ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಹಳೆ ಅಡಿಕೆ ಧಾರಣೆಯಲ್ಲಿ ಮತ್ತೆ 5 ರೂಪಾಯಿ ಕ್ಯಾಂಪ್ಕೋ ಏರಿಕೆ ಮಾಡಿದೆ. ಸದ್ಯ 560 ರೂಪಾಯಿಗೆ ಖರೀದಿ ನಡೆಯುತ್ತಿದೆ. ಖಾಸಗಿ ಮಾರುಕಟ್ಟೆಯಲ್ಲೂ ಅಡಿಕೆ ಧಾರಣೆ ಏರಿಕೆಯಾಗಿದ್ದು 565 ರೂಪಾಯಿಗೆ ಖರೀದಿ ನಡೆಸುವ ಬಗ್ಗೆ ದೂರವಾಣಿ ಕರೆಗಳು ಬರುತ್ತಿವೆ.
ಅಡಿಕೆ ಧಾರಣೆ ಏರಿಕೆ. ಹಳೆ ಅಡಿಕೆ 560 ರೂಪಾಯಿ ಹಾಗೂ ಹೊಸ ಅಡಿಕೆ 445 ರೂಪಾಯಿ. #ಅಡಿಕೆ #arecanut pic.twitter.com/Oa4JaAmGJG
Advertisement— theruralmirror (@ruralmirror) July 22, 2022
ಎರಡು ವಾರಗಳ ಹೊಸ ಅಡಿಕೆ ಧಾರಣೆಯಲ್ಲಿ 5 ರೂಪಾಯಿ ಕ್ಯಾಂಪ್ಕೋ ಏರಿಕೆ ಮಾಡಿತ್ತು. 445 ರೂಪಾಯಿಗೆ ಹೊಸ ಅಡಿಕೆ ಖರೀದಿ ನಡೆಯಿತು. ಅದಾದ ಬೆನ್ನಲ್ಲೇ ಹಳೆ ಅಡಿಕೆ ಧಾರಣೆಯಲ್ಲೂ ಏರಿಕೆ ಕಂಡಿತು. 555 ರೂಪಾಯಿಗೆ ಏರಿದ ಬಳಿಕ ಇದೀಗ ಮತ್ತೆ 5 ರೂಪಾಯಿ ಏರಿಕೆ ಕಂಡು 560 ರೂಪಾಯಿಗೆ ಮಾರುಕಟ್ಟೆ ಏರಿಕೆ ಕಂಡಿದೆ. ಧಾರಣೆ ಏರಿಕೆ ಬಳಿಕವೂ ಮಾರುಕಟ್ಟೆಗೆ ಹಳೆ ಅಡಿಕೆ ಪೂರೈಕೆ ಆಗುತ್ತಿಲ್ಲ. ಹೊಸ ಅಡಿಕೆಯೂ ಬೇಡಿಕೆಯಷ್ಟು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಮತ್ತೆ ಹೊಸ ಅಡಿಕೆ ಧಾರಣೆಯೂ ಕೊಂಚ ಏರಿಕೆ ನಿರೀಕ್ಷೆ ಇದೆ.