ಅಡಿಕೆ ಮಾರುಕಟ್ಟೆ ಚೇತರಿಕೆ ಆರಂಭ | ಮತ್ತೆ ಮತ್ತೆ ಅಕ್ರಮ ಅಡಿಕೆ ಸಾಗಾಟಕ್ಕೆ ತಡೆ | ಮಣಿಪುರದಲ್ಲಿ 130 ಕ್ಕೂ ಹೆಚ್ಚು ಅಡಿಕೆ ಚೀಲ ವಶಕ್ಕೆ |

January 12, 2024
11:56 AM
ಬರ್ಮಾದಿಂದ ಅಕ್ರಮವಾಗಿ ಅಡಿಕೆ ಸಾಗಾಟ ಪ್ರಕರಣಕ್ಕೆ ತಡೆಯಾಗುತ್ತಿದೆ. ಈ ನಡುವೆ ಭಾರತದಲ್ಲಿ ಅಡಿಕೆ ಮಾರುಕಟ್ಟೆ ಚೇತರಿಕೆ ಕಾಣಲು ಆರಂಭವಾಗಿದೆ.

ಕೆಲವು ಸಮಯದ ಬಳಿಕ ಅಡಿಕೆ ಮಾರುಕಟ್ಟೆ ಚೇತರಿಕೆ ಆರಂಭವಾಗಿದೆ. ನಿರಂತರವಾಗಿ ಅಕ್ರಮವಾಗಿ ಅಡಿಕೆ ಆಮದು ನಡೆಯುತ್ತಿದ್ದ ಎಲ್ಲಾ ದಾರಿಗಳೂ ಈಗ ಬಿಗುಗೊಳ್ಳುತ್ತಿದೆ. ಈ ನಡುವೆ ಅಡಿಕೆ ಬೇಡಿಕೆಯೂ ಹೆಚ್ಚಲು ಆರಂಭವಾಗಿದೆ. ಹೀಗಾಗಿ ಭಾರತದ ಅಡಿಕೆ ಮಾರುಕಟ್ಟೆ ನಿಧಾನವಾಗಿ ಚೇತರಿಕೆಯೂ ಆರಂಭಗೊಂಡಿದೆ.

ಮಣಿಪುರದ ಕಕ್ಚಿಂಗ್ ಜಿಲ್ಲೆಯಲ್ಲಿ ಮೂವರು ಕಳ್ಳಸಾಗಾಣಿಕೆದಾರರನನ್ನು ಲಾರಿ ಸಹಿತ   ಬಂಧಿಸಲಾಗಿದೆ.ಅಕ್ರಮವಾಗಿ ಸಾಗಿಸುತ್ತಿದ್ದ 10,960 ಕೆಜಿ ಅಡಿಕೆಯನ್ನು  ಅಸ್ಸಾಂ ರೈಫಲ್ಸ್ ವಶಪಡಿಸಿಕೊಂಡಿದೆ.130 ಕ್ಕೂ ಅಧಿಕ ಅಡಿಕೆ ಚೀಲ ವಶಕ್ಕೆ ಪಡೆಯಲಾಗಿದೆ ಎಂದು ಅಸ್ಸಾಂ ರೈಫಲ್ಸ್‌ ಹೇಳಿದೆ.

ಕಳೆದ ಸುಮಾರು 3 ತಿಂಗಳಿನಿಂದ ಅಕ್ರಮವಾಗಿ ಅಡಿಕೆ ಸಾಗಾಟ ಮಾಡಲಾಗುತ್ತಿತ್ತು. ಬರ್ಮಾ ಅಡಿಕಯು ಈಶಾನ್ಯ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಭಾರತದ ಒಳಗೆ ಅಕ್ರಮವಾಗಿ ಬರುತ್ತಿತ್ತು. ಅಕ್ರಮ ಸಾಗಾಟದ ಎಲ್ಲಾ ಅಡಿಕೆಯು ಅಸ್ಸಾಂ ಪ್ರವೇಶಿಸಿ ಅಲ್ಲಿಂದ ಭಾರತದ ವಿವಿಧ ಮಾರುಕಟ್ಟೆಗೆ ರವಾನೆ ಮಾಡಲಾಗುತ್ತಿತ್ತು ಎಂದು ವರದಿಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈಶಾನ್ಯ ರಾಜ್ಯಗಳ ಅಡಿಕೆ ಬೆಳೆಗಾರರ ಹೆಸರಿನಲ್ಲಿ ಅಡಿಕೆ ಸಾಗಾಟ ಭಾರತದ ಒಳಗೆ ನಡೆಯುತ್ತಿತ್ತು. ಭಾರತದ ಗಡಿ ಭಾಗಗಳಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟ ಮಾಡಿ ಬಳಿಕ ಅಲ್ಲಿನ ಮನೆಗಳಲ್ಲಿ ದಾಸ್ತಾನು ಮಾಡಿ ಅಸ್ಸಾಂನಲ್ಲೂ ವಿವಿಧ ಕಡೆಗಳಲ್ಲಿ ಮನೆಗಳಲ್ಲಿ ಅಡಿಕೆ ದಾಸ್ತಾನು ನಡೆಯುತ್ತಿತ್ತು. ಇದರ ವಿರುದ್ಧ ಕಾರ್ಯಾಚರಣೆಯನ್ನು ಈಚೆಗೆ ಈಶಾನ್ಯ ರಾಜ್ಯಗಳಲ್ಲಿ ನಡೆದಿತ್ತು. ಹೀಗಾಗಿ ಅಕ್ರಮ ಅಡಿಕೆ ಸಾಗಾಟಕ್ಕೆ ಬ್ರೇಕ್‌ ಬೀಳುತ್ತಿದೆ. ಅಡಿಕೆ ಬೇಡಿಕೆಯ ಹಿನ್ನೆಲೆಯಲ್ಲಿ ಈಗ ಭಾರತದ ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ ಆರಂಭವಾಗಿದೆ. ಹಳೆ ಚಾಲಿ ಅಡಿಕೆ, ಹೊಸ ಚಾಲಿ ಅಡಿಕೆ ಸೇರಿದಂತೆ ಕೆಂಪಡಿಕೆ ಧಾರಣೆಯೂ ಏರಿಕೆಗೆ ಆರಂಭವಾಗಿದೆ.

ಮುಂದಿನ ಕೆಲವು ದಿನಗಳವರೆಗೆ ಮಾರುಕಟ್ಟೆ ಚೇತರಿಕೆ ಇರಬಹುದು ಎನ್ನುವ ನಿರೀಕ್ಷೆ ಇದೆ. ಆದರೆ 450 ರೂಪಾಯಿಯಿಂದ ಮೇಲಿನ ಧಾರಣೆಯ ವಿಪರೀತ ನಿರೀಕ್ಷೆ ಅಡಿಕೆ ಬೆಳೆಗಾರರಿಗೇ ಸಂಕಷ್ಟ ತರುವ ಸಾಧ್ಯತೆ ಹೆಚ್ಚು ಇದೆ.

All the routes through which the illegal import of Arecanut was going on are now being tightened. Meanwhile, the demand for Arecanut has also started to increase. Thus the Arecanut market in India has slowly started to recover up.now market going up treand.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!
July 15, 2026
9:49 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?
July 15, 2026
2:10 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?
July 15, 2026
7:02 AM
by: ದ ರೂರಲ್ ಮಿರರ್.ಕಾಂ
ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror