ಅಡಿಕೆ ಮಾರುಕಟ್ಟೆ | ಅಡಿಕೆ ಧಾರಣೆ ಏರಿಳಿತ | ಕ್ಯಾಂಪ್ಕೋ ಸ್ಥಿರ ಧಾರಣೆ | ಚೌತಿಯ ನಂತರವೇ ಮಾರುಕಟ್ಟೆ ಗಟ್ಟಿ |

August 29, 2022
5:33 PM

ಅಡಿಕೆ ಮಾರುಕಟ್ಟೆ ಸ್ಥಿರವಾಗಿದೆ. ಆದರೆ ಖಾಸಗಿ ಮಾರುಕಟ್ಟೆಯಲ್ಲಿ ಸೋಮವಾರ ಇಳಿಕೆ ಕಂಡುಬಂದಿತ್ತು. ಚೌತಿ ಬಳಿಕವೇ ಅಡಿಕೆ ಮಾರುಕಟ್ಟೆ ಪ್ರತೀ ವರ್ಷವೂ ಸ್ಥಿರತೆಯನ್ನು ಸಾಧಿಸುತ್ತದೆ. ಕ್ಯಾಂಪ್ಕೋ ಸದ್ಯ ಅಡಿಕೆ ಬೆಳೆಗಾರರ ಪರವಾಗಿದೆ, ಸ್ಥಿರ ಧಾರಣೆಯನ್ನು ನೀಡಿದೆ. ಚಾಲಿ ಅಡಿಕೆಯಲ್ಲಿ ಹಳೆ ಅಡಿಕೆ 560 ಹಾಗೂ ಹೊಸ ಅಡಿಕೆ 475 ರೂಪಾಯಿಗೆ ಖರೀದಿ ಮಾಡಿದರೆ ಖಾಸಗಿ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಯಲ್ಲಿ ಹಳೆ ಅಡಿ 575 ಹಾಗೂ ಹೊಸ ಅಡಿಕೆ 490 ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ.

Advertisement
Advertisement
Advertisement
Advertisement

ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತದ ಆಟ ಶುರುವಾಗಿದೆ. ಚೌತಿ ಹತ್ತಿರ ಬರುತ್ತಿದ್ದಂತೆಯೇ ಅಡಿಕೆ ಮಾರುಕಟ್ಟೆ ಏರಿಕೆ ಕಂಡು,  ಚೌತಿಯ ಸಂದರ್ಭ ಮಾರುಕಟ್ಟೆ ಏರಿಕೆ ಸ್ಥಗಿತವಾಗಿ,  ನಂತರ ಮತ್ತೆ ಏರಿಕೆ ಅಥವಾ ಸ್ಥಿರತೆ ಕಂಡುಬರುವುದು ಈ ಹಿಂದೆಯೂ ಕಂಡುಬಂದಿತ್ತು. ಈಗಲೂ ಅದೇ ಟ್ರೆಂಡ್‌ ಮುಂದುವರಿದಿದೆ. ಈ ಬಾರಿ ಧಾರಣೆ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಸದ್ಯ ಸಂಚಲನ ಮೂಡಿಸಿದೆ. ಅಡಿಕೆ ಮಾರುಕಟ್ಟೆ ಇಳಿಕೆಯಾಗಿದೆ ಎಂದು ಸುದ್ದಿ ಹರಡಿದೆ. ಆದರೆ ಅಂತಹ ಯಾವ ಆತಂಕವೂ ಬೆಳೆಗಾರರಿಗೆ ಸದ್ಯ ಬೇಕಾಗಿಲ್ಲ. ಈ ಹಿಂದೆಯೇ ಮಾಹಿತಿ ನೀಡಿದಂತೆ ಚೌತಿ ಹತ್ತಿರವಾಗುತ್ತಿದ್ದಂತೆಯೇ ಅಡಿಕೆ ದಾಸ್ತಾನು ಆರಂಭವಾಗುತ್ತದೆ. ಚೌತಿ ಬಳಿಕ ಮತ್ತೆ ಏರಿಕೆಯಾಗುತ್ತದೆ. ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಅಡಿಕೆಯು ಮಾರುಕಟ್ಟೆಗೆ ಬಂದಿರಲಿಲ್ಲ. ಹೀಗಾಗಿ ಅಡಿಕೆ ದಾಸ್ತಾನು ಕೊರತೆ ತುಂಬಲು ಸಾಧ್ಯವಾಗಿಲ್ಲ ಎನ್ನುವ ಮಾಹಿತಿ ಬೆಳೆಗಾರರಿಗೆ ತಿಳಿದಿರಬೇಕು. ಮಾರುಕಟ್ಟೆಯಲ್ಲಿ ಅಡಿಕೆಯ ಕೊರತೆ ಇದೆ ಎನ್ನುವುದೂ ಸದ್ಯದ ಇನ್ನೊಂದು ಮಾಹಿತಿ. ಈಗಾಗಲೇ ಅಡಿಕೆಯ ಗರಿಷ್ಠ ಧಾರಣೆ ತಲುಪಿದೆ. ಸದ್ಯ ಕ್ಯಾಂಪ್ಕೋ ಹಳೆ ಅಡಿಕೆ 560 ಹಾಗೂ ಹೊಸ ಅಡಿಕೆ 475 ರೂಪಾಯಿಗೆ ಖರೀದಿ ಮಾಡಿದರೆ ಖಾಸಗಿ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಯಲ್ಲಿ ಹಳೆ ಅಡಿ 575 ಹಾಗೂ ಹೊಸ ಅಡಿಕೆ 490 ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ. ಶನಿವಾರ ಹಳೆ ಅಡಿಕೆ 565 ಹಾಗೂ ಹೊಸ ಅಡಿಕೆ 495 ರೂಪಾಯಿವರೆಗೂ ಖರೀದಿ ಮಾಡಿದ್ದರು.

