ಅಡಿಕೆ ಮಾರುಕಟ್ಟೆಯಲ್ಲಿ ಸದ್ಯ ಏರಿಳಿತಗಳು ಕಂಡುಬಂದಿದೆ. ಅದರಲ್ಲೂ ಕೆಂಪಡಿಕೆ ಮಾರುಕಟ್ಟೆ ಕಳೆದ ಎರಡು ವಾರಗಳಿಂದ ಅಸ್ಥಿರವಾಗಿದೆ. ಶನಿವಾರ ಧಾರಣೆಯಲ್ಲಿ ಕುಸಿತ ಕಂಡಿದೆ. ಈ ನಡುವೆ ಚಾಲಿ ಅಡಿಕೆ ಮಾರುಕಟ್ಟೆ ಎರಡು ವಾರಗಳಿಂದ ಕಳೆಗುಂದಿದ್ದು ಧಾರಣೆ ಇಳಿಕೆಯಾಗಿ ಸ್ಥಿರವಾಗುತ್ತಿದೆ. ಹೊಸ ಅಡಿಕೆ ಮಾರುಕಟ್ಟೆ ಬಹುತೇಕ ಏರುಗತಿಯ ನಿರೀಕ್ಷೆಯಲ್ಲಿದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿಅಡಿಕೆ ಧಾರಣೆ 50,049 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ಚಾಲಿ ಅಡಿಕೆ ಧಾರಣೆಯು 475 ರೂಪಾಯಿಯಿಂದ 480 ರೂಪಾಯಿವರೆಗೆ ಖರೀದಿ ನಡೆದಿದೆ. ಗುಜರಾತ್ ಚುನಾವಣೆ ಮುಗಿಯುವವರೆಗೂ ಇದೇ ರೀತಿಯ ಧಾರಣೆ ನಿರೀಕ್ಷೆ ಮಾಡಲಾಗಿದೆ. ಆ ಬಳಿಕ ಅಡಿಕೆ ಮಾರುಕಟ್ಟೆಯಲ್ಲಿ ಕುತೂಹಲಕಾರಿಯಾದ ಅಂಶವನ್ನು ನಿರೀಕ್ಷೆ ಮಾಡಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel