ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡಿದೆ. ಹೊಸ ಅಡಿಕೆ ಧಾರಣೆಯಲ್ಲಿ 5 ರೂಪಾಯಿ ಕ್ಯಾಂಪ್ಕೋ ಏರಿಕೆ ಮಾಡಿದೆ. ಹೀಗಾಗಿ ಈಗ ಗರಿಷ್ಠ ಧಾರಣೆ 450 ರೂಪಾಯಿ ಹಾಗೂ ಮಧ್ಯಮ ಧಾರಣೆ 435 ರೂಪಾಯಿ ಖರೀದಿ ನಡೆಯುತ್ತಿದೆ. ಕಳೆದ ವಾರ ಗರಿಷ್ಠ ಧಾರಣೆ 450 ಇದ್ದರೂ ಮಧ್ಯಮ ಧಾರಣೆ 430 ರೂಪಾಯಿ ಇತ್ತು. ಇದೀಗ ಹೊಸ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡಿದೆ. ಹಳೆ ಧಾರಣೆಯಲ್ಲಿ ಸದ್ಯ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. 550 ರೂಪಾಯಿಗೆ ಖರೀದಿ ನಡೆಯುತ್ತಿದೆ. ಆದರೆ ವಾರಾಂತ್ಯಕ್ಕೆ ಎರಡೂ ಧಾರಣೆಯಲ್ಲಿ ಏರಿಕೆ ಸಾಧ್ಯತೆ ಇದೆ.ಹಳೆ ಅಡಿಕೆ 555 ಆಸುಪಾಸಿನಲ್ಲಿ ಹಾಗೂ ಹೊಸ ಅಡಿಕೆ 44೦ ರೂಪಾಯಿ ಆಸುಪಾಸಿಗೆ ಏರಿಕೆ ಸಾಧ್ಯತೆ ಇದೆ.
ಖಾಸಗಿ ಧಾರಣೆಯೂ ಹೊಸ ಅಡಿಕೆ ಧಾರಣೆಯಲ್ಲಿ ಏರಿಕೆ ಸಾಧ್ಯತೆ ಇದೆ. ಈಗಾಗಲೇ ಖಾಸಗಿ ಮಾರುಕಟ್ಟೆಯಲ್ಲಿ 432 ರೂಪಾಯಿವರೆಗೆ ಖರೀದಿ ನಡೆಯುತ್ತಿತ್ತು, ಇದೀಗ 436-437 ರೂಪಾಯಿಗೆ ಖರೀದಿ ಮಾಡಲು ಆರಂಭವಾಗಿದೆ.ಹಳೆ ಅಡಿಕೆ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ.
ಅಡಿಕೆ ಮಾರುಕಟ್ಟೆ | ಹೊಸ ಅಡಿಕೆಗೆ 5 ರೂಪಾಯಿ ಏರಿಕೆ | https://t.co/cugJyf6p7S#ಅಡಿಕೆ #arecanut
— theruralmirror (@ruralmirror) July 11, 2022
Advertisement
ಕಳೆದ ವಾರದ ರೂರಲ್ ಮಿರರ್ ವರದಿ :
ಮಳೆಯ ಅಬ್ಬರದ ನಡುವೆ ಅಡಿಕೆ ಧಾರಣೆ ಏರಿಕೆ ನಿರೀಕ್ಷೆ… ? | ಮುಂದಿನ ವಾರ 10 ರೂಪಾಯಿ ಏರಿಕೆ ಸಾಧ್ಯತೆ ?