ಅಡಿಕೆ ಮಾರುಕಟ್ಟೆ ಏಕೆ ಇಳಿಕೆಯಾಗುತ್ತಿದೆ…? | ಬರ್ಮಾ ಅಡಿಕೆ ಮಿಕ್ಸ್‌ ಆಗುತ್ತಿದೆಯೇ ಇಲ್ಲಿನ ಅಡಿಕೆಗೆ….? | ಬೆಳೆಗಾರರು ಮಾಡಬೇಕಾದ್ದೇನು..?

October 13, 2023
11:29 PM
ಕಳೆದ ಒಂದು ವಾರದಿಂದ ಅಡಿಕೆ ಧಾರಣೆ ಸ್ಥಿರತೆಯಲ್ಲಿ ಇಲ್ಲ.ಇದೀಗ ಬರ್ಮಾ ಅಡಿಕೆಯ ಹಾವಳಿ ಹೆಚ್ಚಾಗಿದೆ. ಇಲ್ಲಿನ ಅಡಿಕೆಯ ಜೊತೆಗೆ ಬರ್ಮಾ ಅಡಿಕೆ ಸೇರಿಸಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಶಂಕೆ ಇದೆ. ಅಡಿಕೆ ಬೆಳೆಗಾರರು ಈಗ ತೀರಾ ಎಚ್ಚರಿಕೆ ವಹಿಸಬೇಕಿದೆ.

ಕಳೆದ ಒಂದು ವಾರದಿಂದ ಅಡಿಕೆ ಧಾರಣೆ ಸ್ಥಿರತೆಯಲ್ಲಿ ಇಲ್ಲ.ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಈಗಿನ ಟ್ರೆಂಡ್‌ ಪ್ರಕಾರ ಚಾಲಿ ಅಡಿಕೆ ಮಾರುಕಟ್ಟೆಯು 420 ಹಾಗೂ 425 ರೂಪಾಯಿ ಆಸುಪಾಸಿಗೆ ಬರಲಿದೆ. ಈ ನಡುವೆಯೇ ಅಡಿಕೆ ಮಾರುಕಟ್ಟೆಯನ್ನು ಅಸ್ಥಿರ ಮಾಡುವ ಪ್ರಯತ್ನವೂ ನಡೆಯುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಬರ್ಮಾ ಅಡಿಕೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗೆ ಬಂದಿದೆ ಎನ್ನುವ ಮಾಹಿತಿ ಇದೆ. ಇದಕ್ಕಾಗಿ ಅಡಿಕೆ ಬೆಳೆಗಾರರು ಜಾಗೃತರಾಗಬೇಕಿದೆ.

Advertisement
Advertisement
Advertisement

ಅಡಿಕೆ ಧಾರಣೆ ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಿದೆ. ಎರಡು ದಿನಗಳ ಹಿಂದೆ ಚಾಲಿ ಹಳೆ ಅಡಿಕೆ ಧಾರಣೆ ಏರಿಕೆ ಎಂದು ಖಾಸಗಿ ವಲಯದಲ್ಲಿ ಹೇಳಿದ್ದರೂ, ಮತ್ತೆ ಇಳಿಕೆಯಲ್ಲಿದೆ. ಹೊಸ ಚಾಲಿ ಅಡಿಕೆಯಲ್ಲೂ ಏರಿಕೆ ಕಾಣಲಿಲ್ಲ. ಚೋಲ್‌ ಅಡಿಕೆ ಮಾರುಕಟ್ಟೆಯೂ ತೇಜಿ ಇಲ್ಲ. ಈ ನಡುವೆ ಧಾರಣೆ ಮತ್ತಷ್ಟು ಇಳಿಕೆ ಮಾಡುವ ತಂತ್ರ ನಡೆಯುತ್ತಿದೆ ಎಂದು ಮಾರುಕಟ್ಟೆ ವಲಯ ಅಭಿಪ್ರಾಯಪಡುತ್ತಿದೆ. ಇದಕ್ಕಾಗಿ ಅಡಿಕೆ ಬೆಳೆಗಾರರು ಎಚ್ಚರಿಕೆ ವಹಿಸಬೇಕಿದೆ.

