ನವರಾತ್ರಿ ಆರಂಭ | ದೇಶದೆಲ್ಲೆಡೆ ಸಂಭ್ರಮ | ಅಡಿಕೆ ಮಾರುಕಟ್ಟೆ ಸದ್ಯ ಸ್ಥಿರ | ರಬ್ಬರ್‌ ಧಾರಣೆಯಲ್ಲೂ ಸ್ಥಿರತೆ |

September 26, 2022
12:27 PM

ಅಡಿಕೆ ಮಾರುಕಟ್ಟೆಯು (Arecanut Market) ಇನ್ನು ಸುಮಾರು 10 ದಿನಗಳ ಕಾಲ ಬಹುತೇಕವಾಗಿ ಸ್ಥಿರತೆ ಕಾಣುವ ಕಾಲ. ದೇಶದಾದ್ಯಂತ ನವರಾತ್ರಿ ಹಬ್ಬವು ಸಂಭ್ರಮದಿಂದ ಆಚರಿಸುವ ಹೊತ್ತಿನಲ್ಲಿ ಅಡಿಕೆ ವ್ಯಾಪಾರ, ವ್ಯವಹಾರವು ಬಹುತೇಕ ಸಂದರ್ಭದಲ್ಲಿ ಸ್ಥಿರವಾಗಿರುತ್ತದೆ. ನವರಾತ್ರಿ ನಂತರ ದೀಪಾವಳಿವರೆಗೂ ಅಡಿಕೆ ಧಾರಣೆ ಏರಿಕೆಯ ಕಾಲವಾಗುತ್ತದೆ. ಈ ಬಾರಿಯೂ ಮತ್ತೆ ಅದೇ ಟ್ರೆಂಡ್‌ ಕಾಣುತ್ತಿದೆ. ಸದ್ಯ ಅಡಿಕೆ ಮಾರುಕಟ್ಟೆ ಸ್ಥಿರವಾಗಿದೆ.

Advertisement
Advertisement
Advertisement

ಸದ್ಯ ಕ್ಯಾಂಪ್ಕೋದಲ್ಲಿ ಚಾಲಿ ಹೊಸ ಅಡಿಕೆ 475 ,ಖಾಸಗಿ ಮಾರುಕಟ್ಟೆಯಲ್ಲಿ 485 ರೂಪಾಯಿಗೆ ಖರೀದಿ ನಡೆಯುತ್ತಿದೆ. ಹಳೆ ಚಾಲಿ ಅಡಿಕೆಗೆ 560 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡುತ್ತಿದ್ದರೆ ಖಾಸಗಿ ಮಾರುಕಟ್ಟೆಯಲ್ಲಿ 565-570 ರೂಪಾಯಿಗೆ ಖರೀದಿ ನಡೆಯುತ್ತಿದೆ.

Advertisement

ರಬ್ಬರ್‌ ಧಾರಣೆ ಮಾತ್ರಾ ಈ ಬಾರಿ ಏರಿಕೆಯ ಲಕ್ಷಣಗಳು ಕಾಣುತ್ತಿಲ್ಲ. ರಬ್ಬರ್‌ ಆಮದು ಪ್ರಮಾಣ ಹೆಚ್ಚಿರುವುದು  ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಣೆಗಳು ಹೇಳಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ರಬ್ಬರ್‌ ಉತ್ಪಾದನೆ ಹೆಚ್ಚಾಗಿರುವುದು  ಅಂತರಾಷ್ಟ್ರೀಯ ಮಟ್ಟದಲ್ಲಿ ರಬ್ಬರ್‌ ಧಾರಣೆ ಇಳಿಕೆಗೆ ಕಾರಣವಾಗಿದೆ. ಭಾರತದಲ್ಲಿ ರಬ್ಬರ್‌ ಈಗ ವಾಣಿಜ್ಯ ಇಲಾಖೆಯ ಅಡಿಯಲ್ಲಿ ಇರುತ್ತದೆ, ರಬ್ಬರ್‌ ಆಮದಿಗೆ ಅವಕಾಶ ಇದೆ. ಭಾರತವು ಇಲ್ಲಿನ ರಬ್ಬರ್‌ ಬೆಳೆಯನ್ನೇ ಹೆಚ್ಚಾಗಿ ಬಳಕೆ ಮಾಡುವಂತೆ ಒತ್ತಾಯವನ್ನು ಹೇರಲಾಗುತ್ತಿದೆ. ಇದಕ್ಕಾಗಿ ರಬ್ಬರ್‌ ಆಮದು ಕನಿಷ್ಟ ಬೆಲೆಯನ್ನು ಏರಿಕೆ ಮಾಡಲು ಒತ್ತಾಯ ಕೇಳಿಬಂದಿದೆ. ಕೇರಳದಲ್ಲಿ ಅಧಿಕ ಪ್ರಮಾಣದಲ್ಲಿ ರಬ್ಬರ್‌ ಬೆಳೆಯುತ್ತಿದ್ದರೆ ಉಳಿದೆಲ್ಲಾ ರಾಜ್ಯಗಳಲ್ಲಿ ಅಲ್ಪ ಪ್ರಮಾಣದಲ್ಲಿ ರಬ್ಬರ್‌ ಕೃಷಿ ಇದೆ. ಈಚೆಗೆ ಒರಿಸಾ ಪ್ರದೇಶದಲ್ಲೂ ರಬ್ಬರ್‌ ಬೆಳೆಯನ್ನು ಬೆಳೆಸಲು ಕೃಷಿಕರು ಆಸಕ್ತರಾಗಿದ್ದಾರೆ.ಇದೆಲ್ಲದರ ನಡುವೆಯೂ ರಬ್ಬರ್‌ ಧಾರಣೆ ಇಳಿಕೆಯ ಹಾದಿಯಲ್ಲಿದೆ. ಸೋಮವಾರ 145.50 ರೂಪಾಯಿಗೆ ಖರೀದಿಯಾಗುತ್ತಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |
November 22, 2024
9:02 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |
November 22, 2024
2:32 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror