Advertisement
MIRROR FOCUS

ಅಡಿಕೆ ಇಳುವರಿಯ ಸಂಕಷ್ಟದ ನಡುವೆ ಮಾರುಕಟ್ಟೆಯ ಆತಂಕ | ಅಡಿಕೆಗೆ ಬೆಂಬಲ ಬೆಲೆಗೆ ಈಗ ಕಾಲವೇ..? | ಅಡಿಕೆ ಮಾರುಕಟ್ಟೆಗೆ ಈಗ ಆಗಬೇಕಾದ್ದೇನು ?

Share

ಅಡಿಕೆ(Arecanut) ಧಾರಣೆ ಏರಿಳಿತವಾಗುತ್ತಿದೆ. ಬೆಳೆಗಾರರಿಗೆ ಆತಂಕ ಸಹಜವಾಗಿಯೇ ಹೆಚ್ಚಾಗಿದೆ. ಅಡಿಕೆ ರೇಟು ಈಗ ಎಷ್ಟು? ಎಂದೇ ಎಲ್ಲರ ಪ್ರಶ್ನೆ. ಈ ನಡುವೆ ಅಡಿಕೆಯನ್ನು ಮುಂದಿರಿಸಿ ರಾಜಕೀಯದ ಆಟವೂ ಕಡಿಮೆ ಇಲ್ಲ. ಅಡಿಕೆ ಧಾರಣೆ ಏರಿಕೆಗೆ ಏನಾಗಬೇಕು ? ಅದೊಂದು ಬಿಟ್ಟು ಎಲ್ಲವೂ ಚರ್ಚೆಯಾಗುತ್ತಿದೆ. ಈಗ ಅಡಿಕೆ ಇಳುವರಿಯ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಧಾರಣೆ ಇಳಿಕೆಯೂ ಆತಂಕಕ್ಕೆ ಕಾರಣವಾಗಿದೆ. 

Advertisement
Advertisement
Advertisement

ಕಳೆದ ಎರಡು ತಿಂಗಳಿನಿಂದ ಅಡಿಕೆ ಮಾರುಕಟ್ಟೆ ಇಳಿಕೆಯ ಹಾದಿಯಲ್ಲಿದೆ. ಕಳೆದ ವರ್ಷ ಇದೇ ವೇಳೆಗೆ 400+ ಧಾರಣೆ ಇದ್ದ ಚಾಲಿ ಹೊಸ ಅಡಿಕೆಗೆ ಈಗ 320-330 ರೂಪಾಯಿ. ಅಂದರೆ ಸುಮಾರು 70-80 ರೂಪಾಯಿ ಇಳಿಕೆಯಾಗಿದೆ. ಆ ಕಡೆ ಕೆಂಪಡಿಕೆಗೂ ಧಾರಣೆ ಇಳಿಕೆಯಾಗಿದೆ. ಸುಮಾರು 4-5 ತಿಂಗಳಿನಿಂದ ಅಡಿಕೆ ಆಮದು, ಅಕ್ರಮ ಆಮದು ಬಗ್ಗೆ ಚರ್ಚೆಯಾಗುತ್ತಿದೆ. ಆಮದು ತಡೆಯಾಗಬೇಕು ಎಂಬ ಒತ್ತಾಯ ಹಲವು ಕಡೆಗಳಿಂದ ಕೇಳಿಬರುತ್ತಿತ್ತು. ಹಾಗಿದ್ದರೂ ಅಡಿಕೆ ಅಕ್ರಮವಾಗಿ ಒಳಹರಿವು ಕಡಿಮೆಯಾಗಿರಲಿಲ್ಲ. ಈ ಕಾರಣದಿಂದ ಸಹಜವಾಗಿಯೇ ಧಾರಣೆ ಇಳಿಕೆಯಾಗಿದೆ. ಈಗ ಈಗಲೂ ಸಹಕಾರಿ ಸಂಸ್ಥೆಗಳು ಅಡಿಕೆ ಆಮದು ತಡೆಗೆ ಒತ್ತಾಯ ಮಾಡುತ್ತಿವೆ. ಇದು ಸಹಜವಾದ ಪ್ರಕ್ರಿಯೆ. ಆಮದು ತಡೆಯಾದರೆ ಧಾರಣೆ ಏರಿಕೆಯಾಗುತ್ತದೆ ಎನ್ನುವುದು ಈಗಾಗಲೇ ತಿಳಿದಿದೆ ಕೂಡಾ. ಕೊರೋನಾ ಸಮಯದಲ್ಲಿ ದೇಶದ ಎಲ್ಲಾ ಗಡಿಗಳಲ್ಲೂ ತಡೆಯಾದ್ದರಿಂದ ಅಡಿಕೆ ಧಾರಣೆ ಏರಿಕೆಯಾಗಿ 500+ ದಾಟಿದೆ. ಹೀಗಾಗಿ ಈಗಲೂ ಆಗಬೇಕಾದ್ದು ದೇಶದ ಎಲ್ಲಾ ಗಡಿಗಳಲ್ಲೂ ಆಮದು ತಡೆಗೆ ಕ್ರಮ. ಡ್ರೈ ಪ್ರುಟ್ಸ್‌ ಹೆಸರಲ್ಲಿ ಬರುತ್ತಿರುವ ಅಡಿಕೆಗೂ ತಡೆ. ಇದೆರಡೂ ತಡೆಯಾದರೆ ಅಡಿಕೆ ಧಾರಣೆ ಸುಧಾರಿಸಲು ಸಾಧ್ಯವಿದೆ. ಈಗಾಗಲೇ ಅಡಿಕೆ ತಡೆಗೆ ಒತ್ತಾಯದ ಹಿನ್ನೆಲೆಯಲ್ಲಿ ಇಲಾಖೆಗಳೂ ಜಾಗೃತವಾಗಿರುವ ನಿರೀಕ್ಷೆಯಿಂದ ಆಮದಾಗಿರುವ ಅಡಿಕೆಯು ಮಾರುಕಟ್ಟೆ ಪ್ರವೇಶಕ್ಕೆ ತಡೆಯಾಗಿ, ಮುಂದಿನ 10 ದಿನಗಳ ಒಳಗಾಗಿ ಧಾರಣೆ ಏರಿಕೆಯ ನಿರೀಕ್ಷೆ ಇದೆ.

Advertisement

ಪ್ರತೀ ವರ್ಷವೂ ಕೂಡಾ ಫೆಬ್ರವರಿ ಆರಂಭದಿಂದ ಮಾರ್ಚ್‌ ಅಂತ್ಯದವರೆಗೂ  ಮಾರುಕಟ್ಟೆಯಲ್ಲಿ ಏರಿಳಿತ ಇರುತ್ತದೆ. ಜನವರಿ ನಂತರ ಹೊಸ ಅಡಿಕೆ ಮಾರುಕಟ್ಟೆಗೆ ಪ್ರವೇಶ ಮಾಡುತ್ತದೆ. ಈ ಅಡಿಕೆ ಗುಣಮಟ್ಟದಲ್ಲೂ ಅಷ್ಟೊಂದು ಉತ್ತಮ ಇರುವುದಿಲ್ಲ. ಈ ಕಾರಣದಿಂದ ಪ್ರತೀ ವರ್ಷವೂ ಧಾರಣೆಯಲ್ಲಿ ಇಳಿಕೆ ಇರುತ್ತದೆ. ಈ ಬಾರಿ ಆಮದು ಅಡಿಕೆ, ಕಳಪೆ ಅಡಿಕೆ ಆಮದು ಕಾರಣದಿಂದ ಧಾರಣೆ ಏರಿಕೆ ಕಾಣದೆ, ಗಣನೀಯವಾಗಿ ಇಳಿಕೆಯಾಗಿದೆ.

ಈ ವರ್ಷ ಅಡಿಕೆ ಬೆಳೆ ವಿಪರೀತ ಕಡಿಮೆಯಾಗಿದೆ. ವಾತಾವರಣ ಉಷ್ಣತೆ, ಹವಾಮಾನ ಬದಲಾವಣೆಯ ಕಾರಣದಿಂದ ವಿಪರೀತ ಸೆಖೆ ಹಾಗೂ ಉಷ್ಣತೆಯ ಕಾರಣದಿಂದ ಎಳೆ ಅಡಿಕೆ ಕಳೆದ ವರ್ಷ ವಿಪರೀತವಾಗಿ ಬಿದ್ದಿತ್ತು. ಕೆಲವು ಅಡಿಕೆ ಅಡಿಕೆ ಹಿಂಗಾರವೂ ಒಣಗಿತ್ತು. ಈ ಬಾರಿಯೂ ಅದೇ ಮಾದರಿಯ ವಾತಾವರಣ ಕಂಡುಬರುತ್ತಿದೆ. ಹೀಗಾಗಿ ಈ ಬಾರಿಯೂ ಇಳುವರಿ ಕುಸಿತದ ನಿರೀಕ್ಷೆ ಬೆಳೆಗಾರರಿಗೆ ಇದೆ. ಆದ್ದರಿಂದ ಅಡಿಕೆ ಇಳುವರಿ ಸುಮಾರು ಅರ್ಧದಷ್ಟು ಕುಸಿತವಾಗಿರುವ ವೇಳೆ ಧಾರಣೆಯೂ ಇಳಿಕೆಯಾಗಿ, ಬೆಳೆಗಾರರಿಗೆ ಸಹಜವಾಗಿಯೇ ಆತಂಕ ಇದೆ.

Advertisement

ಈ ನಡುವೆ ಕೇಳಿಬಂದಿರುವುದು ಅಡಿಕೆಗೆ ಬೆಂಬಲ ಬೆಲೆ ಘೋಷಣೆ. ಸಹಜವಾಗಿಯೇ ಬೆಳೆಗಾರರಿಗೆ ಈ ಬಗ್ಗೆ ನಿರೀಕ್ಷೆ ಇದೆ. ಆದರೆ ಈಗ ಅಡಿಕೆಗೆ ಬೆಂಬಲ ಬೆಲೆಗೆ ಕಾಲ ಪಕ್ವವೇ ಎನ್ನುವುದು. ಅಡಿಕೆ ಧಾರಣೆ ಈಗ ಹಳೆ ಅಡಿಕೆಗೆ 390+ ಇದೆ, ಹೊಸ ಅಡಿಕೆಗೆ 320-330+ ಇದೆ. ಇಂತಹ ಸಮಯದಲ್ಲಿ ಅಡಿಕೆಗೆ ಬೆಂಬಲ ಬೆಲೆಯ ಮಾತುಗಳನ್ನಾಡುವುದು ಧಾರಣೆ ಇಳಿಕೆಗೂ ಕಾರಣವಾಗುತ್ತದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಈಗ ಆಗಬೇಕಿರುವುದು ಅಡಿಕೆ ಆಮದು ತಡೆಗೆ ಬೇಕಾದ ಎಲ್ಲಾ ಕ್ರಮಗಳು. ಹಾಗಿದ್ದರೆ ಅಡಿಕೆಗೆ ಬೆಂಬಲ ಬೆಲೆ ಯಾವಾಗ ಅಗತ್ಯ ಎನ್ನುವುದು ಕೂಡಾ ಗಮನಿಸಬೇಕಾಗುತ್ತದೆ.

ಮೇಘಾಲಯದಲ್ಲಿ ಅಡಿಕೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು (MSP) ಎಂಬ ಒತ್ತಾಯ ಕೇಳಿಬಂದಿದೆ. ಸದ್ಯ ಮೇಘಾಲಯ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅಡಿಕೆಯೆ ಬೆಲೆ 140 ರಿಂದ250 ರೂಪಾಯಿವರೆಗೆ ಇದೆ. ಆದರೆ ಅಡಿಕೆಯ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಅಲ್ಲಿನ ಧಾರಣೆ ಇರುವುದರಿಂದ ಸಹಜವಾಗಿಯೇ ಅಲ್ಲಿ ಅಡಿಕೆಗೆ ಬೆಂಬಲ ಬೆಲೆ ನಿರೀಕ್ಷೆ ಇದೆ. ಇದಕ್ಕಾಗಿ ಅಲ್ಲಿನ ಸರ್ಕಾರವು ಕ್ರಮ ಕೈಗೊಳ್ಳಬೇಕಿದೆ.

Advertisement

ರಾಜ್ಯದಲ್ಲಿ ಸದ್ಯ ಅಂತಹ ಸ್ಥಿತಿ ಇಲ್ಲ. ರಾಜ್ಯ ಸರ್ಕಾರವು ಅಡಿಕೆ ಆಮದು ತಡೆಗೆ ಒತ್ತಾಯ ಹೇರಬೇಕು. ಅದರ ಹೊರತಾಗಿ ಅಡಿಕೆಯ ಹೆಸರಿನಲ್ಲಿ ರಾಜಕೀಯದ ಆಟಗಳು ನಡೆದರೆ ಬೆಳೆಗಾರರಿಗೆ ಯಾವ ಪ್ರಯೋಜನವೂ ಇಲ್ಲವಾಗುತ್ತದೆ. ಬೆಳೆಗಾರರಿಗೆ ಸಂಕಷ್ಟವೇ ಹೆಚ್ಚಾಗುತ್ತದೆ. ರಾಜ್ಯದಲ್ಲಿ ಮಲೆನಾಡು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಭಾಗದಲ್ಲಿ ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಪ್ರದೇಶದ ಕಡೆಗೆ ರಾಜ್ಯ ಸರ್ಕಾರವೂ ಗಮನಹರಿಸುತ್ತಿಲ್ಲ. ಅತ್ತ ಕಡೆ ಕೇಂದ್ರ ಸರ್ಕಾರವೂ ಇಲ್ಲಿನ  ಸಂಸದರ ಮನವಿಗಳನ್ನು, ಸಹಕಾರಿ ಸಂಸ್ಥೆಗಳ ಮನವಿಗಳಿಗೆ ಆದ್ಯತೆ ನೀಡಿದಂತೆಯೂ ಕಾಣುತ್ತಿಲ್ಲ. ಹೀಗಾಗಿ ಅಡಿಕೆ ಬೆಳೆಗಾರರು ನಿಜವಾಗೂ ಅಡಕತ್ತರಿಯಲ್ಲಿ ಸಿಕ್ಕಿದಂತಾಗಿದೆ.

ಬೆಂಬಲ ಬೆಲೆ ನಿಜವಾಗಿಯೂ ರೈತರಿಗೆ ಪ್ರಯೋಜನವನ್ನು ನೀಡುತ್ತದೆಯೇ?: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಇತ್ತೀಚೆಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಉತ್ಪಾದನಾ ವೆಚ್ಚದ ಮೇಲೆ ಎಂಎಸ್‌ಪಿಯನ್ನು 50% ಗೆ ಹೆಚ್ಚಿಸುವ ಸರ್ಕಾರದ ಕ್ರಮ ಮತ್ತು ಇದು ರೈತರಿಗೆ ಪ್ರಯೋಜನವನ್ನು ನೀಡುತ್ತದೆಯೇ ಎಂಬ ಬಗ್ಗೆ ಹೊಸ ಮಾತುಕತೆಗಳು ಪ್ರಾರಂಭವಾಗಿವೆ. ಪ್ರತೀ ಬಾರಿಯೂ ಈ ಚರ್ಚೆ ನಡೆಯುತ್ತದೆ.

Advertisement

1960 ರ ದಶಕದ ಆರಂಭದಲ್ಲಿ ಭಾರತವು ಸಿರಿಧಾನ್ಯಗಳ ಅಗಾಧ ಕೊರತೆಯನ್ನು ಎದುರಿಸುತ್ತಿರುವಾಗ ಹೊಸ ಕೃಷಿ ನೀತಿಗಳು ಹಸಿರು ಕ್ರಾಂತಿಯ ಕಡೆಗೆ ಗಮನಹರಿಸಿದವು. 1964 ರಲ್ಲಿ, ಸರ್ಕಾರವು ಆಹಾರ ಧಾನ್ಯಗಳನ್ನು ರೈತರಿಂದ ಲಾಭದಾಯಕ ಬೆಲೆಯಲ್ಲಿ ಸಂಗ್ರಹಿಸಲು ಭಾರತೀಯ ಆಹಾರ ನಿಗಮವನ್ನು (ಎಫ್‌ಸಿಐ) ಸ್ಥಾಪಿಸಿತು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಅವುಗಳನ್ನು ಗ್ರಾಹಕರಿಗೆ ವಿತರಿಸುತ್ತಿತ್ತು. ಆಹಾರಧಾನ್ಯಗಳನ್ನು ಖರೀದಿಸಲು, ಬೆಲೆ ನೀತಿಯನ್ನು ಹೊಂದಿರಬೇಕು. 1965 ರಲ್ಲಿ, ಕೃಷಿ ಉತ್ಪನ್ನಗಳ ಬೆಲೆ ನೀತಿ ಮತ್ತು ಆರ್ಥಿಕತೆಯ ಮೇಲೆ ಅದರ ಪ್ರಭಾವದ ಬಗ್ಗೆ ಸಲಹೆ ನೀಡಲು ಕೃಷಿ ಬೆಲೆ ಆಯೋಗವನ್ನು ಸ್ಥಾಪಿಸಲಾಯಿತು.

ಆಗ ಸರ್ಕಾರದ ಬೆಲೆ ಬೆಂಬಲ ನೀತಿಯು ಬಂದಿತು, ಕೃಷಿ ಬೆಲೆಗಳಲ್ಲಿ ತೀವ್ರ ಕುಸಿತದ ಸಂದರ್ಭ  ಉತ್ಪಾದಕರಿಗೆ ಪರಿಹಾರವನ್ನು ಒದಗಿಸಿತು. ಕನಿಷ್ಠ ಗ್ಯಾರಂಟಿ ಬೆಲೆಗಳು ಮಾರುಕಟ್ಟೆಯ ಬೆಲೆ ಕುಸಿಯಲು ಸಾಧ್ಯವಾಗದಂತೆ ತಡೆಯಿತು. ಬೇರೆ ಯಾರೂ  ಖರೀದಿಸದಿದ್ದರೆ, ಸರ್ಕಾರವು ಈ  ಖಾತರಿ ಬೆಲೆಯಲ್ಲಿ  ಖರೀದಿಸುತ್ತದೆ. ಇದನ್ನೇ ಕನಿಷ್ಠ ಬೆಂಬಲ ಬೆಲೆ ಅಥವಾ MSP ಎಂದು ಕರೆಯಲಾಯಿತು.ಈ ನೀತಿಯು 1974-76ರ ಸುಮಾರಿಗೆ ಅದರ ಅಂತಿಮ ರೂಪವನ್ನು ಪಡೆದುಕೊಂಡಿತು. ಬಳಿಕ ಬಂಪರ್ ಬೆಳೆ ಬಂದರೂ ಬೆಲೆ ನಿಗದಿತ ಮಟ್ಟಕ್ಕಿಂತ ಕೆಳಗಿಳಿಯುವುದಿಲ್ಲ ಎಂಬ ಭರವಸೆ ಬಂತು. ಕೃಷಿ ವ್ಯವಸ್ಥೆಗೆ ಆರ್ಥಿಕ ಸ್ಥಿರತೆಯನ್ನು ಒದಗಿಸಲು ಮತ್ತು ಉತ್ಪಾದನೆಯನ್ನು ಉತ್ತೇಜಿಸಲು MSP ಅನ್ನು ಪರಿಚಯಿಸಲಾಗಿತ್ತು. ಆಹಾರ ಬೆಳೆಗೆ ಅನ್ವಯವಾದ ಈ ಬೆಂಬಲ ಈಗ ದೇಶದೆಲ್ಲೆಡೆ ಈಗ ಪ್ರತಿಧ್ವನಿಸುತ್ತಿದೆ. ಈಗ ಅಡಿಕೆಗೂ ಇದೇ ಮಾದರಿಯ ಬೆಲೆಯನ್ನು ನಿರೀಕ್ಷೆ ಮಾಡಲಾಗಿದೆ. ಆದರೆ ಸದ್ಯ ಬೆಂಬಲ ಬೆಲೆಗಿಂತಲೂ ಆಮದು ತಡೆಗೆ ಕ್ರಮವಾಗಬೇಕಿದೆ. ಅದಾದರೆ ಅಡಿಕೆ ಧಾರಣೆ ಏರಿಕೆಯಾಗಲಿದೆ. ಕನಿಷ್ಟ  350-400 ರೂಪಾಯಿ ಆಸುಪಾಸಿನಲ್ಲಿ ಅಡಿಕೆ ಧಾರಣೆ ಸದ್ಯ ಕಾಣಬಹುದು.

Advertisement

Arecanut Market decreased. Arecanut growers are worried. Due to climate change and nut falling, Arecanut yield has also declined. Therefore, there is an insistence that the government should pay attention to the arecanut growers.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

18 hours ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

18 hours ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

18 hours ago

ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ

ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…

18 hours ago

ಧರ್ಮಸ್ಥಳ ಯಕ್ಷಗಾನ ಮೇಳ |  ಸೇವೆ ಬಯಲಾಟ ಪ್ರದರ್ಶನ

ನಾಡಿನ ಪವಿತ್ರ ಕ್ಷೇತ್ರ  ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…

18 hours ago

ಜೇನು ತುಪ್ಪ ಮಾರಾಟ | ಅರ್ಜಿ ಆಹ್ವಾನ

ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…

18 hours ago