Arecanut Market | ಅಡಿಕೆ ಧಾರಣೆ ದಿಢೀರ್‌ ಏರಿಕೆ | ಏನಿದು ಧಾರಣೆ ಏರಿಕೆಯ ಗುಟ್ಟು…?

March 15, 2024
11:32 AM
ರಾಜ್ಯದಲ್ಲಿ ಅಡಿಕೆ ಧಾರಣೆ ಏರಿಕೆ ಕಾಣುತ್ತಿದೆ. ಚುನಾವಣೆಯ ಹೊತ್ತಿಗೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.

ರಾಜ್ಯದಲ್ಲಿ ಅಡಿಕೆ ಧಾರಣೆ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಏರಿಳಿಕೆಯಲ್ಲಿದ್ದ ಅಡಿಕೆ ಮಾರುಕಟ್ಟೆ ಇದೀಗ ಏರಿಕೆಯ ಹಾದಿಯಲ್ಲಿ ಸಾಗಿದೆ.ಮಂಗಳೂರು ಚಾಲಿ ಅಡಿಕೆ ಸೇರಿದಂತೆ ಕೆಂಪಡಿಕೆ ಧಾರಣೆಯಲ್ಲೂ ಏರಿಕೆ ಕಂಡಿದೆ.

ಕಳೆದ ಕೆಲವು ದಿನಗಳಿಂದ ಕುಸಿತದ ಹಾದಿಯಲ್ಲಿದ್ದ ಮಂಗಳೂರು ಚಾಲಿ ಅಡಿಕೆ ಈಗ 352-355 ರೂಪಾಯಿಗೆ ಜಿಗಿತವಾಗಿದೆ. ಇದೇ ವೇಳೆ ಹಳೆ ಚಾಲಿ ಅಡಿಕೆ ಧಾರಣೆ 420-428 ರೂಪಾಯಿಗೆ ಏರಿಕೆ ಕಂಡಿದೆ. ಅಂದರೆ ವಾರದಲ್ಲಿ ಸುಮಾರು 10 ರೂಪಾಯಿ ಧಾರಣೆಯಲ್ಲಿ ಏರಿಕೆಯಾಗಿದೆ. ಕ್ಯಾಂಪ್ಕೋ ಕೂಡ ಧಾರಣೆ ಏರಿಕೆ ಮಾಡಿದೆ.

ಇನ್ನು ಕೆಂಪಡಿಕೆ ಧಾರಣೆ ಕೂಡಾ ಏರಿಕೆಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂಪಾಯಿ ದಾಟಿದೆ. ತುಮಕೂರಿನಲ್ಲಿ ಅಡಿಕೆ ಧಾರಣೆ 47,200 ರೂಪಾಯಿ ಆಗಿದೆ. ಉಳಿದಂತೆ ಎಲ್ಲೆಡೆಯೂ ಸದ್ಯ ಏರಿಕೆಯ ಹಾದಿಯಲ್ಲಿದೆ. ಸದ್ಯ ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಚುನಾವಣೆಗೂ ಮುನ್ನ ಈ ಬಾರಿ ಅಡಿಕೆ ದಾಸ್ತಾನು ನಡೆಯುವ ಸಾಧ್ಯತೆ ಇದೆ. ಹೀಗಾಗಿ ಅಡಿಕೆ ಬೇಡಿಕೆ ಹೆಚ್ಚಾಗುತ್ತಿದೆ. ಈ ನಡುವೆ ಕಳೆದ ಬಾರಿಯು ಹವಾಮಾನ ವೈಪರೀತ್ಯದ ಕಾರಣದಿಂದ ಅಡಿಕೆ ಇಳುವರಿ ಕೂಡಾ ಕಡಿಮೆಯಾಗಿರುವುದಿಂದ ಅಡಿಕೆ ಮಾರುಕಟ್ಟೆಗೆ ಬರುವ ಪ್ರಮಾಣವೂ ಕಡಿಮೆಯಾಗಿದೆ.

Arecanut Rate has increased in the state. The Arecanut market, which was in down treand for the past few days, has now gone on the path of increase. Mangalore, Puttur also saw an increase in the Market. 
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

2030ರೊಳಗೆ 5 ಟ್ರಿಲಿಯನ್ ಆರ್ಥಿಕತೆ ಮೀರಿದ ರಾಷ್ಟ್ರವಾಗಲಿದೆ ಭಾರತ
March 3, 2026
9:53 AM
by: ಮಿರರ್‌ ಡೆಸ್ಕ್
ರೈತರ ಹಿತಕ್ಕಾಗಿ ಎರಡು ಮಹತ್ವದ ಸುಧಾರಣೆಗಳು | ಹೊಸ ಬೀಜ ಕಾಯ್ದೆ, ಪರಿಷ್ಕೃತ ಕೀಟನಾಶಕ ಕಾಯ್ದೆ ಜಾರಿಗೆ ಕೇಂದ್ರ ಸಿದ್ಧತೆ
March 3, 2026
9:37 AM
by: ಮಿರರ್‌ ಡೆಸ್ಕ್
ಇನ್ನೆರಡು ದಿನಗಳಲ್ಲಿ ತಂಬಾಕು ಬೆಳೆಗಾರರ ಸಮಸ್ಯೆಗೆ ಪರಿಹಾರ : ಕುಮಾರಸ್ವಾಮಿ ಭರವಸೆ
March 3, 2026
9:31 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದ ಹಳದಿ ಎಲೆ ರೋಗ ಚೀನಾದಲ್ಲೂ ಮದ್ದಿಲ್ಲ…! | ಮಣ್ಣಿನೊಳಗಿನ ಡಿಎನ್‌ಎ ನೀಡುತ್ತಿದೆ ಎಚ್ಚರಿಕೆ
March 2, 2026
9:49 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror