ಮಲೆನಾಡು ಹಾಗೂ ಕರಾವಳಿ ಭಾಗದ ಕಡೆಗಳಲ್ಲಿ ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕಿ ರೋಗದ ಸಮಸ್ಯೆ ಕಂಡುಬಂದಿದ್ದು, ಇದರಿಂದಾಗಿ ರೈತರಿಗೆ ಹಲವು ಸಂಕಷ್ಟ ಎದುರಾಗಿದೆ. ಈ ವಿಚಾರದ ಬಗ್ಗೆ ಶುಕ್ರವಾರ ಸಚಿವರ ಜೊತೆಗೆ ಸಭೆ ನಡೆಯಿತು.
ಎಲೆಚುಕ್ಕಿ ರೋಗದಿಂದ ಉಂಟಾದ ಸಮಸ್ಯೆ ಹಾಗೂ ನಷ್ಟದ ಬಗ್ಗೆ ಸಮೀಕ್ಷೆ ನಡೆಸುವುದು ಹಾಗೆ ಅಡಿಕೆ ಬೆಳೆಗಾರರಿಗೆ ಉಚಿತ ಔಷಧ, ದೋಟಿ ನೀಡಲಾಗುವುದು. ಅಡಿಕೆಗೆ ಪರ್ಯಾಯವಾಗಿ ಇಲಾಖೆ ಗುರುತಿಸಿರುವ ಬೆಳೆಯನ್ನು ಬೆಳೆಯಲು ಅವಕಾಶ ಹಾಗೂ ರಿಯಾಯಿತಿ ಕಲ್ಪಿಸಿ , ನಿರ್ಧಾರ ರೈತರು ಕೈಗೊಳ್ಳಲು ತೀರ್ಮಾನಿಸಲಾಗಿದೆ. ಸರ್ಕಾರದಿಂದ ಯಾವ ರೀತಿಯಲ್ಲಿ ಅಡಿಕೆ ಬೆಳೆಗಾರರಿಗೆ ನೆರವು ಕಲ್ಪಿಸಬಹುದೆನ್ನುವ ಬಗ್ಗೆಯೂ ಸಿಎಂ ಜೊತೆ ಚರ್ಚಿಸಲು ನಿರ್ಧರಿಸಲಾಗಿದೆ.
ಈ ಸಂದರ್ಭದಲ್ಲಿ ಅಡಿಕೆ ಟಾಸ್ ಪೋರ್ಸ್ ಅಧ್ಯಕ್ಷ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ, ತೋಟಗಾರಿಕೆ ಸಚಿವ ಮುನಿರತ್ನ , ಮೀನುಗಾರಿಕೆ ಸಚಿವ ಎಸ್.ಅಂಗಾರ , ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಎಲೆ ಚುಕ್ಕಿ ರೋಗದಿಂದಾಗಿ ಮಲೆನಾಡು, ಕರಾವಳಿಯ ಜಿಲ್ಲೆಗಳ ಅಡಿಕೆ ತೋಟಗಳಲ್ಲಿ ಮರಗಳಿಗೆ ಹಾನಿಯಾಗುತ್ತಿದೆ. ಇದರಿಂದಾಗಿ ಬೆಳೆಗಾರರು ಆತಂಕಗೊಂಡಿದ್ದಾರೆ. ಈ ವರ್ಷ ಮಳೆಯೂ ಹೆಚ್ಚಾಗಿದ್ದು, ಕೊಳೆ ರೋಗ ಸಹ ಅಡಿಕೆಯನ್ನು ಕಾಡುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel