಗೂ ಸರಬರಾಜು ಮೇಲೆ ಧಾರಣೆ ನಿಂತಿದೆ. ರೈತರ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಬೆಳೆಗಾರರಿಗೆ ಆಧಾರವಾಗಿ ನಿಂತಿದೆ. ಅದು ಬಿಟ್ಟರೆ ಅಡಿಕೆಗೆ ಈಗ ಧಾರಣೆ ಇದೆ ಎನ್ನುವುದೇ ಸಮಾಧಾನ.

ಒಂದು ವೇಳೆ ಅಡಿಕೆಯ ಸರಬರಾಜು ಹಾಗೂ ಬೇಡಿಕೆ ಎರಡೂ ಸಮಾನವಾದರೆ ಭವಿಷ್ಯದಲ್ಲಿ ಅಡಿಕೆ ಧಾರಣೆ ಇದೇ ರೀತಿ ನಿಲ್ಲಲು ಸಾಧ್ಯವೇ ಇಲ್ಲ. ಈ ಸಂದರ್ಭದಲ್ಲಿ ಬೆಳೆಗಾರರಿಗೆ ಏನು ? ಆಡಳಿತಗಳು ಇದಕ್ಕಾಗಿಯೇ ಒಂದು ಚಿಂತನಾ ತಂಡ ರಚನೆ ಮಾಡಲೇಬೇಕಾದ ಅನಿವಾರ್ಯತೆ ಇದೆ.

ಇಂದು ದೇಶದ ಪ್ರಧಾನಿಗಳು ಮಂಗಳೂರಿಗೆ ಬಂದು ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ ಮಾಡುವ ವೇಳೆಗೆ ಸುಮಾರು 4000 ಕೋಟಿಯ ಮಾತುಗಳು ಬರುವಾಗ ಇಲ್ಲಿನ ಕೃಷಿಕರ, ಇಲ್ಲಿನ ಇಂದಿನ ಪ್ರಮುಖ ಬೆಳೆಯಾದ ಅಡಿಕೆಗೆ ಸಂಬಂಧಿಸಿದ ಕನಿಷ್ಟ ಎರಡು ಉದ್ಯಮ ಸ್ಥಾಪಿಸುವುದಕ್ಕೆ ಸಾಧ್ಯವಾಗಿದೆಯೇ ? ಅದಕ್ಕಾಗಿ ಯಾವುದಾದರೂ ಯೋಜನೆ ರೂಪಿಸಲು ಸಾಧ್ಯವಾಗಿದೆಯೇ ? ಅದಕ್ಕಾಗಿ ಅನುದಾನ ಬಿಡುಗಡೆಯಾಗಿದೆಯೇ? ಅಡಿಕೆಯ ಸಂಸ್ಥೆಗಳಿಗೆ, ಉದ್ಯಮಗಳಿಗೆ ಮಾನ್ಯತೆ ನೀಡಿದೆಯೇ ಎನ್ನುವುದು ಪ್ರಶ್ನೆ. ಹಾಗಾದರೆ ಭವಿಷ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆಯ ಉತ್ಪನ್ನ, ಅಡಿಕೆಯ ಮಾರುಕಟ್ಟೆಗೂ , ಧಾರಣೆಗೂ ಸ್ಥಿರತೆ ಸಿಗಬಹುದು, ಬೆಳೆಗಾರರಿಗೂ ಭದ್ರತೆ ದೊರೆಯಬಲ್ಲುದು.ಕೃಷಿಕರ ಸಂಸ್ಥೆ ಕ್ಯಾಂಪ್ಕೋ ಒಂದಷ್ಟು ಪ್ರಯತ್ನ ಮಾಡುತ್ತಿದೆ. ಅದು ಬಿಟ್ಟರೆ ಈಗ ಅಡಿಕೆ ತಿಂದು ಉಗುಳುವ ವಸ್ತುವಾಗಿಯೇ ಕಾಣುತ್ತದೆ.‌ಅದರ ಹೊರತಾಗಿಯೂ ವಿವಿಧ ಉದ್ಯಮ ಇದೆ. ಅಡಿಕೆ ಉತ್ಪನ್ನಗಳ ಹಲವಾರು ಪ್ರಯತ್ನ ನಡೆಯುತ್ತಿವೆ, ಅವುಗಳಿಗೆ ಕರಾವಳಿ ಜಿಲ್ಲೆಯಲ್ಲಿ ಮಾನ್ಯತೆ ಸಿಗುವಂತಾಗಬೇಕು.

