ನವರಾತ್ರಿ ಮುಗಿಯುವ ಸಮಯ ಬಂದಿದೆ. ಅಡಿಕೆ ಮಾರುಕಟ್ಟೆಯು ಮುಂದೆ ಸಂಪೂರ್ಣವಾಗಿ ತೆರೆದುಕೊಳ್ಳಲಿದೆ. ಹೊಸ ಅಡಿಕೆಯೂ ಮಾರುಕಟ್ಟೆ ಪ್ರವೇಶ ಕಾಣುವ ಸಮಯ ಬರುತ್ತದೆ. ಹೀಗಿದ್ದರೂ ಈಗ ಚಾಲಿ ಹೊಸ ಅಡಿಕೆಯ ಕೆಜಿ ಧಾರಣೆ 500 ತಲುಪಲಿಲ್ಲ, ಹಳೆ ಅಡಿಕೆ ಧಾರಣೆ 530 ದಾಟಲಿಲ್ಲ. ಆದರೆ ಹೊಸ ಅಡಿಕೆ 500 ತಲಪುತ್ತದೆ ಎನ್ನುವ ನಿರೀಕ್ಷೆ ಕಳೆದ ಕೆಲವು ದಿನಗಳಿಂದ ಇದ್ದರೂ ಇನ್ನೂ ಧಾರಣೆ ನಿರೀಕ್ಷೆಯಂತೆ ಏರಿಕೆ ಕಂಡಿಲ್ಲ. ಖಾಸಗಿ ಮಾರುಕಟ್ಟೆ ಕೂಡಾ 495-497 ರೂಪಾಯಿಗೆ ನಿಲ್ಲಿಸಿವೆ. ಕ್ಯಾಂಪ್ಕೊ ಕೂಡಾ 490 ರೂಪಾಯಿಗಿಂತ ಮುಂದೆ ಸಾಗಲಿಲ್ಲ. ಮುಂದೆ ಧಾರಣೆ ಏರಿಕೆಯ ನಿರೀಕ್ಷೆ ಇದೆಯೇ…?
ಸದ್ಯ ಚಾಲಿ ಅಡಿಕೆ ಧಾರಣೆಯಲ್ಲಿ ಕೆಜಿಗೆ 49000 ಹಾಗೂ ಹಳೆ ಅಡಿಕೆ 52000 ರೂಪಾಯಿ ಇದೆ. ಅದೇ ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆಯು 52,200 ರಿಂದ 68,699, ಸರಕು ಅಡಿಕೆಯು 62,699 ರಿಂದ 93,800, ಗೊರಬಲು ಅಡಿಕೆಯು 34,299 ರಿಂದ 39,869, ರಾಶಿ ಅಡಿಕೆಯು 48,111 ರಿಂದ 63,869, ಮತ್ತು ಹೊಸಅಡಿಕೆಯು 57,599 ರಿಂದ 62,869 ರ ನಡುವೆ ಮಾರಾಟವಾಗಿದೆ.
ತೀರ್ಥಹಳ್ಳಿಯ ಮಾರುಕಟ್ಟೆಯಲ್ಲಿ ಸಿಪ್ಪೆ ಗೋಟು ಅಡಿಕೆ ದರ ₹10,000 ರಿಂದ ₹12,000 ರ ನಡುವೆ ಇದೆ.ಹೊಸನಗರ ಮಾರುಕಟ್ಟೆಯಲ್ಲಿ ಕೆಂಪು ಗೋಟು ಅಡಿಕೆ ಬೆಲೆ ₹28,006 ರಿಂದ ₹38,399, ರಾಶಿ ಅಡಿಕೆ ₹56,899 ರಿಂದ ₹64,199, ಮತ್ತು ಚಾಲಿ ಅಡಿಕೆ ₹37,399 ರಷ್ಟಿದೆ.
ಸಿದ್ಧಾಪುರ ಮಾರುಕಟ್ಟೆಯಲ್ಲಿ ಬಿಳೆ ಗೋಟು ಅಡಿಕೆಯು ₹24,699 ರಿಂದ ₹33,619, ಕೆಂಪು ಗೋಟು ಅಡಿಕೆಯು ₹26,499 ರಿಂದ ₹31,600, ಕೋಕ ಅಡಿಕೆಯು ₹20,319 ರಿಂದ ₹29,399, ತಟ್ಟಿ ಬೆಟ್ಟೆ ಅಡಿಕೆಯು ₹35,089 ರಿಂದ ₹40,499, ರಾಶಿ ಅಡಿಕೆಯು ₹46,019 ರಿಂದ ₹53,999, ಮತ್ತು ಚಾಲಿ ಅಡಿಕೆಯು ₹38,399 ರಿಂದ ₹44,569 ರಷ್ಟಿದೆ.
