ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಈ ಬಾರಿ ಹಳೆ ಅಡಿಕೆ ಧಾರಣೆ 5 ರೂಪಾಯಿ ಕ್ಯಾಂಪ್ಕೋ ಏರಿಕೆ ಮಾಡಿದೆ. ಸದ್ಯ 555 ರೂಪಾಯಿಗೆ ಖರೀದಿ ನಡೆಯುತ್ತಿದೆ. ಕ್ಯಾಂಪ್ಕೋ ಹಳೆ ಅಡಿಕೆ ಧಾರಣೆ ಏರಿಕೆ ತಕ್ಷಣವೇ ಖಾಸಗಿ ಮಾರುಕಟ್ಟೆಯಲ್ಲೂ ಸಂಚಲನ ಉಂಟಾಗಿದೆ.
ಅಡಿಕೆ ಮಾರುಕಟ್ಟೆಯಲ್ಲಿ ಏರಿಕೆ. ಹಳೆ ಅಡಿಕೆ 5 ರೂಪಾಯಿ ಧಾರಣೆ ಏರಿಕೆ. 555 ರೂಪಾಯಿಗೆ ಖರೀದಿ.ಹೊಸ ಅಡಿಕೆ 440 ರೂಪಾಯಿ. #ಅಡಿಕೆ #arecanut pic.twitter.com/UFWylxoK5P
— theruralmirror (@ruralmirror) July 18, 2022
ಕಳೆದ ವಾರ ಹೊಸ ಅಡಿಕೆ ಧಾರಣೆಯಲ್ಲಿ 5 ರೂಪಾಯಿ ಕ್ಯಾಂಪ್ಕೋ ಏರಿಕೆ ಮಾಡಿತ್ತು. ಮಾರುಕಟ್ಟೆ 440 ರೂಪಾಯಿ ಗರಿಷ್ಟ ಮಾರುಕಟ್ಟೆ ಇತ್ತು. ಖಾಸಗಿ ವಲಯದಲ್ಲಿ 442 ರಿಂದ 445 ರೂಪಾಯಿವರೆಗೂ ಖರೀದಿ ನಡೆದಿದೆ. ಹಳೆ ಅಡಿಕೆ ಧಾರಣೆಯು 550 ರೂಪಾಯಿಗೆ ಖರೀದಿ ನಡೆಯುತ್ತಿತ್ತು. ಇದೀಗ ಹಳೆ ಅಡಿಕೆ ಧಾರಣೆಯಲ್ಲೂ ಏರಿಕೆ ಕಂಡಿದೆ. ಖಾಸಗಿ ವಲಯದಲ್ಲಿ ಹಳೆ ಅಡಿಕೆ 565 ರೂಪಾಯಿ ಹಾಗೂ ಹೊಸ ಅಡಿಕೆ 445 ರೂಪಾಯಿಗೆ ಖರೀದಿ ನಡೆಯುತ್ತಿದೆ.
ಕಳೆದ ವಾರದ ರೂರಲ್ ಮಿರರ್ ವರದಿ :
ಮಳೆಯ ಅಬ್ಬರದ ನಡುವೆ ಅಡಿಕೆ ಧಾರಣೆ ಏರಿಕೆ ನಿರೀಕ್ಷೆ… ? | ಮುಂದಿನ ವಾರ 10 ರೂಪಾಯಿ ಏರಿಕೆ ಸಾಧ್ಯತೆ ?