MIRROR FOCUS

#ಅಡಿಕೆಮಾರುಕಟ್ಟೆ | ಅಡಿಕೆ ಧಾರಣೆ ಏರಿಕೆಯ ನಡುವೆ ಇನ್ನೊಂದು ಚಿಂತೆ | ಯಂತ್ರದ ಮೂಲಕ ಸುಲಿದ ಅಡಿಕೆ ಕತೆ ಏನು.. ?

Share

ಅಡಿಕೆ ಧಾರಣೆ ಏರುತ್ತಲೇ ಇದೆ. ಗುರುವಾರ ಚಾಲಿ ಅಡಿಕೆ ಧಾರಣೆ ಮತ್ತೆ ಖಾಸಗಿ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ. ಚಾಲಿ ಹೊಸ ಅಡಿಕೆ 490-495 ರೂಪಾಯಿ ಹಾಗೂ ಹಳೆ ಅಡಿಕೆ 570-575 ರೂಪಾಯಿಗೆ ಖರೀದಿ ನಡೆಯುತ್ತಿದೆ. ಇದೇ ವೇಳೆ ಕ್ಯಾಂಪ್ಕೋ ಅಡಿಕೆ ಧಾರಣೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು ಹೊಸ ಅಡಿಕೆ 475 ರೂಪಾಯಿ ಹಾಗೂ ಹಳೆ ಅಡಿಕೆ 560 ರೂಪಾಯಿಗೆ ಖರೀದಿ ನಡೆಸುತ್ತಿದೆ.

Advertisement

ಚಾಲಿ ಅಡಿಕೆ ಧಾರಣೆ ಏರುಗತಿಯಲ್ಲಿದೆ. ಹೊಸ ಅಡಿಕೆ ಧಾರಣೆ 500 ರೂಪಾಯಿ ತಲಪುತ್ತಿದೆ. ಇನ್ನು ಎರಡು ದಿನದಲ್ಲಿ ಹೊಸ ಚಾಲಿ ಅಡಿಕೆ ಧಾರಣೆ 500 ರೂಪಾಯಿ ತಲುಪಲಿದೆ. ಗಣೇಶ ಚೌತಿ ಹತ್ತಿರವಾಗುತ್ತಿದ್ದಂತೆಯೇ ಅಡಿಕೆ ಧಾರಣೆಯೂ ಏರುಗತಿಯಲ್ಲಿ ಸಾಗುತ್ತಿದೆ. ಈಗ ಎರಡು ದಿನಗಳಿಂದ ಧಾರಣೆ ಏರಿಕೆಯ ವೇಗಕ್ಕೆ ಸ್ವಲ್ಪ ಕಡಿವಾಣ ಬಿದ್ದಿದೆ. ಅಡಿಕೆ ದಾಸ್ತಾನು ಕಾರಣದಿಂದ ಬೇಡಿಕೆ ಹೆಚ್ಚುತ್ತಲೇ ಇತ್ತು. ಹೊಸ ಅಡಿಕೆ ದಾಸ್ತಾನು ಹಲವು ವ್ಯಾಪಾರಸ್ಥರು ಚೌತಿಯ ಸಮಯದಲ್ಲಿ ಮಾಡುವುದು  ಈ ಹಿಂದೆಯೂ ಕಂಡುಬಂದಿತ್ತು. ಇನ್ನು ಒಂದು ತಿಂಗಳು ದಾಸ್ತಾನು ಇರಿಸಿದರೆ ಕನಿಷ್ಟ 60- 70 ರೂಪಾಯಿ ಲಾಭ ಪಡೆಯಬಹುದು  ಎನ್ನುವುದು  ವ್ಯಾಪಾರದ ಲೆಕ್ಕಾಚಾರ. ಈಗ ಬೆಳೆಗಾರರು ಕೂಡಾ ಲಾಭ-ನಷ್ಟದ ಲೆಕ್ಕಾಚಾರ ಇರಿಸಿಕೊಂಡು ಅಗತ್ಯಕ್ಕೆ ತಕ್ಕಷ್ಟೇ ಮಾರುಕಟ್ಟೆಗೂ ಅಡಿಕೆ ಬಿಡುತ್ತಿದ್ದಾರೆ.

ಅಡಿಕೆ ಧಾರಣೆಯ ನಡುವೆಯೇ ಈಗ ಯಂತ್ರದ ಮೂಲಕ ಸುಲಿದ ಚಾಲಿ ಅಡಿಕೆಯ ಬಗ್ಗೆ ಚಿಂತೆ ಶುರುವಾಗಿದೆ. ಯಂತ್ರದ ಮೂಲಕ ಅಡಿಕೆ ಸುಲಿದಾಗ ಕೆಲವು ಅಡಿಕೆಗಳು ಹುಡಿಯಾಗುತ್ತವೆ, ಇನ್ನೂ ಕೆಲವು ಅಡಿಕೆಗಳಿಗೆ ಹಾನಿಯಾಗುತ್ತದೆ. ಇಂತಹ ಅಡಿಕೆಗಳಿಗೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಸಿಗುತ್ತಿದೆ. ಆದರೆ ಇದನ್ನು ಅಡಿಕೆ ಗ್ರೇಡ್‌ ಮಾಡುವ ವೇಳೆ ತುಕ್ಡಾ , ಚೋರ್‌ ಎಂದು ವಿಭಾಗ ಮಾಡಲಾಗುತ್ತದೆ. ಆದರೆ ಧಾರಣೆಯಲ್ಲಿ ಮಾತ್ರಾ ತೀರಾ ವ್ಯತ್ಯಾಸ ಇರುತ್ತದೆ. ಇದಕ್ಕಾಗಿ ಖಾಸಗಿ ವ್ಯಾಪಾರಿಗಳು ಸಹಿತ ಕ್ಯಾಂಪ್ಕೋ ಸೂಕ್ತವಾದ ದರ ನಿಗದಿ ಮಾಡಬೇಕು ಎನ್ನುವ ಒತ್ತಾಯ ಬೆಳೆಗಾರರಿಂದ ವ್ಯಕ್ತವಾಗಿದೆ. ಇಂದು ಬಹುಪಾಲು ಕೃಷಿಕರು ಯಂತ್ರದ ಮೂಲಕ ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ಕೊರತೆಯ ಕಾರಣದಿಂದ ಯಂತ್ರ ಬಳಕೆ ಅನಿವಾರ್ಯವಾಗಿದೆ. ಆದರೆ ಅಡಿಕೆ ಗುಣಮಟ್ಟ ಇದ್ದರೂ ಯಂತ್ರದ ಮೂಲಕ ಸುಲಿದ ಎಂಬ ಕಾರಣಕ್ಕೆ ಧಾರಣೆಯಲ್ಲಿ ವ್ಯತ್ಯಾಸ ಇರುವ ಬಗ್ಗೆ ಕೃಷಿಕರು ಹೇಳುತ್ತಾರೆ. ಇದಕ್ಕಾಗಿ ಕ್ಯಾಂಪ್ಕೋ ಗಂಭೀರವಾಗಿ ಪರಿಗಣಿಸಬೇಕು ಎಂಬುದು ಕೃಷಿಕರ ಒತ್ತಾಯ.

ಅಡಿಕೆ ಯಂತ್ರದ ಮೂಲಕ ಸುಲಿದಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತದೆ. ಕಾರ್ಮಿಕರ ಕೊರತೆಯ ಕಾರಣದಿಂದ ನಾವು ಈಗ ಅಡಿಕೆಯನ್ನು ಯಂತ್ರದ ಮೂಲಕವೇ ಸುಲಿಯಬೇಕಾಗುತ್ತದೆ. ಆಗ ಅಡಿಕೆ ಗುಣಮಟ್ಟ ಇದ್ದರೂ ಯಂತ್ರದ ಮೂಲಕ ಸುಲಿದ ಅಡಿಕೆ ಎಂಬ ಕಾರಣಕ್ಕೆ ಧಾರಣೆಯಲ್ಲಿ ವ್ಯತ್ಯಾಸ ಇರುತ್ತದೆ. ಹೀಗಾಗಿ ಇದಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಆಗಬೇಕು ಎಂದು ಕೃಷಿಕ ರಾಜೇಶ್‌ ಮೆಟ್ಟಿನಡ್ಕ ಹೇಳುತ್ತಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 01-05-2025 | ಕೆಲವು ಕಡೆ ಸಂಜೆ ಮಳೆ ನಿರೀಕ್ಷೆ | ಮೇ.6 ರಿಂದ ಮತ್ತೆ ಮಳೆ ಆರಂಭ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…

2 hours ago

ಅಪ್ಪ ಅಮ್ಮ ಇಲ್ಲದ ಪರೀಕ್ಷಾ ನಿಯಮಗಳು

ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…

5 hours ago

ಮೇ 2- 6 | ಮಂಗಳೂರಿನಲ್ಲಿ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ

ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…

8 hours ago

ಜೋಗ ಜಲಪಾತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮುಕ್ತಾಯ | ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ | ಜೋಗ ಇನ್ನು ಮತ್ತಷ್ಟು ಆಕರ್ಷಕ |

ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ  ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ  ವಿವಿಧ…

8 hours ago

ಹವಾಮಾನ ವರದಿ | 30-04-2025 | ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ |

ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…

1 day ago

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…

1 day ago