Advertisement

ಕೃಷಿಕರ ಸಂಸ್ಥೆಯಾಗಿರುವ ಕ್ಯಾಂಪ್ಕೋ ಅಡಿಕೆ ಧಾರಣೆಯನ್ನು ಸ್ವಲ್ಪ ಮಟ್ಟಿಗೆ ಕುಸಿಯದಂತೆ ತಡೆದಿದೆ. ಕುಸಿತ ಕಾಣಲು ಬಿಡಲಿಲ್ಲ. ಹೀಗಾಗಿ ಈಗ ಏಕಾಏಕಿ ಹೆಚ್ಚಿನ ಪ್ರಮಾಣದ ಅಡಿಕೆಯನ್ನು ಕ್ಯಾಂಪ್ಕೋ ಮೂಲಕ ಮಾರಾಟ ಮಾಡುವ ತಂತ್ರ ನಡೆಯುತ್ತಿದೆ. ಈ ಮೂಲಕ ಅಡಿಕೆ ಮಾರುಕಟ್ಟೆಯನ್ನು ಇಳಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಕ್ಯಾಂಪ್ಕೋ ಮೂಲಕ ವಿವಿಧ ಕಡೆ ಕೆಲವು ಖಾಸಗಿ ವಲಯದ ವ್ಯಾಪಾರಿಗಳು ಅಡಿಕೆಯನ್ನು ಮಾರಾಟ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ಮಾರುಕಟ್ಟೆ ವಲಯದಿಂದ ಬಂದಿರುವ ಮಾಹಿತಿ.

ಒಮ್ಮೆಲೇ ಅಧಿಕ ಪ್ರಮಾಣದ ಅಡಿಕೆಯನ್ನು ಕ್ಯಾಂಪ್ಕೋ ಮೂಲಕ ಮಾರಾಟ ಮಾಡಿ ಮಾರುಕಟ್ಟೆಯನ್ನು ಮತ್ತಷ್ಟು ಇಳಿಕೆ ಮಾಡುವ ತಂತ್ರ ಇದು. ಆ ಬಳಿಕ ಮತ್ತೆ ಧಾರಣೆ ಏರಿಕೆ ಮಾಡಿ ಮದ್ಯವರ್ತಿಗಳು ಲಾಭಗಳಿಸುವ ವ್ಯವಸ್ಥಿತವಾದ ಜಾಲವೊಂದು ಇದರ ಹಿಂದೆ ಇದೆ ಎಂದು ಮಾಹಿತಿ.

Advertisement

ಇದರ ಜೊತೆಗೇ ಅಡಿಕೆ ಮಾರುಕಟ್ಟೆಯಲ್ಲಿ ಈಗ ಬರ್ಮಾ ಅಡಿಕೆ ಸದ್ದು ಮಾಡುತ್ತಿದೆ. ಗ್ರಾಮೀಣ ಭಾಗದವರೆಗೂ ಈ ಅಡಿಕೆ ಈಗ ಬರುತ್ತಿದೆ. ಬರ್ಮಾ ಅಡಿಕೆಯನ್ನು ಇಲ್ಲಿನ ಅಡಿಕೆ ಜೊತೆ ಮಿಶ್ರಣ ಮಾಡಿ ಕ್ಯಾಂಪ್ಕೋ ಸಹಿತ ಕೆಲವು ಕಡೆ ಮಾರಾಟ ಮಾಡುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಹಿಂದೆಯೂ ಇಂತಹದ್ದೇ ತಂತ್ರ ನಡೆದಿತ್ತು, ಆಗಲೂ ಅಡಿಕೆ ಧಾರಣೆ ಕುಸಿತ ಕಂಡಿತ್ತು.

ಹೀಗಾಗಿ ಈಗ ಅಡಿಕೆ ಬೆಳೆಗಾರರು ತೀರಾ ಎಚ್ಚರಿಕೆ ವಹಿಸಬೇಕಾಗಿದೆ. ಬೆಳೆಗಾರರು ನೇರವಾಗಿ ಸಹಕಾರಿ ಸಂಸ್ಥೆಗಳಿಗೆ ಅಥವಾ ಅಧಿಕೃತ ವ್ಯಾಪಾರಿಗಳಿಗೆ ಕೃಷಿಕರಿಗೆ ಅಗತ್ಯಕ್ಕೆ  ತಕ್ಕಂತೆ ಅಡಿಕೆ ಮಾರಾಟ ಮಾಡುವ ಮೂಲಕ ಅಡಿಕೆ ಮಾರುಕಟ್ಟೆಯನ್ನು ಸ್ಥಿರತೆ ಮಾಡುವಲ್ಲಿ ಪ್ರಯತ್ನ ನಡೆಸಬೇಕಿದೆ. ಕ್ಯಾಂಪ್ಕೋ ಕೂಡಾ  ಅಡಿಕೆ ಧಾರಣೆ ಸ್ಥಿರತೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಬರ್ಮಾ ಅಡಿಕೆ ಮಿಶ್ರಣಗೊಂಡು ಕ್ಯಾಂಪ್ಕೋ ಕೇಂದ್ರಗಳಿಗೂ ಬರುವ ಸಾಧ್ಯತೆ ಇರುವುದರಿಂದ ಬೆಳೆಗಾರರ ಹೊರತಾದ ಅಡಿಕೆ ಖರೀದಿಯ ವೇಳೆಯೂ ಎಚ್ಚರಿಕೆ ಅಗತ್ಯ ಇದೆ. ಈ ಹಿಂದೆ ಮಳೆಯ ಕಾರಣದಿಂದ ಅಡಿಕೆ ಗುಣಮಟ್ಟ ಕುಸಿತವಾಗಿ ಸಂಸ್ಥೆಗೆ ನಷ್ಟ ಉಂಟಾಗಿತ್ತು. ಈಗ ಮತ್ತೆ ಬರ್ಮಾದಂತಹ ಕಳಪೆ ಗುಣಮಟ್ಟದ ಅಡಿಕೆ ಸಂಸ್ಥೆಯ ಗೋದಾಮು ಸೇರದಂತೆ ಎಚ್ಚರ ವಹಿಸಬೇಕಿದೆ.

