ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಶುಕ್ರವಾರ ಹಳೆ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡಿತ್ತು. ಕ್ಯಾಂಪ್ಕೋ ಹಳೆ ಅಡಿಕೆ ಧಾರಣೆಯನ್ನು 5 ರೂಪಾಯಿ ಏರಿಕೆ ಮಾಡಿದ ಬೆನ್ನಲ್ಲೇ ಖಾಸಗಿ ವಲಯದಲ್ಲೂ ಹಳೆ ಅಡಿಕೆ ಧಾರಣೆ ಏರಿಕೆಯಾಗಿತ್ತು. ಇದೀಗ ಖಾಸಗಿ ವಲಯದಲ್ಲಿ ಹೊಸ ಅಡಿಕೆ ಧಾರಣೆ ಕೂಡಾ ಏರಿಕೆಯಾಗಿದ್ದು 455 ರೂಪಾಯಿಗೆ ಖರೀದಿ ನಡೆಯುತ್ತಿದೆ. ಇದೇ ವೇಳೆ ಕ್ಯಾಂಪ್ಕೋ 450 ರೂಪಾಯಿಗೆ ಹೊಸ ಅಡಿಕೆ ಹಾಗೂ ಸದ್ಯ 560 ರೂಪಾಯಿಗೆ ಹಳೆ ಅಡಿಕೆ ಖರೀದಿ ನಡೆಯುತ್ತಿದೆ. ಖಾಸಗಿ ಮಾರುಕಟ್ಟೆಯಲ್ಲೂ ಅಡಿಕೆ ಧಾರಣೆ ಏರಿಕೆಯಾಗಿದ್ದು 570 ರೂಪಾಯಿವರೆಗೂ ಖರೀದಿ ನಡೆಸಿದೆ.
ಅಡಿಕೆ ಧಾರಣೆ ಮತ್ತೆ ಏರಿಕೆ | ಖಾಸಗಿ ವಲಯದಲ್ಲಿ ಹಳೆ ಅಡಿಕೆ 570 ರೂಪಾಯಿ ಹೊಸ ಅಡಿಕೆ 450 ರೂಪಾಯಿಗೆ ಖರೀದಿ. #ಅಡಿಕೆ #arecanut
Advertisement— theruralmirror (@ruralmirror) July 23, 2022
ಅಡಿಕೆ ಮಾರುಕಟ್ಟೆಯಲ್ಲಿ ಸದ್ಯ ಧಾರಣೆ ಸಂಚಲನ ಇದೆ. ಏರಿಕೆ ನಿರೀಕ್ಷೆ . ಬೇಡಿಕೆ ಇದೆ. ನಿರೀಕ್ಷೆಗೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಧಾರಣೆಯಲ್ಲಿ ಏರಿಕೆಯಾಗಿದೆ. ಸದ್ಯ ಕ್ಯಾಂಪ್ಕೋ ಕೂಡ ಸ್ಥಿರ ಧಾರಣೆ ಗಮನಹರಿಸಿದೆ. ಹೀಗಾಗಿ ಅಡಿಕೆ ಬೆಳೆಗಾರರಿಗೂ ಮಾರುಕಟ್ಟೆ ಸ್ಥಿರತೆ ಹಾಗೂ ಮಾರುಕಟ್ಟೆ ಕುಸಿಯದಂತೆ ತಡೆಯಲು ಸಾಧ್ಯವಾಗಿದೆ.