MIRROR FOCUS

ಅಡಿಕೆ ಹಳದಿ ಎಲೆರೋಗ | ಜನಪ್ರತಿನಿಧಿಗಳು ಮಾಡಬೇಕಾದ್ದೇನು..? | ಸರ್ಕಾರ ಮಾಡಬೇಕಾದ್ದೇನು..? | ಚುನಾವಣಾ ಸಮಯದಲ್ಲಿ ಏಕೆ ಚರ್ಚೆಯಾಗುತ್ತಿಲ್ಲ..?‌ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದಕ್ಷಿಣ ಕನ್ನಡ ಜಿಲ್ಲೆ ಪ್ರಮುಖವಾಗಿ ಕೃಷಿ ಹಿನ್ನೆಲೆ ಹೊಂದಿದ ಜಿಲ್ಲೆ. ಅದರಲ್ಲೂ ಅಡಿಕೆ ಬೆಳೆಯೇ ಪ್ರಮುಖವಾಗಿದೆ. ಆದರೆ, ಸುಳ್ಯದಿಂದ ತೊಡಗಿ ಈಗ ಬಹುಪಾಲು ಕಡೆ ಹಳದಿ ಎಲೆರೋಗ ಕಾಣಿಸಿದೆ. ಸುಳ್ಯದ ಸಂಪಾಜೆ, ಅರಂತೋಡು, ಮರ್ಕಂಜ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಭವಿಷ್ಯದಲ್ಲಿ ದ ಕ ಜಿಲ್ಲೆಯ ಎಲ್ಲಾ ಕೃಷಿಕರಿಗೂ ಇದೊಂದು ಸವಾಲಾಗಿದೆ. ಹಾಗಿದ್ದರೂ ಚುನಾವಣಾ ವಿಷಯ ಇದಾಗುತ್ತಿಲ್ಲ.‌ ಹಾಗೆ ನೋಡಿದರೆ ರಾಜ್ಯದಲ್ಲಿ ಇಂದು ಅಡಿಕೆ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಇದಕ್ಕಾಗಿ ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ ಮತ್ತು ಚುನಾವಣೆ ಈ ಬಗ್ಗೆ ಕೃಷಿಕ ರಮೇಶ ದೇಲಂಪಾಡಿ ಅವರ ಜೊತೆ ದ ರೂರಲ್‌ ಮಿರರ್.ಕಾಂ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.. …….ಮುಂದೆ ಓದಿ…..

Advertisement
ಇಂದು ಎಲೆಚುಕ್ಕಿ ರೋಗದ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು ಹೆಚ್ಚಿನದೇನೂ ಮಾಡಲು ಇಲ್ಲ. ವಿಜ್ಞಾನಿಗಳು ಈಗಾಗಲೇ ಅಧ್ಯಯನ ನಡೆಸಿ ಪರಿಹಾರವನ್ನೂ ಹೇಳಿದ್ದಾರೆ. ಅದನ್ನು ಜಾರಿಗೊಳಿಸಬೇಕಾದ್ದು ಕಾರ್ಯಾಂಗ. ಈಗ ವಿಜ್ಞಾನಿಗಳ ಪಾತ್ರವೂ ಇಲ್ಲ. ಸಾಮೂಹಿಕ ಸಿಂಪಡಣಾ ವ್ಯವಸ್ಥೆಯನ್ನು ಕಾರ್ಯಾಂಗ ಮಾಡಬೇಕು. ಅದು ಆಗದೇ ಇರುವುದು ಕಾರಣ, ಇದರ ಅನುಷ್ಟಾನ ಹೇಗೆ ಎಂಬುದು ಮಾತ್ರಾ ಇರುವುದು.
ಆದರೆ, ಹಳದಿ ಎಲೆರೋಗ ವ್ಯವಸ್ಥೆಯ ವಿಫಲತೆ. ಇಂತಹ ಸಮಸ್ಯೆಗಳಲ್ಲಿ ದೀರ್ಘವಾದ ಅಧ್ಯಯನ, ಸಂಶೋಧನೆ ಅಗತ್ಯ ಇದೆ. ಇಲ್ಲಿ ಈ ಬಗ್ಗೆ ನಿರ್ಧಾರದ ಹಂತದಲ್ಲಿ ವೈಜ್ಞಾನಿಕ ತಿಳುವಳಿಕೆ ಕೂಡಾ ಬೇಕು. ಈಗ ಅಡಿಕೆ ಹಳದಿ ಎಲೆರೋಗದ ವಿಷಯದಲ್ಲೂ ಎಲ್ಲಾ ಪ್ರಯತ್ನವೂ ವೈಫಲ್ಯ ಕಾಣಲು ಕಾರಣವೂ ಇದೇ. ನಿರ್ಧಾರ ಹಂತದಲ್ಲಿ ಸೋಲುತ್ತದೆ.
ರಮೇಶ್‌ ದೇಲಂಪಾಡಿ
ಸರ್ಕಾರವು ತನ್ನದೇ ಸಂಸ್ಥೆಗಳನ್ನು ನಂಬಬೇಕು. ನಮ್ಮ ಪ್ರತಿನಿಧಿಗಳಿಗೆ ಇಲ್ಲೇ ನಂಬಿಕೆ ಇಲ್ಲ, ಕೇಳಿದರೆ ವಿಜ್ಞಾನಿಗಳು, ವಿದೇಶಗಳ ಸಂಸ್ಥೆ ಇತ್ಯಾದಿ ಗಳ ಬಗ್ಗೆ ಜನಪ್ರತಿನಿಧಿಗಳೇ ಮಾತನಾಡುತ್ತಾರೆ. ಪ್ರಶ್ನೆ ಮಾಡಿದವರ ಬಾಯಿ ಮುಚ್ಚಿಸುವ ಕೆಲಸ ಆಗುತ್ತದೆಯಷ್ಟೆ. ಕಳೆದ ಸಲವೂ ಹಾಗೇಯೇ ಆಗಿದೆ. ವಿದೇಶ ಎಂದೆಲ್ಲಾ ಹೇಳಿದ ಬಳಿಕ ಒಂದು ಹೆಜ್ಜೆಯೂ ಮುಂದೆ ಇಡಲಿಲ್ಲ. ಹೀಗಾಗಿ ವಿಫಲವಾಗಲು ಕಾರಣವಾಗುತ್ತದೆ. ಮುಂದೆ ಬರುವ ಪ್ರತಿನಿಧಿಗಳು ಇದನ್ನೆಲ್ಲಾ ಸರಿ ಮಾಡಬೇಕಿದೆ.
ಹಳದಿ ಎಲೆರೋಗ ಒಂದಷ್ಟು ಕಡೆ ವ್ಯಾಪಿಸಿದೆ. ವಿಜ್ಞಾನಿಗಳಲ್ಲೂ ಅಭಿಪ್ರಾಯ ವ್ಯತ್ಯಾಸ ಇದೆ, ಕೃಷಿಕರಲ್ಲೂ ಇದೆ. ಆದರೆ ಜನಪ್ರತಿನಿಧಿಗಳಿಗೆ ಈ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಇಲ್ಲ. ಇದನ್ನು ತಿಳಿದುಕೊಳ್ಳುವ ಕೆಲಸ ಆಗಬೇಕು.
ಹಳದಿ ಎಲೆರೋಗಕ್ಕೆ ಶತಮಾನದ ಹಿನ್ನೆಲೆ ಇದೆ. ೧೦೦ ವರ್ಷದಲ್ಲಿ ಆಗದ್ದು ಈಗ ಆಗುತ್ತದಾ ಎನ್ನುವುದು ಕೃಷಿಕರ ಪ್ರಶ್ನೆ.  ಇದು  ಮೂಲಭೂತ ಸಮಸ್ಯೆಯ ಪ್ರಶ್ನೆ. ಹೀಗಾಗಿ ಈಗ ತಮಗೆ ಏನು ಲಾಭ ಮಾಡಬಹುದು ಎನ್ನುವುದು ಕೃಷಿಕರ ದೃಷ್ಟಿ. ಅದು ಕೂಡಾ ಸರಿಯಾದ್ದೇ.
