ಅಡಿಕೆ ಆಮದು ಭೀತಿ-ಮಾರುಕಟ್ಟೆ ಕುಸಿತದ ಚಿಂತೆ | ಈ ನಡುವೆ ಅಡಿಕೆ ಬೆಳೆ ವಿಸ್ತರಣೆ ತಡೆಯಲು ಹೀಗೊಂದು ಚಿಂತನೆ…. |

March 3, 2024
10:08 PM
ಅಡಿಕೆ ಮಾರುಕಟ್ಟೆ ಕುಸಿತ, ಅಡಿಕೆ ಆಮದು, ಅಡಿಕೆಯಲ್ಲಿ ವಿವಿಧ ರೋಗಗಳ ಆತಂಕದ ನಡುವೆ ಅಡಿಕೆ ಬೆಳೆಗಾರರಿಗೆ ಈಗ ಭವಿಷ್ಯದಲ್ಲಿ ಕಾಡುವ ಇನ್ನೊಂದು ಸಮಸ್ಯೆ ಬೆಳೆ ವಿಸ್ತರಣೆ. ಬೆಳೆ ವಿಸ್ತರಣೆ ತಡೆಯಲು ಅಸಾಧ್ಯ. ಆದರೆ ಇದೊಂದು ಚಿಂತನೆಯನ್ನು ನಮ್ಮ ಓದುಗ ಹರಿಪ್ರಸಾದ್‌ ಮುಂದಿರಿಸಿದ್ದಾರೆ. ಯೋಚಿಸಬಹುದಾದ ವಿಷಯ ಇದಾಗಿದೆ.

ಇತ್ತೀಚಿನ ದಿನಗಳಲ್ಲಿ ವಿದೇಶಿ ಅಡಿಕೆ ಅಕ್ರಮವಾಗಿ ದೇಶದೊಳಕ್ಕೆ ಬರುತ್ತಿದ್ದು ದೇಶೀ ಅಡಿಕೆಯ ಮಾರುಕಟ್ಟೆಗೆ ತೀವ್ರ ಹೊಡೆತ ನೀಡುತ್ತಿದೆ. ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಯು ಕಡಿಮೆ ದರದಲ್ಲಿ ಹರಾಜು ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿ ದೇಶದ ಅಡಿಕೆ ಮಾರುಕಟ್ಟೆಯನ್ನು ನಾಶಗೊಳಿಸುತ್ತಿರುವ ಬಗ್ಗೆ  ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗುತ್ತಿದೆ.….ಮುಂದೆ ಓದಿ…..

Advertisement

ರಾಜ್ಯದ 31 ಜಿಲ್ಲೆಗಳ ಪೈಕಿ 17 ಜಿಲ್ಲೆಗಳ ರೈತರು ಜೀವನಾಧಾರವಾಗಿ ಅಡಿಕೆಯನ್ನೇ ಅವಲಂಬಿಸಿದ್ದಾರೆ. ವಿದೇಶಿ ಅಡಿಕೆಯ ಒಳಹರಿವು ಈ ಭಾಗದ ರೈತರ ಜೀವನವನ್ನೇ ನರಕಸದೃಶಗೊಳಿಸಿದೆ.….ಮುಂದೆ ಓದಿ…..

ಕಳೆದ 3 ವರ್ಷಗಳಿಂದ ಅಡಿಕೆ ಮಾರುಕಟ್ಟೆ ಒಂದು ಸುಸ್ತಿರ ಹಂತಕ್ಕೆ ಬಂದಿದೆ ಅಂದುಕೊಳ್ಳುವಾಗ, ಮೇಲಿನ ಘಟನೆಗಳು ಇಲ್ಲಿಯ ಕೃಷಿಕರಿಗೆ ಚಿಂತೆ ಮೂಡಿಸಿದೆ.. ಸುಸ್ಥಿರ ಮಾರುಕಟ್ಟೆಯ ಲಾಭ ಇನ್ನೇನು ಕೃಷಿಕನಿಗೆ ಸಿಗಲು ಶುರುವಾಗಿದೆ ಅನ್ನುವಷ್ಟರಲ್ಲಿ, ವಿದೇಶಿ ಅಡಿಕೆಯ ಒಳಹರಿವು ಅಡಿಕೆ ದರವನ್ನು ಕುಸಿತಗೊಳಿಸಿತು.. ಈ ಕುಸಿತ ತಾತ್ಕಾಲಿಕ ಎಂದುಕೊಂಡು ಕ್ಷಣಿಕ ಸಮಾಧಾನ ಪಡುವಂತಿಲ್ಲ.. ಯಾಕೆಂದೆರೆ ಅಡಿಕೆಯ ವಿದೇಶಿ ಒಳಹರಿವಿಗಿಂತ, ಲಕ್ಷ ಲಕ್ಷಗಳಲ್ಲಿ ಬೇರೆ ರಾಜ್ಯಗಳಿಗೆ ಅಡಿಕೆ ಗಿಡಗಳ ಹೊರಹರಿವು ಆಗುತ್ತಿದೆ. ಅದೂ ಕರಾವಳಿ, ಮಲೆನಾಡು ಭಾಗದಿಂದಲೇ…!. ಭವಿಷ್ಯದಲ್ಲಿ ಇಲ್ಲಿಯ ಅಡಿಕೆ ಬೆಳೆಗಾರರಿಗೆ ದೊಡ್ಡ ತಲೆ ನೋವಾಗುವುದು ನಿಸ್ಸಂದೇಹ.. ಕೆಲವೇ ಕೆಲವು ನರ್ಸರಿಗಳು ಹಲವು ಲಕ್ಷಗಳಲ್ಲಿ ಅಡಿಕೆ ಸಸಿಗಳನ್ನು ತಯಾರು ಮಾಡಿ, ತಮಿಳುನಾಡಿನಂತ ಬೇರೆ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ.. ಕೇಳಿದರೆ, ಅಡಿಕೆಯನ್ನು ಯಾರು ಬೇಕಾದರೂ ಅವರ ಅನುಕೂಲಕ್ಕೆ ತಕ್ಕಂತೆ ಬೆಳೆಸಬಹುದು.. ಅದನ್ನು ನಿಯಂತ್ರಣ ಮಾಡಲು ನಾವು ನೀವು ಯಾರು ಎಂಬ ಉತ್ತರ….!….ಮುಂದೆ ಓದಿ…..

ಅಲ್ಲ, ಅಡಿಕೆ ಕೃಷಿ ಯಾರಿಗೂ ಬೇಡದ ಸಮಯದಲ್ಲಿ ಕರಾವಳಿ ಹಾಗೂ ಮಲೆನಾಡ ಕೆಲವು ಮಹನೀಯರು ಈ ಅಡಿಕೆಯ ಮಾರುಕಟ್ಟೆಯನ್ನು ಸುದೃಢ, ಸುಸ್ಥಿರಗೊಳಿಸಿದರು. ಹಾಗೆಯೇ ಕೃಷಿಯಲ್ಲಿ, ತಳಿಗಳಲ್ಲಿ ಹಲವು ಸುಧಾರಣೆ ತಂದರು.ಈಗ ಈ ಭಾಗದ ಜನರಿಗೆ ಅಡಿಕೆ ಎನ್ನುವುದು ಬೆಳೆಯಲ್ಲ, ಜೀವನಶೈಲಿ, ಬದುಕೇ ಆಗಿದೆ. ಆದರೆ ಕೆಲವು ನರ್ಸರಿಗಳು ಇಲ್ಲಿಯ ರೈತರ ಬಾಯಿಗೆ ಮಣ್ಣು ಹಾಕುವಂತಹ ಕೆಲಸ ಮಾಡುತ್ತಿರುವುದು ಸ್ಪಷ್ಟ. ಅದರಲ್ಲೂ ಯಾವುದೇ ನರ್ಸರಿಗಳು E way bill ಇಲ್ಲದೇ ಲಕ್ಷ ಬೆಲೆಯ ಗಿಡಗಳನ್ನು(ಒಂದು ಲಾರಿಯಲ್ಲಿ 3500 ಗಿಡಗಳು, ತಲಾ ರೂ 35/- ರಂತೆ)ಬೇರೆ ರಾಜ್ಯಗಳಿಗೆ ಹೇಗೆ ಕಳಿಸುತ್ತಿದ್ದಾರೆ ಎನ್ನುವುದೇ ಯಕ್ಷಪ್ರಶ್ನೆ…?….ಮುಂದೆ ಓದಿ…..

ಈಗ ತುರ್ತಲ್ಲಿ ಆಗ ಬೇಕಾದ ಕೆಲಸವೆಂದರೆ, ಪ್ರತಿಯೊಬ್ಬ ಸ್ಥಳೀಯನೂ ಸಮಾರೋಪದಿಯಲ್ಲಿ ಈ ಬಗ್ಗೆ ಎಚ್ಚೆತ್ತುಕೊಂಡು, ಕೆಲವೇ ಕೆಲವು ನರ್ಸರಿಗಳ ಅಕ್ರಮವನ್ನು ತಡೆಯಬೇಕು. ಈ ಬಗ್ಗೆ ಆಡಳಿತ ಯಂತ್ರಕ್ಕೆ ಮನವರಿಕೆ ಮಾಡಿ, ನಿಯಮ ನಿರ್ಬಂಧಗಳನ್ನು ತಂದು ಈ ಅಡಿಕೆ ಗಿಡಗಳ ಹೊರ ಹರಿವನ್ನು ತಡೆಯಬೇಕಾಗಿದೆ. ಹಾಗೆಯೇ invoice  ಮತ್ತು E-way bill ಇಲ್ಲದೇ ಸಾಗಟ ಮಾಡದಂತೆ ಮತ್ತು underbilling ಮಾಡಿ ಸಾಗಟ ಮಾಡಿದರೆ ದುಪ್ಪಟ್ಟು ದಂಡ ತೆರುವಂತಹ ಕ್ರಮಗಳನ್ನು ತರಬೇಕಾಗಿದೆ.….ಮುಂದೆ ಓದಿ…..

ಇಲ್ಲೂ ಒಂದು ಸಮಸ್ಯೆ ಇದೆ ನಿಜ. ವ್ಯಾಪಾರ-ವ್ಯವಹಾರ ತಡೆಯುವವರು ಯಾರು ಹಾಗೂ ಇನ್ನೊಂದು ವ್ಯವಹಾರವನ್ನು ತಡೆಯುವುದು ಹೇಗೆ ?. ಹೇಗೆ ಬೆಳೆ ಬೆಳೆಸುವುದು ರೈತನ ಹಕ್ಕೋ ಹಾಗೆಯೇ ಗಿಡ ಬೆಳೆಸಿ ಮಾರಾಟ ಮಾಡುವುದೂ ರೈತನ ಹಕ್ಕು. ಆದರೆ ಇಲ್ಲಿ ಗಮನಿಸಬೇಕಾದ್ದು ಹೊರ ರಾಜ್ಯಗಳಿಗೆ ವಿಪರೀತ ಪ್ರಮಾಣದಲ್ಲಿ ಅಡಿಕೆ ಗಿಡಗಳನ್ನು ಕಳುಹಿಸುವುದರ ಬಗ್ಗೆ ಮಾತ್ರಾ ಅಡಿಕೆ ಕೃಷಿಕರು ಗಮನಿಸಬೇಕಾದ್ದಾಗಿದೆ. ಒಂದು ವೇಳೆ ಇಲ್ಲಿನ ಅಡಿಕೆ ತಳಿಗಳು ಬೇರೆ ರಾಜ್ಯದಲ್ಲಿ, ಬೇರೆಯ ಹವಾಮಾನದಲ್ಲಿ ಬೆಳೆಯುತ್ತಿಲ್ಲವಾದರೆ ಅಂತಹ ಗಿಡಗಳನ್ನೂ ಅಲ್ಲಿಯ ರೈತರಿಗೂ ನೀಡಬಾರದು ಅಲ್ಲವೇ…?

ಬರಹ
ಹರಿಪ್ರಸಾದ್‌
, ಯುವಕೃಷಿಕ

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಈ ತಿಂಗಳ ಅಂತ್ಯದೊಳಗೆ 6 ರಾಶಿಯವರಿಗೆ ಉತ್ತಮ ಶುಭ ಫಲ | ಕೆಲವು ವಿಧಿ ವಿಧಾನಗಳನ್ನು ಅನುಸರಿಸಿದರೆ ಯಶಸ್ಸು |
May 7, 2025
7:02 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ
May 7, 2025
7:00 AM
by: ದಿವ್ಯ ಮಹೇಶ್
ಭಾರತದಿಂದ ‘ಆಪರೇಷನ್ ಸಿಂಧೂರ್’ | ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ ನಾಶ | 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ |
May 7, 2025
6:05 AM
by: ದ ರೂರಲ್ ಮಿರರ್.ಕಾಂ
ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group