Advertisement

ಅಡಿಕೆ ಮಾರುಕಟ್ಟೆ ಕಳೆದ ಕೆಲವು ದಿನಗಳಿಂದಲೂ ಉತ್ಸಾಹದಲ್ಲಿ ಇಲ್ಲ. ಅಡಿಕೆ ಧಾರಣೆ  ವಿಪರೀತ ಏರಿಕೆಯ ಕಾರಣದಿಂದ  ಅಡಿಕೆ ಬಳಸುವ ಪ್ರದೇಶಗಳಲ್ಲಿ ಅಡಿಕೆ ಮಾರಾಟವೂ ಸಲೀಸಾಗಿ ನಡೆಯುತ್ತಿರಲಿಲ್ಲ. ಇದಕ್ಕಾಗಿ ಬೇಡಿಕೆಯ ಕೊರತೆ ಉಂಟಾಗಿ ಅಡಿಕೆ ಧಾರಣೆಯೂ ಇಳಿಕೆಯಾಗುತ್ತಿದೆ. ಇದರ ಜೊತೆಗೇ ಕಳಪೆ ಗುಣಮಟ್ಟದ ಬರ್ಮಾ ಅಡಿಕೆ ಹಾವಳಿ ಈಚೆಗೆ ಹೆಚ್ಚಾಗಿದೆ. ಇದೆಲ್ಲಾ ಕಾರಣದಿಂದ ಅಡಿಕೆ ಧಾರಣೆ ಸದ್ಯ ಇಳಿಕೆಯಾಗಿದೆ. ಪ್ರತೀ ಬಾರಿ ಚೌತಿಯ ನಂತರ ಅಡಿಕೆ ಧಾರಣೆ ಏರಿಕೆಯಾಗುತ್ತದೆ. ಈ ಬಾರಿ ಮಾತ್ರಾ ಇಳಿಕೆಯಾಗಿದೆ. ಈಗ ಅಡಿಕೆ ಬೆಳೆಗಾರರೂ ಎಚ್ಚರವಾಗಿದ್ದರೆ ಧಾರಣೆಯಲ್ಲಿ ಕೊಂಚ ಸುಧಾರಣೆ ಸಾಧ್ಯವಿದೆ. ಮುಂದಿನ 15 ದಿನಗಳ ಒಳಗೆ ಧಾರಣೆ ಸ್ಥಿರತೆ ಸಾಧ್ಯ ಇದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ ಮಾರಾಟಕ್ಕೆ ಶೀಘ್ರವೇ ರೈತರ ನೋಂದಣಿ ಕಾರ್ಯ 
November 28, 2024
11:11 PM
by: The Rural Mirror ಸುದ್ದಿಜಾಲ
ಡಿ.3 ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ | ರೈತರಿಗೆ ಮುನ್ನೆಚ್ಚರಿಕಾ ಸೂಚನೆ |
November 28, 2024
10:58 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ಮುಂದಿನ ಐದು ದಿನಗಳವರೆಗೆ ಶೀತಗಾಳಿ | ಹವಾಮಾನ ಇಲಾಖೆ ಮುನ್ಸೂಚನೆ
November 28, 2024
10:52 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 28.11.2024 | ರಾಜ್ಯದಲ್ಲಿ ಮುಂದುವರಿದ ಒಣಹವೆ | ನ.30ರಿಂದ ಮಳೆ ಸಾಧ್ಯತೆ |
November 28, 2024
12:09 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror