ಅಡಿಕೆ ಮಾರುಕಟ್ಟೆ ಸ್ಥಿರವಾಗಿದೆ. ಇದೀಗ ಹೊಸ ಚಾಲಿ ಅಡಿಕೆಗೆ 425 ರೂಪಾಯಿ ದರ ನಿಗದಿಯಾಗಿದೆ. ಈ ಮೂಲಕ ಭರ್ಜರಿ ಧಾರಣೆಯ ಮೂಲಕ ಹೊಸ ಅಡಿಕೆ ಧಾರಣೆ ಮತ್ತೆ ಇತಿಹಾಸ ಬರೆದಿದೆ.
ಅಡಿಕೆ ಮಾರುಕಟ್ಟೆ ಕಳೆದ ಹಲವು ದಿನಗಳಿಂದ ಏರು ಹಾದಿಯಲ್ಲಿತ್ತು. ಚಾಲಿ ಅಡಿಕೆ ಧಾರಣೆ 500 ರೂಪಾಯಿ ದಾಟಿ ದಾಖಲೆ ಬರೆದಿತ್ತು. ಇದೀಗ ಹೊಸ ಅಡಿಕೆ ಧಾರಣೆಯಲ್ಲಿ ಕ್ಯಾಂಪ್ಕೋ ನಿಗದಿ ಮಾಡಿದ್ದು ಆರಂಭದಲ್ಲಿಯೇ ಹೊಸ ಚಾಲಿ ಅಡಿಕೆಗೆ 375 ರಿಂದ 425 ರೂಪಾಯಿ ಧಾರಣೆ ನಿಗದಿಯಾಗಿದೆ. ಹಳೆ ಅಡಿಕೆಗೆ 500 ರೂಪಾಯಿ ಹಾಗೂ ಡಬಲ್ ಚೋಲ್ ಗೆ 515 ರೂಪಾಯಿ ಧಾರಣೆ ಇದೆ.
ಈ ವರ್ಷದ ಚಾಲಿ ಅಡಿಕೆಗೆ ಆರಂಭದ ಬೆಲೆ ಅಡಿಕೆಗೆ 375 ರಿಂದ 425 ನಿಗದಿಯಾಗುವ ಮೂಲಕ ಈ ವರ್ಷ ಕನಿಷ್ ಬೆಲೆ 375 ರೂಪಾಯಿ ಸದ್ಯದ ಮಟ್ಟಿಗೆ ಇರುವುದು ಖಚಿತವಾಗಿದೆ. ಈಗ ಒಣಗಿದ ಅಡಿಕೆಗಳು ಮಾರುಕಟ್ಟೆ ಬರಲು ಆರಂಭಿಸಿದ್ದು. ಚೌತಿ ಬಳಿಕ ಹೊಸ ಅಡಿಕೆ ಹಳೆ ಅಡಿಕೆಯಾಗುತ್ತದೆ. ಈ ಮೂಲಕ ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ ಬದಲಾವಣೆಯಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಅಡಿಕೆ ಇಲ್ಲದೇ ಇರುವ ಕಾರಣದಿಂದ ಈ ಬಾರಿ ಆರಂಭದಿಂದಲೇ ಉತ್ತಮ ಧಾರಣೆ ಲಭ್ಯವಾಗಬಹುದು ಎನ್ನುವ ನಿರೀಕ್ಷೆ ಇದೆ. ಆದರೆ ಹೊಸ ಅಡಿಕೆ ಮಾರುಕಟ್ಟೆಯ ಸದ್ಯದ ಪರಿಸ್ಥಿತಿ ಬಗ್ಗೆ ಇನ್ನೂ ಖಚಿತವಾಗಿ ಹೇಳಲಾಗದು.