ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಈಗ ವೈಜ್ಞಾನಿಕವಾಗಿ ಸಾಬೀತು ಮಾಡಬೇಕಾದ ಅನಿವಾರ್ಯತೆ ಬಂದಿದೆ. ಇದರ ಜೊತೆಗೆ ಅಡಿಕೆ ಬೆಳೆಗಾರರು ವಿವಿಧ ಸಂಕಷ್ಟ ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಬೆಳೆಗಾರರು ಸಂಘಟಿತರಾಗಬೇಕು. ಆಗ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಹೇಳಿದರು.
ಅವರು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದಿಂದ ಹಮ್ಮಿಕೊಂಡಿದ್ದ ಅಡಿಕೆ ಬೆಳೆಗಾರರ ಸಮಾವೇಶ ಹಾಗೂ ಸಂಘದ ಐವತ್ತರ ಈ ಹೊತ್ತು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಅಡಿಕೆ ಸೇವನೆ ಆರೋಗ್ಯಕ್ಕೆ ಪೂರಕ ಎಂಬುದು ಸಾವಿರಾರು ವರ್ಷಗಳಿಂದ ಸಾಬೀತಾಗಿದ್ದರೂ ಸೇವನೆ ಹಾನಿಕಾರಕ ಎಂದು ಗುಲ್ಲು ಎದ್ದಿರುವುದು ದುರದೃಷ್ಟಕರ.ಈಗ ಅಡಿಕೆ ಹಾಳೆಯೂ ಕ್ಯಾನ್ಸರ್ ಕಾರಕ ಎಂದು ಅಮೆರಿಕಾ ನೀಡಿದ ಹೇಳಿಕೆಯಿಂದ ಅಡಿಕೆ ತಟ್ಟೆ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿ ವರ್ಷಗಳೇ ಕಳೆದಿವೆ. ಇದೀಗ ಈ ವಿಷಯಕ್ಕೆ ತಾರ್ಕಿಕ ಅಂತ್ಯ ದೊರಕಿಸುವ ಕಾಲ ಈಗ ಸನ್ನಿಹಿತವಾಗಿದೆ ಎಂದರು. ಇದರ ಜೊತೆಗೆ ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ ಸೇರಿದಂತೆ ಹಲವು ರೋಗಗಳು ತಗಲುತ್ತಿವೆ. ಈ ರೋಗಗಳ ಬಗ್ಗೆ ಇಂದಿಗೂ ಪರಿಹಾರ ಕಾಣಲು ಸಾಧ್ಯವಾಗಿಲ್ಲ. ಅದಕ್ಕಾಗಿ ಅಡಿಕೆ ಬೆಳೆಗಾರರೆಲ್ಲರೂ ಸಂಘಟಿತರಾಗಬೇಕಾದ ಅನಿವಾರ್ಯತೆ ಇದೆ ಆಗ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಹೇಳಿದರು.
ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಮಾವೇಶದ ಸಹ ಸಂಚಾಲಕ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎನ್ನುವುದನ್ನು ಸಾಭೀತುಪಡಿಸುವಂತಹ ಸವಾಲು ನಮ್ಮ ಮುಂದಿದೆ. ಈ ಕುರಿತಂತೆ 16 ಸಂಸ್ಥೆಗಳಿಂದ ಸಂಶೋಧನೆ ನಡೆಯುತ್ತಿದೆ. ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎನ್ನುವ ಬಗ್ಗೆ ಶೀಘ್ರವೇ ಉತ್ತರ ಸಿಗಲಿದೆ ಎಂದರು.
ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವಾ ಶಂ ರಾಮಚಂದ್ರ ಭಟ್ ಮಾತನಾಡಿ, ಸಾಗರದಲ್ಲಿ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶ ಯಶಸ್ಸಿಗೆ ಎಲ್ಲರ ಸಹಕಾರ ಕಾರಣವಾಯಿತು. ಅಡಿಕೆ ಬೆಳೆಗಾರರು ಸಂಘಟಿತರಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ತೋಟಗಾರ್ ಸೊಸೈಟಿಯ ಅಧ್ಯಕ್ಷ ಕೆ ಸಿ ದೇವಪ್ಪ, ಹಿರಿಯ ಸಹಕಾರಿ ಧುರೀಣ ಯು ಎಚ್ ರಾಮಪ್ಪ, ಮಾ ವೆಂ ಸಾ ಪ್ರಸಾದ್ ಮೊದಲಾದವರಿದ್ದರು.
07.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
2047ರ ವೇಳೆಗೆ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ…
ತುಂಗ-ಭದ್ರಾ ಎರಡೂ ಜಲಾಶಯಗಳಿಂದ ನದಿಗೆ ಯಾವುದೇ ಕ್ಷಣದಲ್ಲಾದರೂ ೮೦ ಸಾವಿರಕ್ಕೂ ಅಧಿಕ ಕ್ಯೂಸೆಕ್…
ಇತ್ತೀಚಿನ ವಿಜ್ಞಾನ ಮತ್ತು ಹೊಸ ವಿಧಾನಗಳನ್ನು ಬಳಸಿಕೊಂಡು ಜಾಗತಿಕವಾಗಿ ವೇಗವಾಗಿ ಬೆಳೆಯುವ ಮರಗವನ್ನು…
ತನ್ನಲ್ಲಿರುವುದನ್ನು ಸಮ್ಮನಸ್ಸಿನಿಂದ ನೀಡುವುದು ದಾನ. ಪಡಕೊಂಡವನ ತೃಪ್ತಿಯು ದಾನಿಗೆ ಹಾರೈಕೆ. ಇಲ್ಲಿ ಪ್ರಚಾರದ…
ಚಂದನ್ ಕೆ ಪಿ, 8 ನೇ ತರಗತಿ, ರೋಟರಿ ಪ್ರೌಢಶಾಲೆ, ಪಡ್ಡಂಬೈಲು |…