ಅಡಿಕೆ ಮಾರುಕಟ್ಟೆಯು (Arecanut Market) ಇನ್ನು ಸುಮಾರು 10 ದಿನಗಳ ಕಾಲ ಬಹುತೇಕವಾಗಿ ಸ್ಥಿರತೆ ಕಾಣುವ ಕಾಲ. ದೇಶದಾದ್ಯಂತ ನವರಾತ್ರಿ ಹಬ್ಬವು ಸಂಭ್ರಮದಿಂದ ಆಚರಿಸುವ ಹೊತ್ತಿನಲ್ಲಿ ಅಡಿಕೆ ವ್ಯಾಪಾರ, ವ್ಯವಹಾರವು ಬಹುತೇಕ ಸಂದರ್ಭದಲ್ಲಿ ಸ್ಥಿರವಾಗಿರುತ್ತದೆ. ನವರಾತ್ರಿ ನಂತರ ದೀಪಾವಳಿವರೆಗೂ ಅಡಿಕೆ ಧಾರಣೆ ಏರಿಕೆಯ ಕಾಲವಾಗುತ್ತದೆ. ಈ ಬಾರಿಯೂ ಮತ್ತೆ ಅದೇ ಟ್ರೆಂಡ್ ಕಾಣುತ್ತಿದೆ. ಸದ್ಯ ಅಡಿಕೆ ಮಾರುಕಟ್ಟೆ ಸ್ಥಿರವಾಗಿದೆ.
ಸದ್ಯ ಕ್ಯಾಂಪ್ಕೋದಲ್ಲಿ ಚಾಲಿ ಹೊಸ ಅಡಿಕೆ 475 ,ಖಾಸಗಿ ಮಾರುಕಟ್ಟೆಯಲ್ಲಿ 485 ರೂಪಾಯಿಗೆ ಖರೀದಿ ನಡೆಯುತ್ತಿದೆ. ಹಳೆ ಚಾಲಿ ಅಡಿಕೆಗೆ 560 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡುತ್ತಿದ್ದರೆ ಖಾಸಗಿ ಮಾರುಕಟ್ಟೆಯಲ್ಲಿ 565-570 ರೂಪಾಯಿಗೆ ಖರೀದಿ ನಡೆಯುತ್ತಿದೆ.
ರಬ್ಬರ್ ಧಾರಣೆ ಮಾತ್ರಾ ಈ ಬಾರಿ ಏರಿಕೆಯ ಲಕ್ಷಣಗಳು ಕಾಣುತ್ತಿಲ್ಲ. ರಬ್ಬರ್ ಆಮದು ಪ್ರಮಾಣ ಹೆಚ್ಚಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಣೆಗಳು ಹೇಳಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ರಬ್ಬರ್ ಉತ್ಪಾದನೆ ಹೆಚ್ಚಾಗಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ರಬ್ಬರ್ ಧಾರಣೆ ಇಳಿಕೆಗೆ ಕಾರಣವಾಗಿದೆ. ಭಾರತದಲ್ಲಿ ರಬ್ಬರ್ ಈಗ ವಾಣಿಜ್ಯ ಇಲಾಖೆಯ ಅಡಿಯಲ್ಲಿ ಇರುತ್ತದೆ, ರಬ್ಬರ್ ಆಮದಿಗೆ ಅವಕಾಶ ಇದೆ. ಭಾರತವು ಇಲ್ಲಿನ ರಬ್ಬರ್ ಬೆಳೆಯನ್ನೇ ಹೆಚ್ಚಾಗಿ ಬಳಕೆ ಮಾಡುವಂತೆ ಒತ್ತಾಯವನ್ನು ಹೇರಲಾಗುತ್ತಿದೆ. ಇದಕ್ಕಾಗಿ ರಬ್ಬರ್ ಆಮದು ಕನಿಷ್ಟ ಬೆಲೆಯನ್ನು ಏರಿಕೆ ಮಾಡಲು ಒತ್ತಾಯ ಕೇಳಿಬಂದಿದೆ. ಕೇರಳದಲ್ಲಿ ಅಧಿಕ ಪ್ರಮಾಣದಲ್ಲಿ ರಬ್ಬರ್ ಬೆಳೆಯುತ್ತಿದ್ದರೆ ಉಳಿದೆಲ್ಲಾ ರಾಜ್ಯಗಳಲ್ಲಿ ಅಲ್ಪ ಪ್ರಮಾಣದಲ್ಲಿ ರಬ್ಬರ್ ಕೃಷಿ ಇದೆ. ಈಚೆಗೆ ಒರಿಸಾ ಪ್ರದೇಶದಲ್ಲೂ ರಬ್ಬರ್ ಬೆಳೆಯನ್ನು ಬೆಳೆಸಲು ಕೃಷಿಕರು ಆಸಕ್ತರಾಗಿದ್ದಾರೆ.ಇದೆಲ್ಲದರ ನಡುವೆಯೂ ರಬ್ಬರ್ ಧಾರಣೆ ಇಳಿಕೆಯ ಹಾದಿಯಲ್ಲಿದೆ. ಸೋಮವಾರ 145.50 ರೂಪಾಯಿಗೆ ಖರೀದಿಯಾಗುತ್ತಿದೆ.
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ…
ಸ್ನಾನದ ಮೂಲಕವೂ ನದಿಯನ್ನು ಆರಾಧಿಸಬಹುದೆಂಬ ಭಾರತೀಯ ಕಲ್ಪನೆ ನಿಜಕ್ಕೂ ಅದ್ಭುತವಾದುದು ಎಂಬುದಾಗಿ ಎರಿಕ್…
ತಾಪಮಾನ ಅಧಿಕವಾಗಿದ್ದರೂ, ರಾತ್ರಿಯ ವೇಳೆ ತಂಪು ವಾತಾವರಣ ಇರುವುದರಿಂದ ಮಳೆಯ ಸಾಧ್ಯತೆ ಕ್ಷೀಣಿಸುತ್ತಿದೆ.
ಪರಿಶುದ್ಧ ಮನಸ್ಸಿನಿಂದ ಶಿವನ ಧ್ಯಾನ, ಉಪಾಸನೆ ಮಾಡಿದಾಗ ಸಕಲ ಪಾಪ ಕರ್ಮಗಳ ಕೊಳೆ…
ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಷನ್ ಆದಿ ಯೋಗಿ ಪ್ರತಿಮೆಯ ಬಳಿ ಹಮ್ಮಿಕೊಂಡಿದ್ದ ಶಿವರಾತ್ರಿ…
ಮಹಾಶಿವರಾತ್ರಿಯ ಹಿನ್ನಲೆಯಲ್ಲಿ ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ಮಂದಿರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿ…