ಅಡಿಕೆ ಮಾರುಕಟ್ಟೆ | ಚಾಲಿ ಹಳೆ ಅಡಿಕೆ ಧಾರಣೆ ಏರಿಕೆ | ರಬ್ಬರ್‌ ಧಾರಣೆಯಲ್ಲೂ ಏರಿಕೆ |

October 10, 2022
11:47 AM

ಅಡಿಕೆ ಆಮದು ಚರ್ಚೆಯ ನಡುವೆಯೇ ಚಾಲಿ ಹಳೆ ಅಡಿಕೆ ಧಾರಣೆ ಮತ್ತೆ ಏರಿಕೆ ಕಂಡಿದೆ. 5 ರೂಪಾಯಿ ಏರಿಕೆಯಾದ ಬಳಿಕ ಚಾಲಿ ಹಳೆ ಅಡಿಕೆ ಧಾರಣೆ ಈಗ 485 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡುತ್ತಿದೆ. ಇದೇ ವೇಳೆ ರಬ್ಬರ್‌ ಧಾರಣೆಯಲ್ಲೂ ಏರಿಕೆ ಕಂಡಿದೆ. ಸದ್ಯ ರಬ್ಬರ್‌ ಧಾರಣೆ 152 ರೂಪಾಯಿಗೆ ಏರಿಕೆಯಾಗಿದೆ.

Advertisement
Advertisement
Advertisement

ಹೊಸ ಚಾಲಿ ಅಡಿಕೆ ಮಾರುಕಟ್ಟೆಗೆ ಬರಲು ಆರಂಭವಾಗಿದ್ದು 380 ರೂಪಾಯಿಗೆ ಖರೀದಿ ನಡೆಯುತ್ತಿದೆ.ವಾರಗಳ ಹಿಂದೆ  ಹಳೆ ಚಾಲಿ ಅಡಿಕೆ ಧಾರಣೆಯನ್ನು ಕ್ಯಾಂಪ್ಕೋ 5 ರೂಪಾಯಿ ಏರಿಕೆ ಮಾಡಿತ್ತು. ಇದೀಗ ಮತ್ತೆ 5 ರೂಪಾಯಿಗೆ ಏರಿಕೆ ಮಾಡುವ ಮೂಲಕ 485 ರೂಪಾಯಿಗೆ ಹಳೆ ಅಡಿಕೆ ಖರೀದಿ ನಡೆಸುತ್ತಿದೆ.ಚೋಲ್‌ ಅಡಿಕೆ 560 ರೂಪಾಯಿಗೆ ಖರೀದಿ ಮಾಡಲಾಗುತ್ತಿದೆ.  ರಬ್ಬರ್‌ ಧಾರಣೆಯಲ್ಲಿ ಏರಿಕೆಯ ಲಕ್ಷಣ ಕಂಡಿದೆ. ಸದ್ಯ RSS4 ರಬ್ಬರ್‌ ಗೆ 152  ರೂಪಾಯಿ ಹಾಗೂ ಲಾಟ್‌ ರಬ್ಬರ್‌ ಗೆ 135 ರೂಪಾಯಿಗೆ ಖರೀದಿಯಾಗುತ್ತಿದೆ.

Advertisement

ಇದೇ ವೇಳೆ ಖಾಸಗಿ ವಲಯದಲ್ಲೂ ಅಡಿಕೆ ಮಾರುಕಟ್ಟೆಯಲ್ಲಿ ಏರಿಕೆಯ ವಾತಾವರಣ ಕಂಡಬಂದಿದೆ. ಸದ್ಯ ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಬೇಡಿಕೆ ವ್ಯಕ್ತವಾಗಿದೆ. ಆಮದು ಅಡಿಕೆಯು ಚಾಲಿ ಅಡಿಕೆಯ ಮೇಲೆ ಹಾಗೂ ಭಾರತದ ಅಡಿಕೆ ಮಾರುಕಟ್ಟೆಯಲ್ಲಿ ಸದ್ಯ ಯಾವುದೇ ಸಮಸ್ಯೆ ಬೀರುವುದಿಲ್ಲ. ಈ ವರ್ಷವೂ ಉತ್ತಮ ಧಾರಣೆ ಅಡಿಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಈ ನಡುವೆಯೇ ಚಿಲ್ಲರೆ ಪ್ರಮಾಣದಲ್ಲಿ ಅಡಿಕೆಯನ್ನು ಬರ್ಮಾ ಸೇರಿದಂತೆ ಇತರ ದೇಶಗಳಿಂದ ಕಳ್ಳ ಸಾಗಾಣಿಕೆ ಮೂಲಕ ತರಲಾಗುತ್ತಿದೆ.  ಬಿಹಾರದಲ್ಲಿ ಪ್ಯಾಸೆಂಜರ್ ರೈಲಿನ ಸೀಟಿನ ಕೆಳಗೆ ಇರಿಸಿ ಸುಮಾರು 700 ಕೆಜಿಯಷ್ಟು ಅಡಿಕೆಯನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಲ್ಲಿನ ರೈಲ್ವೇ ಅಧಿಕಾರಿಗಳು ಪತ್ತೆ ಮಾಡಿ ಕಳ್ಳಸಾಗಣೆ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಹೀಗಾಗಿ ಈಗ ಅಡಿಕೆ ಕಳ್ಳ ಸಾಗಾಣಿಕೆ ತಡೆಯನ್ನು ಅಧಿಕಾರಿ ಮಾಡುತ್ತಲೇ ಇದ್ದಾರೆ. ಇದು ಅಡಿಕೆ ಮಾರುಕಟ್ಟೆಗೆ ಪೂರಕ ವಾತಾವರಣ ಸೃಷ್ಟಿ ಮಾಡಿದೆ.

 

Advertisement

 

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಭಾರತದಲ್ಲಿ ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜನ | ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್​ಆರ್​ಐ
April 24, 2024
9:33 PM
by: The Rural Mirror ಸುದ್ದಿಜಾಲ
ಪ್ಯಾರೀಸ್‌ನಲ್ಲಿ ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ಗೆ ಕೆಲವೇ ದಿನ ಬಾಕಿ | ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌ | ಒಲಿಂಪಿಕ್ಸ್‌ನಲ್ಲಿರಲಿದೆ ನೂರಾರು ವಿಶೇಷ
April 24, 2024
9:02 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror