ಎಲೆಚುಕ್ಕಿ ರೋಗದ ಶಿಲೀಂದ್ರವು ರೂಪಾಂತರ ವೈರಸ್…‌ ? | ಇದು ಸಾಂಕ್ರಾಮಿಕ ಶಿಲೀಂಧ್ರ ತುರ್ತುಸ್ಥಿತಿ | ಔಷಧಿ ತಕ್ಷಣವೇ ಬೇಕಿದೆ… |

Advertisement
Advertisement
ಕೃಷಿಕ ಪ್ರಬಂಧ ಅಂಬುತೀರ್ಥ ಅವರು ಅಡಿಕೆ ಎಲೆಚುಕ್ಕಿ ರೋಗದ ಬಗ್ಗೆ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದಾರೆ. ಅದರ ಯಥಾವತ್ತಾದ ಬರಹ ಇಲ್ಲಿದೆ.

ಇವತ್ತು ತೀರ್ಥಹಳ್ಳಿ ತಾಲ್ಲೂಕಿನ ರಂಜದ ಕಟ್ಟೆ ಬಾಗದ ಅಡಿಕೆ ಬೆಳೆಗಾರರೊಬ್ಬರು ನನಗೆ ಕರೆ ಮಾಡಿ ತಮ್ಮ ತೋಟಕ್ಕೆ ವ್ಯಾಪಕವಾಗಿ ವೇಗವಾಗಿ ಹರಡುತ್ತಿರುವ ಎಲೆಚುಕ್ಕಿ ರೋಗದ ಬಗ್ಗೆ ದುಃಖ ಆತಂಕ ವ್ಯಕ್ತಪಡಿಸಿದರು.

Advertisement
ಅದು ತುಂಗಾ ನದಿಯ ತಟದ ತೋಟಗಳು. ಅಲ್ಲಿ ತುಂಗೆಯ ಎಂದೆಂದಿಗೂ ಬತ್ತದ ನೀರಾವರಿ ಸೌಲಭ್ಯದ ಅಡಿಕೆ ತೋಟಗಳು. ಆ ಬಾಗದಲ್ಲಿ ಬೇಸಿಗೆಯಲ್ಲಿ ಕರೆಂಟ್ ಇದ್ದಷ್ಟೂ ಕಾಲ ನೀರಿನ ಮೋಟಾರು ಆನ್ ನಲ್ಲಿದ್ದು ಅಡಿಕೆ ತೋಟದೊಳಗೆ ಮಳೆಗಾಲದ ವಾತಾವರಣ ಯಾವಾಗಲೂ ಇರುತ್ತದೆ ಎಂಬುದು ಗಮನಾರ್ಹ. ಇವತ್ತು ಅತಿ ಗಂಭೀರವಾಗಿ ಎಲೆಚುಕ್ಕಿ ರೋಗ ಕಾಣಿಸಿಕೊಳ್ಳುವ ಅಡಿಕೆ ತೋಟಗಳಲ್ಲೆವು ಒಂದೇ ಅತಿ ಮಳೆಯ ಜವಳಿನ ಕಾರಣ ಇಲ್ಲ ಅತಿ ನೀರಾವರಿಯ ಕಾರಣ .. ಈ ಎರಡು ಕಾರಣವಂತೂ ಎಲೆಚುಕ್ಕಿ ಶಿಲೀಂಧ್ರ ಗಳ ದಾಳಿ ಯ ತೋಟಗಳಲ್ಲಿ ಗಮನಾರ್ಹ ಸಂಗತಿಯಾಗಿದೆ.

Advertisement
Advertisement

ಅಲ್ಲಿನ ಬಹುತೇಕ ರೈತರು ತಜ್ಞರ ಸಲಹೆಯ ಎಲ್ಲಾ ಬಗೆಯ ಶಿಲೀಂಧ್ರ ನಾಶಕ ಔಷಧವನ್ನೂ ಅಡಿಕೆ ಮರಕ್ಕೆ ಸಿಂಪಡಣೆ ಮಾಡಿ ತಮ್ಮ ತೋಟಕ್ಕೆ ಆದ ಶಿಲೀಂದ್ರ ರೋಗ ನಿವಾರಣೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅವರು ” ವಾರದ ಹಿಂದೆ ಹತ್ತು ಅಡಿಕೆ ಮರದಲ್ಲಿ ಕಾಣಿಸಿಕೊಂಡ ಈ ರೋಗ ವಾರದ ಕೊನೆಯಲ್ಲಿ ಬಹುಪಾಲು ಅಡಿಕೆ ಮರಕ್ಕೆ ಹಬ್ಬಿದೆ…. ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ … ” ಎಂದರು. ಈ ವರ್ಷದ ಫಸಲು ಕೊಯ್ಲು ಮಾಡಬಹುದು ಆದರೆ ಪೂರ್ಣ ಶಿಲೀಂಧ್ರ ಪೀಡಿತವಾಗಿ ಹಣ್ಣಾದ ಅಡಿಕೆ ಮರದಲ್ಲಿ ಮುಂದಿನ ವರ್ಷ ಫಸಲು ಬರುತ್ತದಾ..?.

ಬಹುತೇಕ ರೋಗಪೀಡಿತ ಅಡಿಕೆ ಮರದಲ್ಲಿ ಮರದ ಸೋಗೆ ಮತ್ತೆ ಆರೋಗ್ಯ ಪೂರ್ಣ ವಾಗುವ ವರೆಗೂ ಅಡಿಕೆ ಮರದಲ್ಲಿ ಮತ್ತೆ ಸಿಂಗಾರ ಬರೋಲ್ಲ…!! ಕೊನೆಯಾಗೋಲ್ಲ….!!! ಒಂದು ಅಡಿಕೆ ಮರದಲ್ಲಿ ಕನಿಷ್ಠ ಹದಿನಾರು ಸೋಗೆ ಇರುತ್ತದೆ. ಸುಳಿ ಸೋಗೆಯಾಗಿ ಆ ಸೋಗೆಯ ಹಾಳೆಯೊಳಗೆ ಅಡಿಕೆ ಸಿಂಗಾರ ಮೂಡಬೇಕು.ಇದಕ್ಕೆ ಪತ್ರಹರಿತ್ತು ಅತಿ ಮುಖ್ಯ. ಸೋಗೆ ಆರೋಗ್ಯ ವಾಗಿಲ್ಲದೇ ಪತ್ರ ಹರಿತ್ತು ಎಲ್ಲಿಂದ ಬರುತ್ತದೆ..? ಅಡಿಕೆಯ ಸೃಷ್ಟಿ ಪ್ರಕೃಯಿಯೇ ಬಹುತೇಕ ಸ್ತಬ್ಧ ವಾಗುತ್ತದೆ. ಸಂಪೂರ್ಣ ಶಿಲೀಂಧ್ರ ಪೀಡಿತ ವಾದರೆ ಅಲ್ಲಿ ಮತ್ತೊಮ್ಮೆ ಹೊಸದಾಗಿ ಅಡಿಕೆ ಸಸಿ ನೆಟ್ಟು ಮರವಾಗಿ ಮತ್ತೆ ಫಸಲು ಪಡೆಯುವ ಪ್ರಕ್ರಿಯೆ ನೆಡಯಬೇಕಷ್ಟೇ…ಎಷ್ಟು ಜನ ರೈತರಿಗೆ ಹೊಸದಾಗಿ ಮತ್ತೆ ತೋಟ ಮಾಡುವ ಚೈತನ್ಯ ಇರುತ್ತದೆ…? ಸಾದ್ಯವಾ…?
ಇನ್ನೂ ಹತ್ತು ವರ್ಷಗಳ ನಂತರ ಕ್ಷಣ ಕ್ಷಣಕ್ಕೂ ಬದಲಾಗುವ ಸಾಮಾಜಿಕ ಅರ್ಥಿಕ ವ್ಯವಸ್ಥೆ ಯಲ್ಲಿ ಅಷ್ಟು ದೀರ್ಘಕಾಲಕ್ಕೆ ಅಡಿಕೆ ಯಂತಹ ದೀರ್ಘಕಾಲಿಕ ಬೆಳೆಯ ಬಗ್ಗೆ ಯೋಜಿಸಿ ಬಂಡವಾಳ ಹೂಡುವುದು ಬಹುತೇಕರಿಗೆ ಅಸಾಧ್ಯ…

ಮುಂದೇನೋ ಗೊತ್ತಿಲ್ಲ… ಮಲೆನಾಡು ಕರಾವಳಿ ಯ ಅಡಿಕೆ ಕೃಷಿಕರ ಜೀವನವೆಂಬೋ “ಒರಲೆ ಹುತ್ತ ಕ್ಕೆ ಭಗವಂತ ಈ ಶಿಲೀಂಧ್ರ ದ ಮೂಲಕ ಜಾಡಿಸಿ ಒದ್ದಿದ್ದಾನೆ”.ಒರಲೆ ಹುಳುಗಳಾದ ನಾವುಗಳು ಮತ್ತೆ ಅದು ಹೇಗೋ ಹುತ್ತ ಕಟ್ಟಿಕೊಳ್ಳುವುದೊಂದೇ ದಾರಿ.

Advertisement
Advertisement

ಸದ್ಯ ಶಿಲೀಂಧ್ರ ನಾಶಕ್ಕೆ ಹೊಸ ಪರಿಣಾಮಕಾರಿ ಔಷಧವನ್ನು ಮಲೆನಾಡು ಕರಾವಳಿಯ ರೈತ ನಿರೀಕ್ಷೆ ಮಾಡುತ್ತಿದ್ದಾನೆ
ಈ ರೂಪಾಂತರ ಗೊಂಡ ಶಿಲೀಂಧ್ರ ಮದ್ದರೆಯಲೇ ಬೇಕಿದೆ. ಹೌದು ಫೈಟೋಫ್ಲೋರಾ ಶಿಲೀಂಧ್ರ ಇದೀಗ ಖಂಡಿತವಾಗಿಯೂ ರೂಪಾಂತರ ಗೊಂಡಿದೆ. ತಜ್ಞ ವಿಜ್ಞಾನಿಗಳು ಶಿಲೀಂದ್ರ ನಾಶಕ್ಕೆ ಸೂಚಿಸುವ ಬೋರ್ಡೊ , ಸಾಫ್ , ಹೆಕ್ಸೊಕೊನೋಜಲ್, ರೊಡೊಮಿಲ್ ಔಷಧಗಳು ಶಿಲೀಂಧ್ರ ವನ್ನು ಹಿಮ್ಮೆಟ್ಟಿಸುತ್ತಿಲ್ಲ. ನಮ್ಮ ವಿಜ್ಞಾನಿಗಳಿಗೆ ಇದೊಂದು ಸತ್ಯ ಇನ್ನಷ್ಟು ಅಡಿಕೆ ತೋಟಗಳು ನಾಶವಾಗಿ ಅರ್ಥ ವಾಗಬೇಕು…? ಸರ್ಕಾರಕ್ಕೆ ಇದೊಂದು ಸಾಂಕ್ರಾಮಿಕ ಶಿಲೀಂಧ್ರ ತುರ್ತುಸ್ಥಿತಿ ಎಂಬ seriousness ಯಾವಾಗ ಬರುತ್ತದೆ…?

ಸಂಪೂರ್ಣ ಶಿಲೀಂಧ್ರ ಬಾಧೆಗೊಳಗಾದ ಅಡಿಕೆ ತೋಟ ಖಂಡಿತವಾಗಿಯೂ ಮೊದಲಿನಂತಾಗೋಲ್ಲ…. ಜೊತೆಗೆ ಈ ಮಳೆಗಾಲದೊಳಗೆ ಈ ಶಿಲೀಂಧ್ರ ಸಂಪೂರ್ಣ ನಾಶ ವಾಗದಿದ್ದಲ್ಲಿ ಅಥವಾ ಈ ಶಿಲೀಂಧ್ರ ವನ್ನು ಹಿಮ್ಮೆಟ್ಟಿಸುವ ಔಷಧ ಕಂಡು ಹಿಡಿಯದಿದ್ದಲ್ಲಿ ಮಲೆನಾಡು ಪ್ರದೇಶದಲ್ಲಿ ಒಂದೇ ಒಂದು ಅಡಿಕೆ ಮರವೂ ಉಳಿಯಲಾರದು…. ಸರ್ಕಾರ ಜಾಡ್ಯ ಬಿಟ್ಟು ಚುರುಕಾಗಬೇಕು….

ಬರಹ:
ಪ್ರಬಂಧ ಅಂಬುತೀರ್ಥ
Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಎಲೆಚುಕ್ಕಿ ರೋಗದ ಶಿಲೀಂದ್ರವು ರೂಪಾಂತರ ವೈರಸ್…‌ ? | ಇದು ಸಾಂಕ್ರಾಮಿಕ ಶಿಲೀಂಧ್ರ ತುರ್ತುಸ್ಥಿತಿ | ಔಷಧಿ ತಕ್ಷಣವೇ ಬೇಕಿದೆ… |"

Leave a comment

Your email address will not be published.


*