ಚಾಲಿ ಅಡಿಕೆ ಧಾರಣೆ ಏರಿಕೆ ಕಂಡಿದೆ. ಸಂಕ್ರಾಂತಿ ನಂತರ ಅಡಿಕೆ ಧಾರಣೆ ಏರಿಕೆಯಾಗಲಿದೆ ಎನ್ನುವ ಭರವಸೆ ನಿಜವಾಗಿದೆ. ಚಾಲಿ ಹಳೆ ಅಡಿಕೆ 500 ರೂಪಾಯಿ ಹಾಗೂ ಹೊಸ ಅಡಿಕೆ 400 ರೂಪಾಯಿಗೆ ಖರೀದಿ ಆರಂಭವಾಗಿದೆ. ಕ್ಯಾಂಪ್ಕೋ ಶನಿವಾರದಂದು ಹಳೆ ಅಡಿಕೆ ಧಾರಣೆಯನ್ನು 5 ರೂಪಾಯಿ ಏರಿಕೆ ಮಾಡುವ ಮೂಲಕ ಹಳೆ ಅಡಿಕೆ ಧಾರಣೆ 500 ರೂಪಾಯಿ ಹಾಗೂ ಹೊಸ ಅಡಿಕೆ ಧಾರಣೆ 400 ರೂಪಾಯಿಗೆ ತಲುಪಿದೆ. ಇದೇ ವೇಳೆ ಖಾಸಗಿ ಮಾರುಕಟ್ಟೆಯಲ್ಲಿ ನಿಧಾನವಾಗಿ ಏರಿಕೆ ಕಾಣುತ್ತಿದೆ. ಈ ಬಾರಿ ಹಳೆ ಅಡಿಕೆ ಹಾಗೂ ಹೊಸ ಅಡಿಕೆ ನಡುವೆ 100 ರೂಪಾಯಿ ವ್ಯತ್ಯಾಸ ಕಂಡುಬಂದಿದೆ. ಈ ವ್ಯತ್ಯಾಸ ಕಡಿಮೆಯಾಗಲಿದೆ , ಹೊಸ ಅಡಿಕೆ ಧಾರಣೆ ಸುಮಾರು 450 ರೂಪಾಯಿ ಆಸುಪಾಸಿಗೆ ತಲುಪಬಹುದು ಎನ್ನುವುದು ಮಾರುಕಟ್ಟೆ ವಲಯದ ಅಭಿಪ್ರಾಯ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಅಡಿಕೆ ಧಾರಣೆ ಏರಿಕೆ | ಚಾಲಿ ಹಳೆ ಅಡಿಕೆ @500 | ಹೊಸ ಅಡಿಕೆ @400"