Advertisement

ಅಡಿಕೆ ಬೆಳೆಗಾರರು ಮಾರುಕಟ್ಟೆಯ ಸಣ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು  ಉತ್ತಮ. ಅಡಿಕೆ ಮಾರುಕಟ್ಟೆ ಯಾವ ಕಾಲದಲ್ಲಿ ಹೇಗೆ ಮತ್ತು ಏಕೆ ಏರಿಕೆಯಾಗುತ್ತದೆ ಎಂಬುದನ್ನು ಆಗಾಗ ಮಾಹಿತಿ ಪಡೆದುಕೊಳ್ಳಬೇಕು. ಅಡಿಕೆ ಗರಿಷ್ಠ ಧಾರಣೆ ತಲುಪಿದ ನಂತರವೂ ಇನ್ನಷ್ಟು ಏರಿಕೆಯಾಗುತ್ತದೆ ಎನ್ನುವ ಸಕಾರಣವೇ ಇಲ್ಲದ  ಭವಿಷ್ಯವನ್ನು ನಂಬಲೂಬಾರದು. ಹೀಗಾಗಿಯೇ ಅಡಿಕೆ ಬೆಳೆಗಾರರು ಮಾರುಕಟ್ಟೆ ಏರುವ ಸಮಯದಲ್ಲಿ ಮಾರುಕಟ್ಟೆ ನೋಡುತ್ತಾ , ಇಳಿಕೆಯ ಸಮಯದಲ್ಲಿಯೇ ಹಲವಾರು ಬೆಳೆಗಾರರು ಅಡಿಕೆ ನೀಡಿ ನೆಮ್ಮದಿ ಪಡುತ್ತಾರೆ. ಹೀಗಾಗದೇ ಇರಲು ಅಡಿಕೆ ಮಾರುಕಟ್ಟೆ ಸೂಕ್ಷ್ಮವಾಗಿ ಗಮನಿಸುತ್ತಾ ಆಗಾಗ ಅಡಿಕೆಯನ್ನು ಮಾರುಕಟ್ಟೆಗೆ ನೀಡಿದರೆ, ಧಾರಣೆಯೂ ಸ್ಥಿರತೆ ಸಾಧಿಸಲು ಕಾರಣವಾಗುತ್ತದೆ, ಮಾರುಕಟ್ಟೆಯೂ ಯಥಾಸ್ಥಿತಿ ಇರುತ್ತದೆ.

ರಬ್ಬರ್‌ ಧಾರಣೆ ಮಾತ್ರಾ ಇಳಿಕೆಯ ಹಾದಿಯಲ್ಲಿಯೇ ಸಾಗುತ್ತಿದೆ. ಸದ್ಯ ರಬ್ಬರ್‌ ಧಾರಣೆ ಏರಿಕೆಯ ಲಕ್ಷಣವೂ ಇಲ್ಲ. 170 ರೂಪಾಯಿ ಆಸುಪಾಸಿನಲ್ಲಿದ್ದ ರಬ್ಬರ್‌ ಧಾರಣೆ ಈಗ 155 ರೂಪಾಯಿಗೆ ತಲುಪಿದೆ. ಇನ್ನಷ್ಟು ಇಳಿಕೆಯ ಲಕ್ಷಣಗಳು ಇದೆ. 150 ಆಸುಪಾಸಿಗೆ ಬಂದರೂ ಅಚ್ಚರಿ ಇಲ್ಲ ಎಂದು ಮಾರುಕಟ್ಟೆ ಸಮೀಕ್ಷೆಗಳು ಹೇಳಿವೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಕೇಂದ್ರ ಬಜೆಟ್‌ | ರೈತರಿಗೆ ಕಿಸಾನ್ ಕಾರ್ಡ್ ನಿಂದ ಪ್ರಯೋಜನ | ಕೃಷಿ ವಲಯಕ್ಕೆ 137757 ಕೋಟಿ ಅನುದಾನ |
February 6, 2025
7:40 AM
by: The Rural Mirror ಸುದ್ದಿಜಾಲ
ಆನೆಗಳ ಚಲನ ವಲನಗಳ ಬಗ್ಗೆ ಸ್ವದೇಶಿ ನಿರ್ಮಿತ ರೇಡಿಯೊ ಕಾಲರ್ ಅಳವಡಿಕೆ | ಅರಣ್ಯ ಸಚಿವ ಈಶ್ವರ್ ಖಂಡ್ರೆ
February 6, 2025
7:33 AM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ
February 5, 2025
6:45 AM
by: The Rural Mirror ಸುದ್ದಿಜಾಲ
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ  ಬೆಳೆಗಳಿಗೆ ರಾಸಾಯನಿಕ ಬಳಸಬೇಡಿ
February 5, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror