ಅಡಿಕೆಯ ಪರ್ಯಾಯ ಬಳಕೆಯ ಬಗ್ಗೆ ಚಿಂತನೆಗಳು ನಡೆಯುತ್ತಿದೆ. ಒಂದು ಕಡೆ ಅಡಿಕೆ ಹಾನಿಕಾರಕ ಎಂಬ ಗುಮ್ಮ ಆಗಾಗ ಕಾಡುತ್ತದೆ. ಇನ್ನೊಂದು ಕಡೆ ಅಡಿಕೆ ಮಾರುಕಟ್ಟೆಯ ಮೇಲೂ ವ್ಯತ್ಯಾಸ ಕಂಡುಬರುತ್ತದೆ. ಈ ಎಲ್ಲದರ ನಡುವೆ ಅಡಿಕೆ ಬೆಳೆ ವಿಸ್ತರಣೆಯೂ ಆಗುತ್ತಿದೆ. ವಿಸ್ತರಣೆಯ ವೇಗದಲ್ಲಿ ಅಡಿಕೆ ಬಳಕೆಯಾಗುತ್ತಿಲ್ಲ. ಅಡಿಕೆಯನ್ನು ಬೇರೆ ಬೇರೆ ಕಡೆ ಹೆಚ್ಚಾಗಿ ಬಳಕೆ ಮಾಡುವಂತಾಗಬೇಕು. ಇದೀಗ ಆಹಾರದಲ್ಲೂ ಅಡಿಕೆ ಬಳಕೆ ಆರಂಭವಾಗಿದೆ. ಉತ್ತರ ಕನ್ನಡದಲ್ಲಿ ಅಡಿಕೆ ಸಿಂಗಾರದ ಪಲ್ಯ ಈಗ ಪೇಮಸ್ಸಾಗುತ್ತಿದೆ.
ಅಡಿಕೆ ಉಪ್ಪಿನಕಾಯಿ, ಅಡಿಕೆ ಹೋಳಿಗೆ, ಅಡಿಕೆ ತಾಂಬೂಲು ಹೀಗೇ ಹಲವು ವಸ್ತುಗಳು ಬಳಕೆಗೆ ಬಂದಿದೆ. ಇದೀಗ ಅಡಿಕೆ ಸಿಂಗಾರದ ಪಲ್ಯವೂ ಸೇರಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಕೆಲವು ಮಂದಿ ಈ ಪ್ರಯೋಗ ಮಾಡಿದ್ದಾರೆ. ಹೀಗಾಗಿ ಈಗ ಮತ್ತೆ ಅಡಿಕೆ ಸಿಂಗಾರವೂ ಆಹಾರದ ಸಾಲಿನಲ್ಲಿ ಸೇರುತ್ತಿದೆ. ಅಡಿಕೆ ಬೆಳೆಯುವ ನಾಡಾದ ಶಿರಸಿ, ಸಿದ್ಧಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಸಿಂಗಾರದ ಪಲ್ಯ ಪ್ರಯೋಗವಾಗಿದೆ.
ಅಡಿಕೆ ಸಿಂಗಾರದ ಪಲ್ಯವನು ಅಲ್ಲಿ ಹೀಗೆ ಮಾಡಲಾಗುತ್ತದೆ ಎಂದು ಮಾಧ್ಯಮದ ಮೂಲಕ ವಿವರ ಲಭ್ಯವಾಗಿದೆ. ಎಳೆ ಸಿಂಗಾರವನ್ನು ಆರಿಸಿಕೊಂಡು ಬರಬೇಕು. ತೀರಾ ಬಲಿತ ಸಿಂಗಾರವಾದರೆ ತಿನ್ನೋದಕ್ಕೆ ಆಗೋದಿಲ್ಲ. ಇನ್ನು ತೀರಾ ಎಳೆಯದ್ದು ಆದ್ರೂ ಉರಿಗೆ ಕರಗಿಬಿಡುತ್ತದೆ. ಹೀಗಾಗಿ ಬಿಳಿಯಾಗಿರುವ ಸಣ್ಣ ಸಿಂಗಾರದ ಹೂವನ್ನು ಕೊಯ್ದುಕೊಂಡು ಬಂದು ಅದನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಸಿಂಗಾರದ ತುಂಡುಗಳನ್ನೆಲ್ಲಾ ಹದವಾಗಿ ನೀರಿನಲ್ಲಿ ಬೇಯಿಸಬೇಕು. ಅದಾದ ಮೇಲೆ ಈರುಳ್ಳಿ, ಬೆಳ್ಳುಳ್ಳಿ, ಸಾಸಿವೆ, ಕೊಬ್ಬರಿ ಎಣ್ಣೆ, ಬೇವಿನಸೊಪ್ಪು, ಕೊತ್ತಂಬರಿಯ ಒಗ್ಗರಣೆಯನ್ನು ಮಾಡಿಕೊಳ್ಳಬೇಕು. ನಂತರ ಬೆಂದ ಸಿಂಗಾರದ ನೀರನ್ನು ಬಸಿದು, ಬೆಂದ ಸಿಂಗಾರವನ್ನು ಒಗ್ಗರಣೆಗೆ ಸೇರಿಸಿ, ಚೂರೇ ಚೂರು ಎಣ್ಣೆಯೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಸಾಂಬಾರ್ ಮಸಾಲೆ ಬೇಕಿದ್ದರೆ ಕಾಯಿತುರಿ ಸೇರಿಸಿಕೊಂಡು ಮಾಡಬಹುದು. ಸ್ವಲ್ಪ ಹೊತ್ತು ಚೆನ್ನಾಗಿ ಸೌಟಲ್ಲಿ ತಿರವುತ್ತಾ ಬೇಯಿಸಿಬಿಟ್ಟರೆ ಸಿಂಗಾರದ ಘಮಘಮವೆನಿಸುವ ಪಲ್ಯ ಸವಿಯಲು ಸಿದ್ಧವಾಗುತ್ತೆ.
ಅಡಿಕೆಯ ಪರ್ಯಾಯ ಬಳಕೆಯ ಕಡೆಗೆ ಆದ್ಯತೆ ಇಂದು ಅಗತ್ಯವಾಗಿದೆ. ಈ ಮೊದಲು ಅಡಿಕೆಯ ವಿವಿಧ ಬಳಕೆ ಇತ್ತು, ಅಡಿಕೆಯ ಬಣ್ಣವೂ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ದೇಸೀ ಉಡುಪುಗಳಿಗೂ ಅಡಿಕೆಯ ಬಣ್ಣ ಉತ್ತಮವಾಗಿದೆ.
ಅಕ್ರಮವಾಗಿ ಸುಮಾರು 68 ಟನ್ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…
ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…
ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…