ಅಡಿಕೆ ಮಾರುಕಟ್ಟೆ | ಚಾಲಿ ಅಡಿಕೆ ಧಾರಣೆಯಲ್ಲಿ ಏಕೆ ಏರಿಳಿತ ? | ಏರಿಳಿತಕ್ಕೆ ಕಾರಣಗಳು ಏನು ? |

November 15, 2022
10:00 AM

ಅಡಿಕೆ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಏರಿಳಿತಗಳು ಕಂಡುಬಂದಿದೆ. ಖಾಸಗಿ ಮಾರುಕಟ್ಟೆ ಹಾಗೂ ಕ್ಯಾಂಪ್ಕೋ ಮತ್ತು ಇತರ ಸಹಕಾರಿ ಸಂಸ್ಥೆಗಳ ಧಾರಣೆಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ನವೆಂಬರ್‌ ಬಳಿಕ ಅಡಿಕೆ ಮಾರುಕಟ್ಟೆಯಲ್ಲಿ ಉತ್ಸಾಹ ಕಂಡುಬರುವ ಹೊತ್ತಲ್ಲ ಧಾರಣೆ ಏಕೆ ಕಳೆಗುಂದಿದೆ ಎಂಬುದು  ಕುತೂಹಲದ ಪ್ರಶ್ನೆಯಾಗಿದೆ.

ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ 380, ಹಳೆ ಅಡಿಕೆ 485, ಚೋಲ್‌ 550 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡುತ್ತಿತ್ತು. ಈಗ ಚೋಲ್‌ ಅಡಿಕೆ ಧಾರಣೆಯಲ್ಲಿ  ಇಳಿಕೆ ಮಾಡಿದೆ. ಇದೇ ವೇಳೆ ಖಾಸಗಿ ಮಾರುಕಟ್ಟೆಯಲ್ಲಿ  ಹೊಸ ಅಡಿಕೆ 390 ರೂಪಾಯಿ ಹಳೆದ ಅಡಿಕೆ 480 ರೂಪಾಯಿ ಹಾಗೂ ಚೋಲ್‌ ಅಡಿಕೆ 555 ರೂಪಾಯಿಗೆ ಖರೀದಿ ನಡೆಸುತ್ತಿದ್ದಾರೆ.  ಕಳೆದ ಒಂದು ವಾರದಿಂದ ಹಳೆ ಅಡಿಕೆ ಮಾರುಕಟ್ಟೆಯಲ್ಲಿ ಉತ್ಸಾಹ ಕಡಿಮೆಯಾಗಿದೆ. ಇದೇ ಟ್ರೆಂಡ್‌ ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.

ಗುಜರಾತ್‌ ಚುನಾವಣೆ ಘೋಷಣೆಯಾದ ಬಳಿಕ ಅಡಿಕೆ ಮಾರುಕಟ್ಟೆಯಲ್ಲೂ ಪ್ರಭಾವ ಕಂಡಿದೆ. ಚುನಾವಣೆ ಘೋಷಣೆಯಾದ ಬಳಿಕ ತಪಾಸಣೆಗಳು ನಡೆಯುತ್ತಿದೆ. ಚೆಕ್‌ ಪೋಸ್ಟ್‌ಗಳು, ಬಿಲ್‌ ಸೇರಿದಂತೆ ಹಲವು ಕಡೆ ತಪಾಸಣೆ ನಡೆಯುತ್ತದೆ. ಹೀಗಾಗಿ ಅಡಿಕೆ ಸಾಗಾಣಿಕೆಗೂ ಸಮಸ್ಯೆಯಾಗುತ್ತದೆ. ಆದರೆ ಬಿಲ್‌ , ಜಿಎಸ್‌ಟಿ ಸಹಿತ ಅಧಿಕೃತವಾಗಿ ಸಾಗಾಟ ಮಾಡುವ ಸಂಸ್ಥೆಗಳು ಈ ಸಮಸ್ಯೆ ಉಂಟಾಗುವುದಿಲ್ಲ. ಕ್ಯಾಂಪ್ಕೋ ಹಾಗೂ ಇತರ ಸಹಕಾರಿ ಸಂಸ್ಥೆಗಳು ಈಗ ಅಧಿಕೃತವಾಗಿ ಸಾಗಾಟ, ಮಾರಾಟ ಮಾಡುವುದಕ್ಕೆ ಅಷ್ಟೊಂದು ಸಮಸ್ಯೆಯಾಗುವುದಿಲ್ಲ.

ಡಿಸೆಂಬರ್‌ ಮೊದಲ ವಾರದ ವರೆಗೆ ಗುಜರಾತ್‌ ಚುನಾವಣಾ ಬ್ಯುಸಿ ಇರುತ್ತದೆ. ಈ ತಿಂಗಳಲ್ಲಿ ಇನ್ನೂ 10 ದಿನಗಳ ಕಾಲ ಅಡಿಕೆ ಮಾರುಕಟ್ಟೆಯಲ್ಲಿ  ಏರಿಳಿತಗಳು ಕಂಡುಬರಬಹುದು. ಅದಾದ ಬಳಿಕ ಮತ್ತೆ ಅಡಿಕೆ ಮಾರುಕಟ್ಟೆ ಯಥಾಸ್ಥಿತಿಗೆ ಬರಲಿದೆ ಎನ್ನುವುದು  ಮಾರುಕಟ್ಟೆ ಮಾಹಿತಿ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?
September 30, 2026
7:21 AM
by: ದ ರೂರಲ್ ಮಿರರ್.ಕಾಂ
ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?
September 29, 2026
11:09 PM
by: ದ ರೂರಲ್ ಮಿರರ್.ಕಾಂ
ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?
September 29, 2026
10:23 PM
by: ದ ರೂರಲ್ ಮಿರರ್.ಕಾಂ
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು
September 29, 2026
9:48 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror