ಅಡಿಕೆಯ ಪರ್ಯಾಯ ಬಳಕೆ | ಅಡಿಕೆ ಕೇವಲ ಜಗಿಯಲು ಮಾತ್ರವಲ್ಲ.. | ಆಹಾರದಲ್ಲೂ ಅಡಿಕೆ ಬಳಕೆಗೆ ಆದ್ಯತೆ |

June 10, 2023
1:35 PM

ಅಡಿಕೆಯ ಪರ್ಯಾಯ ಬಳಕೆಯ ಬಗ್ಗೆ ಚಿಂತನೆಗಳು ನಡೆಯುತ್ತಿದೆ. ಒಂದು ಕಡೆ ಅಡಿಕೆ ಹಾನಿಕಾರಕ ಎಂಬ ಗುಮ್ಮ ಆಗಾಗ ಕಾಡುತ್ತದೆ. ಇನ್ನೊಂದು ಕಡೆ ಅಡಿಕೆ ಮಾರುಕಟ್ಟೆಯ ಮೇಲೂ ವ್ಯತ್ಯಾಸ ಕಂಡುಬರುತ್ತದೆ. ಈ ಎಲ್ಲದರ ನಡುವೆ ಅಡಿಕೆ ಬೆಳೆ ವಿಸ್ತರಣೆಯೂ ಆಗುತ್ತಿದೆ. ವಿಸ್ತರಣೆಯ ವೇಗದಲ್ಲಿ ಅಡಿಕೆ ಬಳಕೆಯಾಗುತ್ತಿಲ್ಲ. ಅಡಿಕೆಯನ್ನು ಬೇರೆ ಬೇರೆ ಕಡೆ ಹೆಚ್ಚಾಗಿ ಬಳಕೆ ಮಾಡುವಂತಾಗಬೇಕು. ಇದೀಗ ಆಹಾರದಲ್ಲೂ ಅಡಿಕೆ ಬಳಕೆ ಆರಂಭವಾಗಿದೆ. ಉತ್ತರ ಕನ್ನಡದಲ್ಲಿ ಅಡಿಕೆ ಸಿಂಗಾರದ ಪಲ್ಯ ಈಗ ಪೇಮಸ್ಸಾಗುತ್ತಿದೆ.

Advertisement

ಅಡಿಕೆ ಉಪ್ಪಿನಕಾಯಿ, ಅಡಿಕೆ ಹೋಳಿಗೆ, ಅಡಿಕೆ ತಾಂಬೂಲು ಹೀಗೇ ಹಲವು ವಸ್ತುಗಳು ಬಳಕೆಗೆ ಬಂದಿದೆ. ಇದೀಗ ಅಡಿಕೆ ಸಿಂಗಾರದ ಪಲ್ಯವೂ ಸೇರಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಕೆಲವು ಮಂದಿ ಈ ಪ್ರಯೋಗ ಮಾಡಿದ್ದಾರೆ. ಹೀಗಾಗಿ ಈಗ ಮತ್ತೆ ಅಡಿಕೆ ಸಿಂಗಾರವೂ ಆಹಾರದ ಸಾಲಿನಲ್ಲಿ ಸೇರುತ್ತಿದೆ. ಅಡಿಕೆ ಬೆಳೆಯುವ ನಾಡಾದ ಶಿರಸಿ, ಸಿದ್ಧಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಸಿಂಗಾರದ ಪಲ್ಯ ಪ್ರಯೋಗವಾಗಿದೆ.

ಅಡಿಕೆ ಸಿಂಗಾರದ ಪಲ್ಯವನು ಅಲ್ಲಿ ಹೀಗೆ ಮಾಡಲಾಗುತ್ತದೆ ಎಂದು ಮಾಧ್ಯಮದ ಮೂಲಕ ವಿವರ ಲಭ್ಯವಾಗಿದೆ.  ಎಳೆ ಸಿಂಗಾರವನ್ನು ಆರಿಸಿಕೊಂಡು ಬರಬೇಕು. ತೀರಾ ಬಲಿತ ಸಿಂಗಾರವಾದರೆ ತಿನ್ನೋದಕ್ಕೆ ಆಗೋದಿಲ್ಲ. ಇನ್ನು ತೀರಾ ಎಳೆಯದ್ದು ಆದ್ರೂ ಉರಿಗೆ ಕರಗಿಬಿಡುತ್ತದೆ. ಹೀಗಾಗಿ ಬಿಳಿಯಾಗಿರುವ ಸಣ್ಣ ಸಿಂಗಾರದ ಹೂವನ್ನು ಕೊಯ್ದುಕೊಂಡು ಬಂದು ಅದನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಸಿಂಗಾರದ ತುಂಡುಗಳನ್ನೆಲ್ಲಾ ಹದವಾಗಿ ನೀರಿನಲ್ಲಿ ಬೇಯಿಸಬೇಕು. ಅದಾದ ಮೇಲೆ ಈರುಳ್ಳಿ, ಬೆಳ್ಳುಳ್ಳಿ, ಸಾಸಿವೆ, ಕೊಬ್ಬರಿ ಎಣ್ಣೆ, ಬೇವಿನಸೊಪ್ಪು, ಕೊತ್ತಂಬರಿಯ ಒಗ್ಗರಣೆಯನ್ನು ಮಾಡಿಕೊಳ್ಳಬೇಕು. ನಂತರ ಬೆಂದ ಸಿಂಗಾರದ ನೀರನ್ನು ಬಸಿದು, ಬೆಂದ ಸಿಂಗಾರವನ್ನು ಒಗ್ಗರಣೆಗೆ ಸೇರಿಸಿ, ಚೂರೇ ಚೂರು ಎಣ್ಣೆಯೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಸಾಂಬಾರ್ ಮಸಾಲೆ ಬೇಕಿದ್ದರೆ ಕಾಯಿತುರಿ ಸೇರಿಸಿಕೊಂಡು ಮಾಡಬಹುದು. ಸ್ವಲ್ಪ ಹೊತ್ತು ಚೆನ್ನಾಗಿ ಸೌಟಲ್ಲಿ ತಿರವುತ್ತಾ ಬೇಯಿಸಿಬಿಟ್ಟರೆ ಸಿಂಗಾರದ ಘಮಘಮವೆನಿಸುವ ಪಲ್ಯ ಸವಿಯಲು ಸಿದ್ಧವಾಗುತ್ತೆ.

ಅಡಿಕೆಯ ಪರ್ಯಾಯ ಬಳಕೆಯ ಕಡೆಗೆ ಆದ್ಯತೆ ಇಂದು ಅಗತ್ಯವಾಗಿದೆ. ಈ ಮೊದಲು ಅಡಿಕೆಯ ವಿವಿಧ ಬಳಕೆ ಇತ್ತು, ಅಡಿಕೆಯ ಬಣ್ಣವೂ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ದೇಸೀ ಉಡುಪುಗಳಿಗೂ ಅಡಿಕೆಯ ಬಣ್ಣ ಉತ್ತಮವಾಗಿದೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದೇಶದಾದ್ಯಂತ ಸಾಮಾನ್ಯ ಮಳೆ | ಮಲೆನಾಡು-ಕರಾವಳಿಯಲ್ಲಿ ವ್ಯಾಪಕ ಮಳೆ ಸಾಧ್ಯತೆ
July 16, 2025
7:51 AM
by: ದ ರೂರಲ್ ಮಿರರ್.ಕಾಂ
ಆರೋಗ್ಯದಲ್ಲಿ ಈ ರಾಶಿಯವರಿಗೆ ದೀರ್ಘಕಾಲದ ಕಾಯಿಲೆಯಿಂದ ಚೇತರಿಕೆ
July 16, 2025
7:17 AM
by: ದ ರೂರಲ್ ಮಿರರ್.ಕಾಂ
ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ
July 15, 2025
9:39 PM
by: ದ ರೂರಲ್ ಮಿರರ್.ಕಾಂ
ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ
July 15, 2025
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group