ಅಡಿಕೆ ಮಾರುಕಟ್ಟೆ | ಅಡಿಕೆಗೆ ಹೆಚ್ಚಿದ ಬೇಡಿಕೆ | ಪಠೋರ, ಕರಿಗೋಟು ಧಾರಣೆಯಲ್ಲೂ ಏರಿಕೆ | ರಬ್ಬರ್‌ ಧಾರಣೆ ಇಳಿಕೆ |

August 11, 2022
11:37 AM

ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಅಡಿಕೆಗೆ ಬೇಡಿಕೆ ಹೆಚ್ಚಿದೆ. ಇದೀಗ ದ್ವಿತೀಯ ದರ್ಜೆಯ ಅಡಿಕೆಗೂ ಬೇಡಿಕೆ ಹೆಚ್ಚಿದೆ. ಹೀಗಾಗಿ ಪಠೋರ, ಕರಿಗೋಟು ಧಾರಣೆಯಲ್ಲೂ ಏರಿಕೆ ಕಂಡಿದೆ. ಕ್ಯಾಂಪ್ಕೋ ಪಠೋರ ದರದಲ್ಲಿ 10 ರೂಪಾಯಿ ಹಾಗೂ ಕರಿಗೋಟ ದರದಲ್ಲಿ 5 ರೂಪಾಯಿ ಏರಿಕೆ ಮಾಡಿದೆ. ಹೀಗಾಗಿ ಹೊಸ ಪಠೋರ 360 ರೂಪಾಯಿ ಹಾಗೂ ಕರಿಗೋಟು, ಉಳ್ಳಿಗಡ್ಡೆಯ ಧಾರಣೆ 275 ರೂಪಾಯಿಗೆ ಖರೀದಿ ಮಾಡುತ್ತಿದೆ. ಹಳೆ ಪಠೋರ 365 ರೂಪಾಯಿಗೆ ಖರೀದಿ ನಡೆಯುತ್ತಿದೆ.

ಹೊಸ ಅಡಿಕೆ ಧಾರಣೆ 460 ರೂಪಾಯಿಗೆ ಹಾಗೂ  ಹಳೆ ಅಡಿಕೆ   560 ರೂಪಾಯಿಗೆ ಖರೀದಿ ನಡೆಯುತ್ತಿದೆ. ಕ್ಯಾಂಪ್ಕೋ ಅಡಿಕೆ ಧಾರಣೆ ಏರಿಕೆ ಮಾಡಿದ ಬೆನ್ನಲ್ಲೇ ಖಾಸಗಿ ಮಾರುಕಟ್ಟೆಯಲ್ಲೂ ದ್ವಿತೀಯ ದರ್ಜೆಯ ಅಡಿಕೆ ಧಾರಣೆಯೂ ಏರಿಕೆಯಾಗಿದೆ. 

ಇದೇ ವೇಳೆ ರಬ್ಬರ್‌ ಧಾರಣೆ ಇಳಿಮುಖವಾಗುತ್ತಿದೆ. ರಬ್ಬರ್‌ ಧಾರಣೆ(RSS4)  165 ರೂಪಾಯಿಗೆ ಇಳಿಕೆಯಾಗಿದೆ. ನಿನ್ನೆಗಿಂತ ಇಂದಿಗೆ 2 ರೂಪಾಯಿ ಇಳಿಕೆಯಾಗಿದೆ. ವಾರದಲ್ಲಿ 10 ರೂಪಾಯಿ ರಬ್ಬರ್‌ ಧಾರಣೆ ಇಳಿಕೆಯಾಗಿದೆ.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 09-06-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲವಾಗುತ್ತಿದೆಯೇ..? – ಜೂನ್ 15 ಬಳಿಕ ಹಲವು ಭಾಗಗಳಲ್ಲಿ ಮಳೆ ಇಳಿಮುಖ ಸಾಧ್ಯತೆ
June 9, 2026
1:51 PM
by: ಸಾಯಿಶೇಖರ್ ಕರಿಕಳ
ಭಾರತದಲ್ಲಿ ಬಯೋ-ಕಾಂಪೋಸಿಟ್ ಕ್ರಾಂತಿ – ಅರಣ್ಯ ನಾಶವಿಲ್ಲದೇ ಕಟ್ಟಡ ನಿರ್ಮಾಣಕ್ಕೆ ಹೊಸ ದಾರಿ
June 9, 2026
11:38 AM
by: ದ ರೂರಲ್ ಮಿರರ್.ಕಾಂ
ಅಡಿಕೆಯಿಂದ ಸಾಂಸ್ಕೃತಿಕ ಉದ್ಯಮದವರೆಗೆ – ವಿಯೆಟ್ನಾಂನ ಹೊಸ ಪ್ರಯೋಗ ರೈತರಿಗೆ ಮಾದರಿಯಾಗಬಹುದೇ..?
June 9, 2026
7:36 AM
by: ದ ರೂರಲ್ ಮಿರರ್.ಕಾಂ
ಝಾರ್ಖಂಡ್‌ನ ಮಹಿಳಾ ರೈತರಿಂದ ಬೆಳೆದ ಮಾವು ಈಗ ಲಂಡನ್‌ಗೆ…! ಬ್ರಿಟನ್‌ಗೆ ಮೊದಲ ಬಾರಿಗೆ ರಫ್ತು
June 8, 2026
8:48 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror