ಅಸ್ಸಾಂ ರಾಜ್ಯದ ಹೈಲಕಂಡಿ ಪ್ರದೇಶದಲ್ಲಿ ಬರ್ಮಾದಿಂದ ಅಕ್ರಮ ಸಾಗಾಟ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ. ಹೈಲಕಂಡಿ ಜಿಲ್ಲೆಯ ಪೊಲೀಸರು ಅಡಿಕೆ ಅಕ್ರಮ ಸಾಗಾಟ ಪ್ರಕರಣ ಬೇಧಿಸಿ ಒಟ್ಟು 18 ಪ್ರಕರಣ ದಾಖಲಿದ್ದು 22 ಮಂದಿಯನ್ನು ಬಂಧಿಸಿದ್ದಾರೆ. ಒಟ್ಟು 5 ಕೋಟಿ ಮೌಲ್ಯದ 1,700 ಕ್ವಿಂಟಾಲ್ ಬರ್ಮಾ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಕ್ರಮವಾಗಿ ಅಡಿಕೆ ಸಾಗಾಟ ಪ್ರಕರಣದ ಬಗ್ಗೆ ಹೈಲಕಂಡಿ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಉಪಾಧ್ಯಾಯ ಮಾಧ್ಯಮಗಳಿಗೆ ಮಾಹಿತಿ ನೀಡಿ, 1,700 ಕ್ವಿಂಟಾಲ್ ಬರ್ಮಾ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ 24 ಗಂಟೆಗಳಲ್ಲಿ ಹೈಲಕಂಡಿ ಜಿಲ್ಲೆಯಾದ್ಯಂತ ದಾಳಿ ನಡೆಸಲಾಗಿದ್ದು, ಅಡಿಕೆಯ ಎಲ್ಲಾ ಗೋದಾಮುಗಳನ್ನು ಸೀಲ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಸೀಲ್ ಮಾಡಲಾಗಿರುವ ಗೋದಾಮುಗಳಲ್ಲಿ ಬರ್ಮಾ ಅಡಿಕೆ ಅಕ್ರಮವಾಗಿ ಆಮದಾಗಿ ಬಳಿಕ ಅಲ್ಲಿ ಅಡಿಕೆಯ ವಿಲೇವಾರಿ ಹಾಗೂ ಪ್ರತ್ಯೇಕಿಸುವ ಕೆಲಸ ನಡೆಯುತ್ತದೆ ಎನ್ನುವ ಮಾಹಿತಿ ಇದೆ ಎಂದು ಅವರು ತಿಳಿಸಿದ್ದಾರೆ. ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಮತ್ತು ಪೊಲೀಸ್ ಪ್ರಧಾನ ಕಚೇರಿಯ ಸೂಚನೆಯಂತೆ ಎಲ್ಲಾ ರೀತಿಯ ಅಕ್ರಮ ವ್ಯಾಪಾರವನ್ನು ತಡೆಯಲು ದಾಳಿ ನಡೆಸಲಾಗುತ್ತಿದೆ ಎಂದು ಹೈಲಕಂಡಿ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಉಪಾಧ್ಯಾಯ ಮಾಹಿತಿ ನೀಡಿದ್ದಾರೆ.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.