ಹುರಿದ ಅಡಿಕೆ ಆಮದಿಗೆ ಪ್ರಯತ್ನ…! | ಕಳ್ಳದಾರಿಗೆ ಹಲವು ಮಾರ್ಗಗಳು | ತಡೆಗೆ ಮುಂದುವರಿದ ಪ್ರಯತ್ನ |

November 27, 2023
7:00 PM
ಅಡಿಕೆ ಮಾರುಕಟ್ಟೆಗೆ ಇದೀಗ ಹುರಿದ ಅಡಿಕೆಯ ಸಮಸ್ಯೆ. ಹುರಿದ ಅಡಿಕೆಯ ಮೇಲೆ ಕನಿಷ್ಟ ಆಮದು ಸುಂಕ ನಿಗದಿಯಾಗದ ಕಾರಣದಿಂದ ಹುರಿದ ಅಡಿಕೆ ಹೆಸರಿನಲ್ಲಿ ಅಡಿಕೆ ಆಮದಿಗೆ ಪ್ರಯತ್ನ ನಡೆಯುತ್ತಿದೆ.

ಎಲ್ಲಾ ರೀತಿಯಿಂದಲೂ ಅಡಿಕೆ ಆಮದು ಪ್ರಯತ್ನ ನಡೆಯಿತು. ಇದೀಗ ಹುರಿದ ಅಡಿಕೆಯನ್ನು ಆಮದು ಮಾಡುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಸ್ಯಾಂಪಲ್‌ ಅಡಿಕೆ ಮಹಾರಾಷ್ಟ್ರದ ಅಡಿಕೆ ಮಾರುಕಟ್ಟೆಯ ಕೆಲವು ಕಡೆ ಲಭ್ಯವಾಗಿದೆ.  ಈ ಬಗ್ಗೆ ಇದೀಗ ಗಂಭೀರವಾಗಿ ಹೆಜ್ಜೆ ಇಡಬೇಕಾಗಿದ್ದು, ಈ ಅಡಿಕೆ ಆಮದು ತಡೆಗೆ ತಕ್ಷಣ ಪ್ರಯತ್ನ ನಡೆಯಬೇಕಿದೆ.

Advertisement
Advertisement

ಅಡಿಕೆ ಮಾರುಕಟ್ಟೆಯನ್ನು ಅಸ್ಥಿರ ಮಾಡುವ ಹಲವು ಪ್ರಯತ್ನ ಕಳೆದ ಕೆಲವು ಸಮಯಗಳಿಂದ ನಡೆಯುತ್ತಿದೆ. ಕಡಿಮೆ ಬೆಲೆಗೆ ಬರ್ಮಾ ಅಡಿಕೆ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಮೂಲಕ ಕಳ್ಳದಾರಿಯಲ್ಲಿ ಆಮದು ಮಾಡುವುದು  ಸೇರಿದಂತೆ ಶ್ರೀಲಂಕಾ ಮೂಲಕವೂ ಅಡಿಕೆ ಆಮದು ನಡೆಯುತ್ತಿತ್ತು. ಇದೆಲ್ಲಾ ತಡೆಗೆ ಹಲವು ಪ್ರಯತ್ನ ನಡೆದಿತ್ತು. ಹೀಗಾಗಿ ಅಡಿಕೆ ಧಾರಣೆ ಕುಸಿತವಾಗದಂತೆ ತಡೆ ಹಿಡಿಯಲಾಗಿತ್ತು. ಇದರ ಹಿಂದೆ ಕ್ಯಾಂಪ್ಕೋ ಸಹಿತ ಸಹಕಾರಿ ಸಂಸ್ಥೆಗಳು ಪ್ರಯತ್ನ ಮಾಡಿದ್ದವು.

ಇದೀಗ ಎಲ್ಲಾ ಪ್ರಯತ್ನದ ಬಳಿಕ ಅಡಿಕೆಯನ್ನು ಇನ್ನೊಂದು ದಾರಿಯಲ್ಲಿ ತರುವ ಪ್ರಯತ್ನ ನಡೆಯುತ್ತಿದೆ. ಅಡಿಕೆಯನ್ನು ಹುರಿದು ಅಂದರೆ ಪ್ರೈಡ್‌ ಅಡಿಕೆ ಎಂಬ ವಿಭಾಗದಲ್ಲಿ ಅಡಿಕೆ ಸಾಗಾಟ ಮಾಡುವ ಪ್ರಯತ್ನ ನಡೆದಿದೆ. ಇದಕ್ಕೆ ಆಮದು ಸುಂಕ ವಿಧಿಸಲು ತಾಂತ್ರಿಕವಾಗಿ ಈಗ ಸಾಧ್ಯವಾಗುತ್ತಿಲ್ಲ. ಒಣಗಿದ ಅಥವಾ ಡ್ರೈ ಎಂಬ ಅಡಿಕೆ ವಿಭಾಗಕ್ಕೆ ತೆರಿಗೆ ವಿಧಿಸಲು ಸಾಧ್ಯವಿಲ್ಲ. ಶೇ.30 ರಷ್ಟು ಮಾತ್ರವೇ ಸುಂಕ ವಿಧಿಸಲು ಸಾಧ್ಯವಿದೆ. ಈ ದಾರಿಯ ಮೂಲಕ ಅಡಿಕೆ  ಸಾಗಾಟ ನಡೆಸಲು ಈಚೆಗೆ ವ್ಯಾಪಾರಿಗಳು ಹಾಗೂ ಆಮದುದಾರರು ಮಾತುಕತೆ ನಡೆಸಿದ ಸಾರಾಂಶ ಬಹಿರಂಗಗೊಂಡಿತ್ತು.

 

Advertisement

ಈಗಾಗಲೇ ಅಡಿಕೆಯ ಸ್ಯಾಂಪಲ್‌ ಕಳುಹಿಸಿ ಪ್ರಯತ್ನ ನಡೆಸಲಾಗಿದೆ. ಮುಂದೆ 20 ಕಂಟೇನರಗಳ ಸಾಗಾಟಕ್ಕೆ ಸಿದ್ಧತೆ ನಡೆಯುತ್ತಿದೆ.‌ ಇದನ್ನು ಹುರಿದ ಅಡಿಕೆ ಎಂದು ಘೋಷಿಸಲಾಗಿದೆ. ಕಸ್ಟಮ್ಸ್ ಪ್ರಕಾರ ಅಡಿಕೆಯನ್ನು ಹುರಿದ ಅಡಿಕೆಯಾಗಿ ಆಮದು ಮಾಡಿಕೊಂಡರೆ ಆಮದು ಸುಂಕ ಅಥವಾ ಕನಿಷ್ಟ ಆಮದು ಸುಂಕ ಅನ್ವಯಿಸುವುದಿಲ್ಲ. ಅಥವಾ ಸುಂಕ ಇದ್ದರೂ ತೀರಾ ಕಡಿಮೆ ಇರುತ್ತದೆ. ಹೀಗಾಗಿ ಈ ಲಾಭವನ್ನು ಆಮದುದಾರರು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕದ ಬಂದ ಅಡಿಕೆಯನ್ನು ಇಲ್ಲಿನ ಅಡಿಕೆಯ ಜೊತೆ ಬೆರೆಸಿ ಮಾರಾಟ ಮಾಡುವ ಪ್ರಯತ್ನ ಇದರ ಹಿಂದೆ ಇದೆ. ಈ ಬಗ್ಗೆ ಈಗ ಕಸ್ಟಮ್ಸ್‌ ಅಧಿಕಾರಿಗಳು ಗಮನಿಸಿದ್ದಾರೆ.

ಈ ರೀತಿಯಾಗಿ ಅಡಿಕೆ ಸಾಗಾಣಿಕೆ ಬಗ್ಗೆಯೂ ಆಮದುದಾರರು ದಾರಿಯ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂಬುದು ಬಹಿರಂಗವಾಗಿದೆ. ಈಗಾಗಲೇ ಕೊಲೊಂಬೋ ದಾರಿಯಾಗಿ ಅಡಿಕೆ ಸಾಗಾಟ ಕಷ್ಟ ಇದೆ. ಆದರೆ ಬಾಂಗ್ಲಾದೇಶದ ಮೂಲಕ ಸಾಗಾಟ ಸಾಧ್ಯವಿದೆ ಎಂದು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.ಅಸ್ಸಾಂ ಗಡಿಭಾಗಕ್ಕೆ ಈ ಹುರಿದ ಅಡಿಕೆ ಬಂದ ಬಳಿಕ ಅಲ್ಲಿಂದ ಪ್ರತಿದಿನ  ರವಾನಿಸುವ ಬಗ್ಗೆ ಯೋಜನೆ ಹಾಕಲಾಗಿದೆ. ಹೀಗಾಗಿ ಈ ಮಾದರಿಯ ಅಡಿಕೆ ಇಲ್ಲಿನ ಕರಿಗೋಟು ಅಡಿಕೆ ಅಥವಾ ಕೆಂಪಡಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರ ಜೊತೆಗೆ ಮುಂದಿನ ದಿನಗಳಲ್ಲಿ ಹುರಿದ ಅಡಿಕೆಯ ಹೆಸರಿನಲ್ಲಿ ಚಾಲಿ ಅಡಿಕೆಯೂ ಬರುವ ಸಾಧ್ಯತೆ ಇದೆ.

ಇದಕ್ಕಾಗಿ ಈ ಕಳಪೆ ಗುಣಮಟ್ಟದ ಅಡಿಕೆ ತಡೆಗೆ ತಕ್ಷಣವೇ ಕ್ರಮವಾಗಬೇಕಿದೆ. ಈಗಾಗಲೇ ಈ ಮಾದರಿಯ ಸ್ಯಾಂಪಲ್‌ ಅಡಿಕೆಯು ಕೆಲವು ಕಡೆ ಲಭ್ಯವಾಗಿದೆ ಎನ್ನಲಾಗಿದೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ
May 22, 2025
10:48 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್
May 22, 2025
9:50 PM
by: The Rural Mirror ಸುದ್ದಿಜಾಲ
ರಾಜ್ಯದ ಜೇನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ
May 22, 2025
9:45 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group