ಯಲ್ಲಾಪುರ ಮಾರುಕಟ್ಟೆಯಲ್ಲಿ ಬಿಳೆ ಗೋಟು ಅಡಿಕೆಯು ₹21,669 ರಿಂದ ₹34,810, ಕೆಂಪು ಗೋಟು ಅಡಿಕೆಯು ₹21,195 ರಿಂದ ₹30,799, ಕೋಕ ಅಡಿಕೆಯು ₹10,199 ರಿಂದ ₹21,899, ತಟ್ಟಿ ಬೆಟ್ಟೆ ಅಡಿಕೆಯು ₹37,209 ರಿಂದ ₹43,000, ರಾಶಿ ಅಡಿಕೆಯು ₹45,000 ರಿಂದ ₹57,399, ಮತ್ತು ಚಾಲಿ ಅಡಿಕೆಯು ₹35,009 ರಿಂದ ₹45,069 ರ ನಡುವೆ ಧಾರಣೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಕುಮಟಾದಲ್ಲಿ ಕೋಕ ಅಡಿಕೆಯು ₹7,289 ರಿಂದ ₹28,099, ಚಿಪ್ಪು ಅಡಿಕೆಯು ₹27,569 ರಿಂದ ₹33,999, ಫ್ಯಾಕ್ಟರಿ ಅಡಿಕೆಯು ₹5,099 ರಿಂದ ₹27,390, ಚಾಲಿ ಅಡಿಕೆಯು ₹38,569 ರಿಂದ ₹44,899, ಮತ್ತು ಹಳೆ ಚಾಲಿ ಅಡಿಕೆಯು ₹39,999 ರಿಂದ ₹44,500 ನಷ್ಟು ದರ ಇದೆ.
ಇದೀಗ ಧಾರಣೆ ಏರಿಕೆಯ ನಿರೀಕ್ಷೆ ಎಲ್ಲಾ ಕಡೆ ಇದೆ. ಆದರೆ ಧಾರಣೆ ಏರಿಕೆ ಮುಂದಿನ ತಿಂಗಳಿನಲ್ಲಿ ಸಾಧ್ಯವಿದೆ. ಅದುವರೆಗೆ ಭಾರೀ ಏರಿಕೆಯ ಸಾಧ್ಯತೆ ಕಡಿಮೆ ಇದೆ. ಮಾರುಕಟ್ಟೆಯಲ್ಲಿ ಅಡಿಕೆಯ ಕೊರತೆ ಇರುವುದು ನಿಜ. ಈ ಕೊರತೆ ನೀಗಿಸಲು ಅಕ್ರಮವಾಗಿ ಅಡಿಕೆ ಸಾಗಾಟವೂ ನಡೆಯುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ, ಅಸ್ಸಾಂ ಗಡಿಭಾಗದಿಂದ ಸುಮಾರು 40 ಕ್ವಿಂಟಾಲ್ ಅಡಿಕೆ ಕಳ್ಳಸಾಗಾಣಿಕೆ ಪತ್ತೆಯಾಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಸ್ಸಾಂ ಮೂಲಕ ಬರ್ಮಾ ಅಡಿಕೆಯು ಭಾರತಕ್ಕೆ ಪ್ರವೇಶಿಸಿ ಇಲ್ಲಿ ಬೇರೆ ಬೇರೆ ಕಡೆಗೆ ರವಾನೆಯಾಗುತ್ತಿದೆ. ಇಲ್ಲಿನ ಮಾರುಕಟ್ಟೆಯಲ್ಲಿ ಅಡಿಕೆ ಕೊರತೆ ಅಥವಾ ಕೃತಕವಾಗಿ ಈ ಕೊರತೆಯನ್ನು ಸೃಷ್ಟಿಸಿ ಆಮದು ಅಡಿಕೆ ಜೊತೆ ಸೇರಿಸಿ ಮತ್ತೆ ಮಾರಾಟ ಮಾಡುವ ಜಾಲವೂ ಕೂಡಾ ಈಚೆಗೆ ಬೆಳಕಿಗೆ ಬಂದಿತ್ತು. ಇದೀಗ ಮತ್ತೆ ಅಡಿಕೆ ಆಮದು ಹುನ್ನಾರ ನಡೆಯುತ್ತಿರುವುದು ಎರಡು ದಿನಗಳ ಹಿಂದೆಯಷ್ಟೇ ಬೆಳಕಿಗೆ ಬಂದಿದೆ. ಅಧಿಕಾರಿಗಳು ಬಿಗುವಿನ ತಪಾಸಣೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಅಕ್ರಮ ಸಾಗಾಟಕ್ಕೆ ತಡೆಯಾಗಿದೆ. ಈ ನಡುವೆ ಹುರಿದ ಅಡಿಕೆ ಅಥವಾ ಒಣ ಅಡಿಕೆಯನ್ನೂ ಆಮದು ಮಾಡುವ ಬಗ್ಗೆ ಹುನ್ನಾರ ನಡೆಯುತ್ತಿರುವ ಬಗ್ಗೆ ಗುಮಾನಿಗಳು ಇವೆ. ಹುರಿದ ಅಡಿಕೆ ಆಮದು ನಿಷೇಧ ಇದ್ದರೂ ಅದರ ಬಗ್ಗೆ ಜಾಲವು ಪ್ರಯತ್ನ ಮಾಡುತ್ತಿರುವ ಶಂಕೆ ಇದೆ.
ಹೀಗಾಗಿ ಅಡಿಕೆ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದೇ ಇದ್ದರೆ, ಇಲ್ಲಿನ ಅಡಿಕೆ ಧಾರಣೆ ಏರಿಕೆ ಸಾಧ್ಯತೆ ಇದೆ. ಮುಂದಿನ ಎರಡು ವಾರದಲ್ಲಿ ಧಾರಣೆಯಲ್ಲಿ ವ್ಯತ್ಯಾಸ ಸಾಧ್ಯತೆ ಇದೆ. ಆದರೆ ಭಾರೀ ಏರಿಕೆಯ ನಿರೀಕ್ಷೆ ಅಡಿಕೆ ಬೆಳೆಗಾರರಿಗೆ ನಿರಾಸೆ ತರುವ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…