ನವೆಂಬರ್‌ ಅಡಿಕೆ ಅಕ್ರಮ ಸಾಗಾಟ ಸತತ ಪ್ರಯತ್ನದ ತಿಂಗಳು…! | ಅಡಿಕೆ ಸಾಗಾಟಕ್ಕೆ ತಡೆಯಾಗುತ್ತಲೇ ಇದೆ | 42 ಟನ್‌ ಅಡಿಕೆ ಸಾಗಾಟದ ಮತ್ತೊಂದು ಪ್ರಕರಣ ಪತ್ತೆ |

November 2, 2023
3:28 PM
ಅಡಿಕೆ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಇದೀಗ ಆರು ಟ್ರಕ್‌ಗಳಲ್ಲಿ ತುಂಬಿದ್ದ ಸುಮಾರು 42 ಟನ್ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದ್ದು,  ಅಸ್ಸಾಂ ರೈಫಲ್ಸ್ ಪ್ರಮುಖ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದೆ.

ಅಡಿಕೆ ಧಾರಣೆ ಸದ್ಯ ಸ್ಥಿರವಾಗಿದೆ. ಈ ನಡುವೆಯೇ ಅಡಿಕೆ ಅಕ್ರಮ ಸಾಗಾಟ, ಅಡಿಕೆ(Arecanut) ಆಮದು ಚಟುವಟಿಕೆ ನಡೆಯುತ್ತಲೇ ಇದೆ. ಇಲಾಖೆಗಳು ತಡೆಯೊಡ್ಡುತ್ತಲೇ ಇವೆ. ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳು ಅಡಿಕೆ ಸಾಗಾಟದ ಪ್ರಮುಖ ತಿಂಗಳು. ಇದೀಗ ಎರಡು ತಿಂಗಳಿನಿಂದ ಬರ್ಮಾ ಅಡಿಕೆ, ವಿದೇಶದಿಂದ ವಿವಿಧ ಹೆಸರಿನಲ್ಲಿ ಅಡಿಕೆ ಆಮದು ಪ್ರಯತ್ನ ನಡೆಯುತ್ತಿದೆ. ಈ ಎಲ್ಲದರ ನಡುವೆಯೇ 42 ಟನ್‌ ಅಡಿಕೆ ಅಸ್ಸಾಂನಲ್ಲಿ ತಡೆಯಾಗಿದೆ.

Advertisement
Advertisement
Advertisement
Advertisement

ಸಾಮಾನ್ಯವಾಗಿ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳು ಅಕ್ರಮ ಅಡಿಕೆ ಸಾಗಾಟದ, ಆಮದು ಮಾಡುವ ತಿಂಗಳು. ಹಳೆ ಅಡಿಕೆ ಮುಗಿಯುವ ಹಾಗೂ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರುವ ಸಮಯ. ಅದೇ ಸಮಯಕ್ಕೆ ಹೊಸದಾದ ಅಡಿಕೆ ಮಾರುಕಟ್ಟೆಗೆ ಬರುವ ಸಮಯ. ಚಾಲಿ ಅಡಿಕೆ ಹಾಗೂ ಕೆಂಪಡಿಕೆಯೂ ಮಾರುಕಟ್ಟೆ ಪ್ರವೇಶ ಮಾಡುವ ಸಮಯ. ಇದೇ ಸಮಯಕ್ಕೆ ಸರಿಯಾಗಿ ಕಡಿಮೆ ಗುಣಮಟ್ಟದ ಅಡಿಕೆಯನ್ನು ಕಡಿಮೆ ದರದಲ್ಲಿ ಆಮದು ಮಾಡಿ, ಕಳ್ಳದಾರಿಯ ಮೂಲಕ ಸಾಗಾಟ ಮಾಡಿ ಇಲ್ಲಿನ ಅಡಿಕೆಯ ಜೊತೆಗೆ ಬೆರೆಸಿ ಉತ್ತಮ ಧಾರಣೆಗೆ ಮಾರಾಟ ಮಾಡುವ ಪ್ರಕ್ರಿಯೆ ಈಚೆಗೆ ಎರಡು ವರ್ಷಗಳಿಂದ ಸಕ್ರಿಯವಾಗಿದೆ. ಧಾರಣೆ ಏರಿಕೆಯ ಬಳಿಕ ಇಂತಹ ಸವಾಲುಗಳು ಅಡಿಕೆ ಬೆಳೆಗಾರರಿಗೆ ಇದೆ. ಅಡಿಕೆ ಮಾರುಕಟ್ಟೆಯನ್ನು ಹಾಳು ಮಾಡುವ ಹಾಗೂ ಯಾರೋ ಕೆಲವು ಮದ್ಯವರ್ತಿಗಳು ಅಡಿಕೆ ಮಾರುಕಟ್ಟೆಯ ಮೂಲಕ ಲಾಭ ಪಡೆಯುವ ಹುನ್ನಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿಯೇ ಕಳೆದ ಎರಡು ತಿಂಗಳಲ್ಲಿ ಅನೇಕ ಕಳ್ಳಸಾಗಾಟದ ಅಡಿಕೆಯ ಪ್ರಕರಣ ಬಯಲಿಗೆ ಬಂದಿದೆ. ಇದೀಗ  ಆರು ಟ್ರಕ್‌ಗಳಲ್ಲಿ ತುಂಬಿದ್ದ ಸುಮಾರು 42 ಟನ್ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದ್ದು,  ಅಸ್ಸಾಂ ರೈಫಲ್ಸ್ ಪ್ರಮುಖ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದೆ.

Advertisement

ನವೆಂಬರ್‌ ಮಧ್ಯದವರೆಗೆ ಅಂದರೆ ದೀಪಾವಳಿವರೆಗೂ ಈ ಆಟ ನಡೆಯುವ ಸಾಧ್ಯತೆ ಇದೆ. ಅದಾದ ನಂತರ ಅಡಿಕೆ ಅಕ್ರಮ ಆಮದು ಮೇಲೆ ಕಡಿವಾಣವೂ ಹೆಚ್ಚಾಗಲಿದೆ. ಇಲ್ಲಿನ ಅಡಿಕೆಯೂ ಮಾರುಕಟ್ಟೆಗೆ ಸರಿಯಾಗಿ ಪ್ರವೇಶ ಮಾಡಲಿದೆ. ಹೀಗಾಗಿ ಅಡಿಕೆ ಧಾರಣೆ, ಅಡಿಕೆ ಮಾರುಕಟ್ಟೆ ಉಳಿಸುವಲ್ಲಿ ಇಲ್ಲಿನ ಅಡಿಕೆ ಬೆಳೆಗಾರರು ಈಗ ಮಹತ್ವದ ಪಾತ್ರವನ್ನು ವಹಿಸಿಕೊಳ್ಳಬೇಕಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ
February 25, 2025
7:20 AM
by: ದ ರೂರಲ್ ಮಿರರ್.ಕಾಂ
ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ
February 25, 2025
7:10 AM
by: The Rural Mirror ಸುದ್ದಿಜಾಲ
ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು
February 25, 2025
7:05 AM
by: The Rural Mirror ಸುದ್ದಿಜಾಲ
ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |
February 24, 2025
10:54 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror