ಕ್ಯಾನ್ಸರ್ ಕಣಗಳನ್ನು ತಟಸ್ಥಗೊಳಿಸುವ ಅಂಶ ಅಡಿಕೆಯಲ್ಲಿದೆ. ಅಡಿಕೆ ಸಾರಗಳು ಕ್ಯಾನ್ಸರ್ ಕೋಶಗಳ ವೃದ್ಧಿ, ಚಲನೆ ಮತ್ತು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಇದು ಸಾಮಾನ್ಯ ಕೋಶಗಳಿಗೆ ಹಾನಿ ಉಂಟು ಮಾಡುವುದಿಲ್ಲ. ಸಾಂಪ್ರದಾಯಿಕವಾಗಿ ಸಂಸ್ಕರಿಸಿದ ಅಡಕೆಯನ್ನು ಬಳಸಿದರೆ ಆರೋಗ್ಯದಾಯಕ ಲಾಭಗಳಿದೆ ಎಂದು ಯೆನಪೊಯ ವಿಶ್ವವಿದ್ಯಾಲಯದ ಸಂಶೋಧಕ ತಂಡವು ವರದಿಯನ್ನು ನೀಡಿದೆ.
ಹಲವು ದಶಕಗಳಿಂದ ಅಡಿಕೆಯನ್ನು ಮೌಖಿಕ ಕ್ಯಾನ್ಸರ್ ಗೆ ಕಾರಣ ಎಂದು ಆರೋಪಿಸಲಾಗುತ್ತಿತ್ತು. ಆದರೆ ಈ ಸಂಶೋಧನೆಯು ಆ ಆರೋಪಗಳು ಸಂಪೂರ್ಣ ತಪ್ಪು ಎಂಬುದನ್ನು ವೈಜ್ಷಾನಿಕವಾಗಿ ಸಾಬೀತುಪಡಿಸಿತು. ಅಡಿಕೆ ಏಕಾಏಕಿ ಕ್ಯಾನ್ಸರ್ ಉಂಟುಮಾಡುವುದಿಲ್ಲ ಬದಲಿಗೆ ಸಾಂಪ್ರದಾಯಕವಾಗಿ ಸೇವಿಸಿದಾದ ಕ್ಯಾನ್ಸರ್ ತಡೆಗೆ ಸಹಾಯ ಮಾಡುತ್ತದೆ ಎಂಬುದು ಈಗ ವೈಜ್ಞಾನಿಕ ಸತ್ಯವಾಗಿದೆ.
ಅಡಿಕೆ ಕ್ಯಾನ್ಸರ್ ಕಾರಕ ಹೌದ ಅಲ್ಲವೇ ಎಂಬುದನ್ನು ದೃಢಡಿಸುವುದಕ್ಕಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞ ಸಂಶೋಧಕರ ತಂಡ ಮೂರು ವರ್ಷ ಹಿಂದೆಯೇ ಅಧ್ಯಯನ ಶುರುಮಾಡಿದೆ. ಇದಕ್ಕಾಗಿ ಕ್ಯಾಂಪ್ಕೊ , ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ನಿಟ್ಟೆ ವಿವಿ ನಡುವೆ ತಿಳುವಳಿಕೆ ಒಪ್ಪಂದ ಏರ್ಪಟ್ಟಿತು.
ಅಡಿಕೆ ಸಾರದಿಂದ ಝೀಬ್ರಾ ಮೀನಿನ ಮೇಲೆ ಪರಿಣಾಮ ಏನು, ಅಡಿಕೆ ಹಣ್ಣಿನ ನೊಣದ ಮೇಲೆ ಏನು ಪರಿಣಾಮ, ಅಡಿಕೆ ರಸದಿಂದ ಕ್ಯಾನ್ಸರ್ ಕಣಗಳ ಮೇಳಿನ ಪರಿಣಾಮ, ಅಡಿಕೆ ಜಗಿಯುವವರ ವೈಜ್ಞಾನಿಕ ಸಮೀಕ್ಷೆ- ಹೀಗೆ ನಾಲ್ಕು ಹಂತದ ಅಧ್ಯಯನ ನಡೆಸುವುದಕ್ಕೆ ಒಪ್ಪಂದ ಆಗಿತ್ತು. ಈ ಪೈಕಿ 3 ವಿಭಾಗಗಳ ಸಂಶೋಧನೆಗಳನ್ನು ನಿಟ್ಟೆ ವಿ.ವಿ.ಯ ವಿಜ್ಞಾನಿ ಪ್ರೊ.ಇಡ್ಯಾ ಕರುಣಾಸಾಗರ್ ಮತ್ತವರ ತಂಡ ಪೂರ್ಣಗೊಳಿಸಿದೆ. ಇನ್ನು ಇದು ಅಂತಾರಾಷ್ಟ್ರೀಯ ಜರ್ನಲ್ ನಲ್ಲಿ ಪ್ರಕಟವಾಗಬೇಕಷ್ಟೇ.
ಅಡಿಕೆ ಕ್ಯಾನ್ಸರ್ ಕಾರಕ ಎಂಬ ಆರೋಪ ಇರುವ ಕಾರಣ, ಅಡಿಕೆಯ ಸಾರವು ಕ್ಯಾನ್ಸರ್ ಕಣಗಳ ಮೇಲೆ ಯಾವು ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯಲು ಪ್ರತ್ಯೇಕ ಅಧ್ಯಯನ ನಡೆಸಲಾಗಿತ್ತು. ನಿಟ್ಟೆ ವಿವಿಯ ಪ್ರಯೋಗಾಲಯದ ಪೆಟ್ರಿಪ್ಲೇಟ್ ಗಳಲ್ಲಿ ಕ್ಯಾನ್ಸರ್ ಕಣಗಳನ್ನು ಬೆಳೆಸಿ, ಅವುಗಳ ಮೇಲೆ ಅಡಿಕೆಯ ಸಾರವನ್ನು ಪ್ರಯೋಗಿಸಲಾಗಿದೆ. ಆಗ ಅದು ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತಿರುವುದನ್ನು ತಜ್ಞರು ಗುರುತಿಸಿದ್ದಾರೆ. ಇದನ್ನು ಅಧ್ಯಯನ ವರದಿಯಲ್ಲಿ ಉಲ್ಲೇಖಿಸುವುದಕ್ಕೆ ಸಂಶೋಧಕರು ಮುಂದಾಗಿದ್ದಾರೆ.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…