ಅದಕ್ಕಾಗಿ ಹಳದಿ ಎಲೆರೋಗವೇ ಪರಿಹಾರವಾದರೆ ಸಂಪೂರ್ಣ ಪರಿಹಾರ ಮತ್ತು ಶಾಶ್ವತ ಪರಿಹಾರ  ಎನ್ನುವುದು ಕೃಷಿಕರಿಗೆ ಅರ್ಥವಾಗಬೇಕು. ಇದಕ್ಕಾಗಿ ಅಡಿಕೆ ಬೆಳೆಗಾರ ಜಾಗೃತವಾಗಬೇಕು. ಇದುವರೆಗಿನ ಸಮಸ್ಯೆಯೂ ಆದದ್ದು ಅದೇ, ಅಡಿಕೆ ಬೆಳೆಗಾರ ಓಟ್‌ ಬ್ಯಾಂಕ್‌ ಆಗಿಲ್ಲ. ಓಟ್‌ ಬ್ಯಾಂಕ್‌ ಆಗಬೇಕು.
ಈಗ ಸಂಶೋಧನೆ ಮೇಲೆ ಒತ್ತಡ ಬರಬೇಕು. ಇಲ್ಲದೇ ಇದ್ದರೆ ಸರ್ಕಾರಗಳು ಆ ತಕ್ಷಣದ ಪರಿಹಾರಕ್ಕೆ ಮಾತ್ರಾ ಯೋಚಿಸುತ್ತದೆ. ಕೃಷಿಕೆಗೆ ಸಾಲಮನ್ನಾ ಇರಲಿ, ಅದು ತಕ್ಷಣಕ್ಕೆ ಸಿಗಬೇಕಾದ ನೆರವು. ಅದು ಸಹಜವಾಗಿಯೇ ಬೇಕಾಗಿದೆ. ಸಂಶೋಧನೆ ದೀರ್ಘ ಕಾಲದ್ದು. ಹೀಗಾಗಿ ಅದು ತಕ್ಷಣವೇ ಆಗದು. ಅಡಿಕೆ ದೀರ್ಘಾವಧಿ ಕೃಷಿ. ಹೀಗಾಗಿ ತಕ್ಷಣವೇ ಇಲ್ಲಿ ಪರಿಹಾರವೂ ಇಲ್ಲಿ ಅಸಾಧ್ಯ.
ಕೃಷಿಕರಿಗೆ ತಕ್ಷಣದ ಅವಶ್ಯತೆ ಸಾಲಮನ್ನಾ ಬೇಕಿದೆ. ಅದು ತಪ್ಪಲ್ಲ, ಅದೂ ಬಹುಮುಖ್ಯ, ಅದರ ಜೊತೆಗೆ ಸಂಶೋಧನೆಯ ಬೇಡಿಕೆ ನಿಲ್ಲಿಸಬಾರದು. ಸಂಶೋಧನೆ ಅಂದರೆ ಯಾವ ರೀತಿಯ ಸಂಶೋಧನೆ ಎಂಬುದೂ ಮುಖ್ಯ. ಸಂಶೋಧನೆ ಎಂಬುದು ದೀರ್ಘಾವಧಿ ಯೋಜನೆ ಬೇಕು, ಅಂತಹ ವಿಜ್ಞಾನಿಗಳನ್ನು ನಿಯೋಜನೆ ಮಾಡಬೇಕು. ಇದಕ್ಕೆ ಪೂರಕವಾದ ಕೆಲಸ ಸರ್ಕಾರ ಮಾಡಬೇಕು. ಗೆದ್ದು ಬರುವ ಜನಪ್ರತಿನಿಧಿ ಮಾಡಬೇಕು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |

ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…

10 hours ago

ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649

11 hours ago

ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ

ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

19 hours ago

ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ

ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…

1 day ago

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |

ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…

1 day ago

ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 day ago