ಈಗಾಗಲೇ ಅಡಿಕೆಯ ಚೊಗರು ಟೆಕ್ಸ್‌ಟೈಲ್‌ ಉದ್ಯಮಕ್ಕೆ ಬಳಕೆಯಾಗುತ್ತಿರುವ ಬಗ್ಗೆ ಅಡಿಕೆ ಪತ್ರಿಕೆ ಮಾಹಿತಿ ನೀಡಿದೆ. ಇದು ಭವಿಷ್ಯದಲ್ಲಿ ಉತ್ಯುತ್ತಮ ಅಡಿಕೆ ಉತ್ಪನ್ನ ಎಂಬುದನ್ನು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಹೇಳಿದ್ದಾರೆ. ಅದೇ ಮಾದರಿಯಲ್ಲಿ ಹಾಳೆ ತಟ್ಟೆ ಉದ್ಯಮ, ಅಡಿಕೆ ಸುಪಾರಿ, ಅಡಿಕೆಯಿಂದ ತಯಾರಾಗುವ ಇತರ ಉತ್ಪನ್ನಗಳ ಪಟ್ಟಿಯೂ ಆಗಬೇಕಿದೆ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಈ ನೆಲೆಯಲ್ಲಿ ಪಟ್ಟಿ ಮಾಡಿತ್ತು.

ರಬ್ಬರ್ ಈ ಜಿಲ್ಲೆಯ ಇನ್ನೊಂದು ಬೆಳೆ. ರಬ್ಬರ್ ಗೆ ಸಂಬಂಧಿಸಿದ ಉದ್ಯಮ ಸ್ಥಾಪಿಸಿದರೆ ಧಾರಣೆಯಲ್ಲೂ, ಉತ್ಪನ್ನದಲ್ಲೂ ಸುಧಾರಣೆ ಸಾಧ್ಯವಿದೆ. ಇದರಲ್ಲೂ ಪ್ರಯತ್ನವಾಗಿ, ಭರವಸೆ ಕೇಳಿ ಸದ್ದಿಲ್ಲದೇ ಹೋಗಿದೆ.ಕಾಳುಮೆಣಸು ಕೂಡಾ ಕರಾವಳಿ ಜಿಲ್ಲೆಯ ಉಪಬೆಳೆ ಅದರ ಉದ್ಯಮವೂ ಕರಾವಳಿಯಲ್ಲಿ ಸೀಮಿತ.

ತೆಂಗು ಇನ್ನೊಂದು ಪ್ರಮುಖವಾದ ಬೆಳೆ. ತೆಂಗಿನ ಸಂಸ್ಥೆಗಳೂ‌ ಆರಂಭವಾಗಿವೆ. ಅವುಗಳಿಗೆ ಸರ್ಕಾರದ ನೆರವು ಇನ್ನೂ ಸಿಗಲಿಲ್ಲ ಎನ್ನುವುದು ತೆಂಗು ಬೆಳೆಗಾರರ ಸಂಸ್ಥೆಗೆ ಹೋದಾಗ ತಿಳಿಯುತ್ತದೆ. ಬಹುದೊಡ್ಡ ನಿರೀಕ್ಷೆ ಹಾಗೂ ಯೋಜನೆಯೊಂದಿಗೆ ಬೆಳೆಯುತ್ತಿರುವ ತೆಂಗು ಸಂಸ್ಥೆ‌ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದೆ.

ಈಗ ಪ್ರಧಾನಿಗಳ ಈ ಜಿಲ್ಲೆಗೆ ಆಗಮಿಸುವ ವೇಳೆ ಇಂತಹದೊಂದು ಕೃಷಿ ಪ್ರಧಾನವಾದ ಉದ್ಯಮದ ಕಡೆಗೆ ಅದರಲ್ಲೂ 4000 ಕೋಟಿ ಯೋಜನೆಯ ಜಾರಿಯ ಸಂದರ್ಭದಲ್ಲಿ ಪ್ರಧಾನಿಗಳ ಗಮನಕ್ಕೆ ಕೃಷಿಕರ ಪರವಾಗಿ ಗಮನಕ್ಕೆ ತರಬೇಕಾಗಿದೆ. ಜಿಲ್ಲೆಯ, ಮಲೆನಾಡಿನ ಕೃಷಿಕರ ಭವಿಷ್ಯದ ಬದುಕಿನ ಭದ್ರತೆಗಾಗಿ.

ಬರಹ :
 ಮಹೇಶ್‌ ಪುಚ್ಚಪ್ಪಾಡಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಬದುಕು ಕಲಿಸುವ ಪಾಠಗಳು
April 24, 2025
6:23 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಕೂಡಿಟ್ಟ ಆಸ್ತಿ ಮನೆಯಲ್ಲೇ ನಡೀತು ಕುಸ್ತಿ
April 23, 2025
9:50 PM
by: ಡಾ.ಚಂದ್ರಶೇಖರ ದಾಮ್ಲೆ
ಹೊಸರುಚಿ | ಗುಜ್ಜೆ ಮೊಸರು ಗೊಜ್ಜು
April 23, 2025
8:00 AM
by: ದಿವ್ಯ ಮಹೇಶ್
ಬದುಕು ಪುರಾಣ | ‘ಅಲ್ಲಿ ತುಂಬಾ ರಾಮಾಯಣವಿದೆ !?’
April 20, 2025
7:42 AM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror

Join Our Group