ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಸಂಚಲನ ಉಂಟಾಗುತ್ತಿದೆ. ಕಳೆದ ಒಂದು ವಾರದಿಂದ ಚಾಲಿ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡುಬರುತ್ತಿದೆ. ಬೇಡಿಕೆಗಳೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಧಾರಣೆಯಲ್ಲೂ ಏರಿಕೆ ಕಂಡುಬಂದಿದೆ. ಇದೀಗ ಹೊಸ ಅಡಿಕೆ 450 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಆರಂಭಿಸಿದೆ. ಹಳೆ ಅಡಿಕೆಯನ್ನು 470 ರೂಪಾಯಿಗೆ ಖರೀದಿ ನಡೆಯುತ್ತಿದೆ. ಇದೇ ವೇಳೆ ಖಾಸಗಿ ಮಾರುಕಟ್ಟೆಯಲ್ಲಿ ಹೊಸ ಅಡಿಕೆ 455-460 ರೂಪಾಯಿವರೆಗೂ ಖರೀದಿ ಆರಂಭವಾಗಿದೆ. ಹಳೆ ಅಡಿಕೆ 480 ರೂಪಾಯಿವರೆಗೂ ಖರೀದಿ ನಡೆಯುತ್ತಿದೆ. ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಅಡಿಕೆ ಧಾರಣೆ ಇನ್ನಷ್ಟು ಏರಿಕೆ ಸಾಧ್ಯತೆ ಇದೆ. ಹಳೆ ಅಡಿಕೆ ಸದ್ಯ ಏರಿಕೆ ನಿರೀಕ್ಷೆ ಇಲ್ಲ. ಗಣೇಶ ಚತುರ್ಥಿ ಬಳಿಕ ಹಳೆ ಅಡಿಕೆ ಧಾರಣೆ ಕೂಡಾ ಏರಿಕೆ ಸಾಧ್ಯತೆ ಇದೆ ಎನ್ನುವುದು ಮಾರುಕಟ್ಟೆ ವಲಯದ ಅಭಿಪ್ರಾಯ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel