ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಹವಾ…! | ಅಡಿಕೆ ಉಂಟಾ.. ? ರೇಟಾಗಿದೆ…..! |

November 30, 2021
2:54 PM

ಅಡಿಕೆ ಧಾರಣೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಕೆಲವು ಸಮಯಗಳಿಂದ 500-510  ರೂಪಾಯಿಯಲ್ಲಿ ಇದ್ದ ಚಾಲಿ ಧಾರಣೆ ಇದೀಗ 525-535 ರೂಪಾಯಿಗೆ ಏರಿಕೆಯಾಗಿದೆ. ಈಗ ಅಡಿಕೆ ಬೆಳೆಗಾರರಿಗೆ ಕರೆ ಬರಲು ಆರಂಭವಾಗಿದೆ, ” ಅಡಿಕೆ ಇದೆಯಾ..? ಧಾರಣೆ ಏರುತ್ತಿದೆ…”.

Advertisement
Advertisement

Advertisement

ಕಳೆದ ವಾರದಿಂದ ಮತ್ತೆ ಅಡಿಕೆ ಮಾರುಕಟ್ಟೆಯಲ್ಲಿ  ಸಂಚಲನ ಆರಂಭವಾಗಿದೆ. ಪ್ರತೀ ಬಾರಿಯಂತೆಯೇ ಈ ಬಾರಿ ಕೂಡಾ ನವೆಂಬರ್‌ ಅಂತ್ಯದಿಂದ ಧಾರಣೆ ಏರಿಕೆ ಪ್ರಕ್ರಿಯೆ ಆರಂಭವಾಗಿದೆ. ಅಡಿಕೆ ದಾಸ್ತಾನು ಮಾಡುವ ಬಗ್ಗೆ ಈಗ ಉತ್ತರ ಭಾರತದ ವ್ಯಾಪಾರಿಗಳು ಮನಸ್ಸು ಮಾಡಿದ್ದಾರೆ ಎನ್ನುವುದು  ಸದ್ಯದ ಮಾಹಿತಿ. ನವೆಂಬರ್‌ ಬಳಿಕ ಚಾಲಿ ಅಡಿಕೆ  ಹಾಗೂ ಕೆಂಪಡಿಕೆ ಧಾರಣೆಯೂ ಏರಿಕೆಯಾಗುತ್ತದೆ. ಚಾಲಿ ಅಡಿಕೆಯಲ್ಲಿ ಹಳೆಯ ಅಡಿಕೆ ದಾಸ್ತಾನು ಸಮಯ ಇನ್ನೀಗ ಆರಂಭವಾಗುತ್ತದೆ.

ಇಲ್ಲಿನ ವ್ಯಾಪಾರಿಗಳಿಗಿಂತಲೂ ಉತ್ತರ ಭಾರತದ ವ್ಯಾಪಾರಿಗಳಿಗೆ ಈ ವರ್ಷದ ಸೀಸನ್‌ ಆರಂಭವಾಗುವುದೇ ಡಿಸೆಂಬರ್‌ ನಂತರ. ಹೀಗಾಗಿ ಈಗ ಅಡಿಕೆ ದಾಸ್ತಾನು ಇದ್ದರೆ ಮಾತ್ರವೇ ಮುಂದಿನ ಮೂರು ತಿಂಗಳು ಸರಿಯಾದ ವ್ಯಾಪಾರ ನಡೆಯುತ್ತದೆ. ಇದರ ತಯಾರಿ ಈಗ ಆರಂಭವಾಗಿದೆ. ಇದರ ಪರಿಣಾಮ ಕಳೆದ ವಾರದಿಂದ ಧಾರಣೆ ಏರಿಕೆ ಆರಂಭವಾಗಿದೆ.  ಮಂಗಳವಾರವೂ ಅಡಿಕೆ ಧಾರಣೆಯು ಏರಿಕೆ ಕಂಡಿದೆ. ಕ್ಯಾಂಪ್ಕೋ ಸಂಸ್ಥೆ  ತನ್ನ ಧಾರಣೆಯನ್ನು ಏರಿಕೆ ಮಾಡಿದ್ದು, ಹೊಸ ಅಡಿಕೆ 425 ರೂಪಾಯಿಗೆ,  ಹಳೆ ಅಡಿಕೆ 515 ರೂಪಾಯಿಗೆ ಏರಿಕೆ ಮಾಡಿದೆ. ಇದೇ ವೇಳೆ ಖಾಸಗಿ ವ್ಯಾಪಾರಿಗಳು ಹಳೆ ಅಡಿಕೆ  ಧಾರಣೆಯನ್ನು 530-535 ರೂಪಾಯಿಗೆ  ರೂಪಾಯಿಗೆ ಏರಿಕೆ ಮಾಡಿದ್ದಾರೆ.

Advertisement

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಡಿಕೆ ಧಾರಣೆ 50,919 ರೂ. ದರದಲ್ಲಿ ವಹಿವಾಟು ನಡೆದರೆ ಶಿವಮೊಗ್ಗದಲ್ಲೂ ಧಾರಣೆ ಏರಿಕೆಯ ಹಾದಿಯಲ್ಲಿದೆ. ದಕ್ಷಿಣ ಕನ್ನಡ, ಕಾಸರಗೋಡು ಭಾಗದಲ್ಲಿ ಚಾಲಿ ಅಡಿಕೆ ಧಾರಣೆ ಏರಿಕೆ ಕಾಣುತ್ತಿದೆ. ಮಂಗಳವಾರ ಚಾಲಿ ಧಾರಣೆ ಇದೀಗ 525-535 ರೂಪಾಯಿಗೆ ಏರಿಕೆಯಾಗಿದೆ.  ಹೊಸ ಅಡಿಕೆಗೆ 430 ರಿಂದ 440  ರೂಪಾಯಿವರೆಗೂ ಖರೀದಿ ಆಗಿದೆ.

Koo App

Advertisement

ಈ ಧಾರಣೆ ಹೇಗಾಗಬಹುದು  ಎನ್ನುವ ಪ್ರಶ್ನೆ ಬೆಳೆಗಾರರಲ್ಲಿದೆ. ಈಗಾಗಲೇ 500+ ಧಾರಣೆ ಇರುವುದರಿಂದ ಭಾರೀ ಏರಿಕೆಯ ನಿರೀಕ್ಷೆ ಕಷ್ಟವಾಗಬಹುದು. ಕಳೆದ ವರ್ಷವೇ ಅಡಿಕೆಯ ದಾಸ್ತಾನು ಖಾಲಿಯಾಗಿದ್ದರೆ, ಕಳೆದ ಬಾರಿ ಧಾರಣೆಯಲ್ಲಿ ಭಾರೀ ಏರಿಕೆ ಕಂಡ ಹಿನ್ನೆಲೆಯಲ್ಲಿ ಹೊಸ ಅಡಿಕೆಯನ್ನು ಕೂಡಾ ಅರ್ಧದಷ್ಟು ಬೆಳೆಗಾರರು ಖಾಲಿ ಮಾಡಿದ್ದಾರೆ.

Advertisement

ಹೀಗಾಗಿ ಹಳೆ ಅಡಿಕೆಯ ಕೊರತೆ ಇದ್ದೇ ಇದೆ. ಈ ನಡುವೆ ಈಗಿನ ಹೊಸ ಅಡಿಕೆಯು ಗುಣಮಟ್ಟದ ಕೊರತೆಯನ್ನು ಎದುರಿಸುತ್ತಿದೆ. ಮಳೆಯ ಕಾರಣದಿಂದ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರುತ್ತಿಲ್ಲ. ಈ ಕಾರಣದಿಂದಲೂ ಹಳೆ ಅಡಿಕೆ ಧಾರಣೆ ಏರಿಕೆ ಕಾಣಬಹುದು. ಇದರ ಜೊತೆಗೇ ಹೊಸ ಅಡಿಕೆ ಧಾರಣೆಯೂ ಸ್ವಲ್ಪ ಏರಿಕೆಯಾಗಬಹುದು.

ಈಗಿನ ಅಂದಾಜು ಪ್ರಕಾರ 550 ರೂಪಾಯಿವರೆಗೆ ಹಳೆ ಅಡಿಕೆ ಧಾರಣೆ ತಲಪುವ ನಿರೀಕ್ಷೆ ಇದೆ. ಹೊಸ ಅಡಿಕೆ ಧಾರಣೆಯೂ 460+ ತಲುಪಬಹುದು ಎನ್ನುವುದು  ಮಾರುಕಟ್ಟೆ ವಲಯದ ಈಗಿನ ಅಭಿಮತ.

Advertisement

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಬರಗಾಲದ ಪರಿಣಾಮ | ತರಕಾರಿ ಬೆಲೆ ಏರಿಕೆಯ ಬಿಸಿ | ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ…. ಎಲ್ಲವೂ ದರ ಏರಿಕೆ |.
April 25, 2024
2:39 PM
by: The Rural Mirror ಸುದ್ದಿಜಾಲ
ಕರಾವಳಿ ಜಿಲ್ಲೆಯ ಕೃಷಿ ಕ್ಷೇತ್ರದ ಕಡೆಗೆ ಗಮನ | ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಯತ್ನ | ಮಂಗಳೂರು ಬಿಜೆಪಿ ಅಭ್ಯರ್ಥಿ ಭರವಸೆ |
April 25, 2024
2:00 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror