ಎಲ್ಲಾ ರೀತಿಯಿಂದಲೂ ಅಡಿಕೆ ಆಮದು ಪ್ರಯತ್ನ ನಡೆಯಿತು. ಇದೀಗ ಹುರಿದ ಅಡಿಕೆಯನ್ನು ಆಮದು ಮಾಡುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಸ್ಯಾಂಪಲ್ ಅಡಿಕೆ ಮಹಾರಾಷ್ಟ್ರದ ಅಡಿಕೆ ಮಾರುಕಟ್ಟೆಯ ಕೆಲವು ಕಡೆ ಲಭ್ಯವಾಗಿದೆ. ಈ ಬಗ್ಗೆ ಇದೀಗ ಗಂಭೀರವಾಗಿ ಹೆಜ್ಜೆ ಇಡಬೇಕಾಗಿದ್ದು, ಈ ಅಡಿಕೆ ಆಮದು ತಡೆಗೆ ತಕ್ಷಣ ಪ್ರಯತ್ನ ನಡೆಯಬೇಕಿದೆ.
ಅಡಿಕೆ ಮಾರುಕಟ್ಟೆಯನ್ನು ಅಸ್ಥಿರ ಮಾಡುವ ಹಲವು ಪ್ರಯತ್ನ ಕಳೆದ ಕೆಲವು ಸಮಯಗಳಿಂದ ನಡೆಯುತ್ತಿದೆ. ಕಡಿಮೆ ಬೆಲೆಗೆ ಬರ್ಮಾ ಅಡಿಕೆ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಮೂಲಕ ಕಳ್ಳದಾರಿಯಲ್ಲಿ ಆಮದು ಮಾಡುವುದು ಸೇರಿದಂತೆ ಶ್ರೀಲಂಕಾ ಮೂಲಕವೂ ಅಡಿಕೆ ಆಮದು ನಡೆಯುತ್ತಿತ್ತು. ಇದೆಲ್ಲಾ ತಡೆಗೆ ಹಲವು ಪ್ರಯತ್ನ ನಡೆದಿತ್ತು. ಹೀಗಾಗಿ ಅಡಿಕೆ ಧಾರಣೆ ಕುಸಿತವಾಗದಂತೆ ತಡೆ ಹಿಡಿಯಲಾಗಿತ್ತು. ಇದರ ಹಿಂದೆ ಕ್ಯಾಂಪ್ಕೋ ಸಹಿತ ಸಹಕಾರಿ ಸಂಸ್ಥೆಗಳು ಪ್ರಯತ್ನ ಮಾಡಿದ್ದವು.
ಇದೀಗ ಎಲ್ಲಾ ಪ್ರಯತ್ನದ ಬಳಿಕ ಅಡಿಕೆಯನ್ನು ಇನ್ನೊಂದು ದಾರಿಯಲ್ಲಿ ತರುವ ಪ್ರಯತ್ನ ನಡೆಯುತ್ತಿದೆ. ಅಡಿಕೆಯನ್ನು ಹುರಿದು ಅಂದರೆ ಪ್ರೈಡ್ ಅಡಿಕೆ ಎಂಬ ವಿಭಾಗದಲ್ಲಿ ಅಡಿಕೆ ಸಾಗಾಟ ಮಾಡುವ ಪ್ರಯತ್ನ ನಡೆದಿದೆ. ಇದಕ್ಕೆ ಆಮದು ಸುಂಕ ವಿಧಿಸಲು ತಾಂತ್ರಿಕವಾಗಿ ಈಗ ಸಾಧ್ಯವಾಗುತ್ತಿಲ್ಲ. ಒಣಗಿದ ಅಥವಾ ಡ್ರೈ ಎಂಬ ಅಡಿಕೆ ವಿಭಾಗಕ್ಕೆ ತೆರಿಗೆ ವಿಧಿಸಲು ಸಾಧ್ಯವಿಲ್ಲ. ಶೇ.30 ರಷ್ಟು ಮಾತ್ರವೇ ಸುಂಕ ವಿಧಿಸಲು ಸಾಧ್ಯವಿದೆ. ಈ ದಾರಿಯ ಮೂಲಕ ಅಡಿಕೆ ಸಾಗಾಟ ನಡೆಸಲು ಈಚೆಗೆ ವ್ಯಾಪಾರಿಗಳು ಹಾಗೂ ಆಮದುದಾರರು ಮಾತುಕತೆ ನಡೆಸಿದ ಸಾರಾಂಶ ಬಹಿರಂಗಗೊಂಡಿತ್ತು.
ಈಗಾಗಲೇ ಅಡಿಕೆಯ ಸ್ಯಾಂಪಲ್ ಕಳುಹಿಸಿ ಪ್ರಯತ್ನ ನಡೆಸಲಾಗಿದೆ. ಮುಂದೆ 20 ಕಂಟೇನರಗಳ ಸಾಗಾಟಕ್ಕೆ ಸಿದ್ಧತೆ ನಡೆಯುತ್ತಿದೆ. ಇದನ್ನು ಹುರಿದ ಅಡಿಕೆ ಎಂದು ಘೋಷಿಸಲಾಗಿದೆ. ಕಸ್ಟಮ್ಸ್ ಪ್ರಕಾರ ಅಡಿಕೆಯನ್ನು ಹುರಿದ ಅಡಿಕೆಯಾಗಿ ಆಮದು ಮಾಡಿಕೊಂಡರೆ ಆಮದು ಸುಂಕ ಅಥವಾ ಕನಿಷ್ಟ ಆಮದು ಸುಂಕ ಅನ್ವಯಿಸುವುದಿಲ್ಲ. ಅಥವಾ ಸುಂಕ ಇದ್ದರೂ ತೀರಾ ಕಡಿಮೆ ಇರುತ್ತದೆ. ಹೀಗಾಗಿ ಈ ಲಾಭವನ್ನು ಆಮದುದಾರರು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕದ ಬಂದ ಅಡಿಕೆಯನ್ನು ಇಲ್ಲಿನ ಅಡಿಕೆಯ ಜೊತೆ ಬೆರೆಸಿ ಮಾರಾಟ ಮಾಡುವ ಪ್ರಯತ್ನ ಇದರ ಹಿಂದೆ ಇದೆ. ಈ ಬಗ್ಗೆ ಈಗ ಕಸ್ಟಮ್ಸ್ ಅಧಿಕಾರಿಗಳು ಗಮನಿಸಿದ್ದಾರೆ.
ಈ ರೀತಿಯಾಗಿ ಅಡಿಕೆ ಸಾಗಾಣಿಕೆ ಬಗ್ಗೆಯೂ ಆಮದುದಾರರು ದಾರಿಯ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂಬುದು ಬಹಿರಂಗವಾಗಿದೆ. ಈಗಾಗಲೇ ಕೊಲೊಂಬೋ ದಾರಿಯಾಗಿ ಅಡಿಕೆ ಸಾಗಾಟ ಕಷ್ಟ ಇದೆ. ಆದರೆ ಬಾಂಗ್ಲಾದೇಶದ ಮೂಲಕ ಸಾಗಾಟ ಸಾಧ್ಯವಿದೆ ಎಂದು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.ಅಸ್ಸಾಂ ಗಡಿಭಾಗಕ್ಕೆ ಈ ಹುರಿದ ಅಡಿಕೆ ಬಂದ ಬಳಿಕ ಅಲ್ಲಿಂದ ಪ್ರತಿದಿನ ರವಾನಿಸುವ ಬಗ್ಗೆ ಯೋಜನೆ ಹಾಕಲಾಗಿದೆ. ಹೀಗಾಗಿ ಈ ಮಾದರಿಯ ಅಡಿಕೆ ಇಲ್ಲಿನ ಕರಿಗೋಟು ಅಡಿಕೆ ಅಥವಾ ಕೆಂಪಡಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರ ಜೊತೆಗೆ ಮುಂದಿನ ದಿನಗಳಲ್ಲಿ ಹುರಿದ ಅಡಿಕೆಯ ಹೆಸರಿನಲ್ಲಿ ಚಾಲಿ ಅಡಿಕೆಯೂ ಬರುವ ಸಾಧ್ಯತೆ ಇದೆ.
ಇದಕ್ಕಾಗಿ ಈ ಕಳಪೆ ಗುಣಮಟ್ಟದ ಅಡಿಕೆ ತಡೆಗೆ ತಕ್ಷಣವೇ ಕ್ರಮವಾಗಬೇಕಿದೆ. ಈಗಾಗಲೇ ಈ ಮಾದರಿಯ ಸ್ಯಾಂಪಲ್ ಅಡಿಕೆಯು ಕೆಲವು ಕಡೆ ಲಭ್ಯವಾಗಿದೆ ಎನ್ನಲಾಗಿದೆ.
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…
ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…
ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ ಜೂನ್ 29 ರಿಂದ, …
ಡೀಸೆಲ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು,…