ಅಡಿಕೆ ಧಾರಣೆ ದಾಖಲೆಯತ್ತ ದಾಪುಗಾಲು ಹಾಕುತ್ತಿರುವಂತೆಯೇ ಕ್ಯಾಂಪ್ಕೋ ಒಮ್ಮೆಲೇ 10 ರೂಪಾಯಿ ಏರಿಕೆ ಮಾಡಿದೆ. ಹೀಗಾಗಿ ಖಾಸಗೀ ವ್ಯಾಪಾರಿಗಳೂ ಧಾರಣೆ ಏರಿಕೆ ನಡೆಸುವ ಸಾಧ್ಯತೆ ಹೆಚ್ಚಿದೆ. ಗುರುವಾರ ಅಡಿಕೆ ಧಾರಣೆಯಲ್ಲಿ ಖಾಸಗೀ ವಲಯದಲ್ಲಿ ಏರಿಕೆ ಕಂಡರೂ ಕ್ಯಾಂಪ್ಕೋ ಧಾರಣೆಯಲ್ಲಿ ಏರಿಕೆ ಮಾಡಿಲ್ಲ. ಶುಕ್ರವಾರ ಒಮ್ಮೆಲೇ 10 ರೂಪಾಯಿ ಏರಿಕೆ ಮಾಡಿ 490 ರೂಪಾಯಿಗೆ ಹೊಸ ಅಡಿಕೆ ಹಾಗೂ ಹಳೆ ಅಡಿಕೆ 5 ರೂಪಾಯಿ ಏರಿಕೆ ಮಾಡಿ 510 ರೂಪಾಯಿಗೆ ಖರೀದಿ ಮಾಡುತ್ತಿದೆ. ಅಡಿಕೆ ಮಾರುಕಟ್ಟೆಯಲ್ಲಿ ಕ್ಯಾಂಪ್ಕೋ ಸೇರಿದಂತೆ ಸಹಕಾರಿ ಸಂಸ್ಥೆಗಳು ಒಮ್ಮೆಲೇ 10 ರೂಪಾಯಿ ಏರಿಕೆ ಮಾಡಿದ ಉದಾಹರಣೆಗಳು ತೀರಾ ಕಡಿಮೆ. ಈಗಿನ ಅಡಿಕೆ ಮಾರುಕಟ್ಟೆ ಪರಿಸ್ಥಿತಿ ಹಾಗೂ ಬೇಡಿಕೆಯ ಕಾರಣದಿಂದ ಅಡಿಕೆ ಧಾರಣೆಯು ಒಮ್ಮೆಲೇ ಜಂಪ್ ಕಾಣುತ್ತಿದೆ. ಅಡಿಕೆಯ ಅತ್ಯಧಿಕ ಧಾರಣೆ 500 ರೂಪಾಯಿ ಸಹಕಾರಿ ಸಂಘಗಳ ಮೂಲಕವೂ ಅಧಿಕೃತವಾಗಿ ತಲುಪಲಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel