ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಅಡಿಕೆಗೆ ಬೇಡಿಕೆ ಹೆಚ್ಚಿದೆ. ಇದೀಗ ದ್ವಿತೀಯ ದರ್ಜೆಯ ಅಡಿಕೆಗೂ ಬೇಡಿಕೆ ಹೆಚ್ಚಿದೆ. ಹೀಗಾಗಿ ಪಠೋರ, ಕರಿಗೋಟು ಧಾರಣೆಯಲ್ಲೂ ಏರಿಕೆ ಕಂಡಿದೆ. ಕ್ಯಾಂಪ್ಕೋ ಪಠೋರ ದರದಲ್ಲಿ 10 ರೂಪಾಯಿ ಹಾಗೂ ಕರಿಗೋಟ ದರದಲ್ಲಿ 5 ರೂಪಾಯಿ ಏರಿಕೆ ಮಾಡಿದೆ. ಹೀಗಾಗಿ ಹೊಸ ಪಠೋರ 360 ರೂಪಾಯಿ ಹಾಗೂ ಕರಿಗೋಟು, ಉಳ್ಳಿಗಡ್ಡೆಯ ಧಾರಣೆ 275 ರೂಪಾಯಿಗೆ ಖರೀದಿ ಮಾಡುತ್ತಿದೆ. ಹಳೆ ಪಠೋರ 365 ರೂಪಾಯಿಗೆ ಖರೀದಿ ನಡೆಯುತ್ತಿದೆ.
ಹೊಸ ಅಡಿಕೆ ಧಾರಣೆ 460 ರೂಪಾಯಿಗೆ ಹಾಗೂ ಹಳೆ ಅಡಿಕೆ 560 ರೂಪಾಯಿಗೆ ಖರೀದಿ ನಡೆಯುತ್ತಿದೆ. ಕ್ಯಾಂಪ್ಕೋ ಅಡಿಕೆ ಧಾರಣೆ ಏರಿಕೆ ಮಾಡಿದ ಬೆನ್ನಲ್ಲೇ ಖಾಸಗಿ ಮಾರುಕಟ್ಟೆಯಲ್ಲೂ ದ್ವಿತೀಯ ದರ್ಜೆಯ ಅಡಿಕೆ ಧಾರಣೆಯೂ ಏರಿಕೆಯಾಗಿದೆ.
ಇದೇ ವೇಳೆ ರಬ್ಬರ್ ಧಾರಣೆ ಇಳಿಮುಖವಾಗುತ್ತಿದೆ. ರಬ್ಬರ್ ಧಾರಣೆ(RSS4) 165 ರೂಪಾಯಿಗೆ ಇಳಿಕೆಯಾಗಿದೆ. ನಿನ್ನೆಗಿಂತ ಇಂದಿಗೆ 2 ರೂಪಾಯಿ ಇಳಿಕೆಯಾಗಿದೆ. ವಾರದಲ್ಲಿ 10 ರೂಪಾಯಿ ರಬ್ಬರ್ ಧಾರಣೆ ಇಳಿಕೆಯಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel