Advertisement
MIRROR FOCUS

ಅಡಿಕೆ ಮಾರುಕಟ್ಟೆ | ಗುಣಮಟ್ಟದ ಅಡಿಕೆಗೆ ಬೇಡಿಕೆ….!

Share

ಕರ್ನಾಟಕದ ಪ್ರಮುಖ ಸಹಕಾರಿ ಅಡಿಕೆ ಮಾರುಕಟ್ಟೆಗಳಾದ ಕ್ಯಾಂಪ್ಕೊ ಮತ್ತು ಮಾಸ್‌ ಲಿಮಿಟೆಡ್‌ನಲ್ಲಿ ಮಾರ್ಚ್‌ 20 ರಂದು ಉತ್ತಮ ಗುಣಮಟ್ಟದ ಅಡಿಕೆಗಳಿಗೆ ಬೇಡಿಕೆ ಮುಂದುವರಿದಿದೆ. ವಿಶೇಷವಾಗಿ ಪ್ರೆಶ್ ಚೋಲ್‌ ವಿಭಾಗದಲ್ಲಿ ಮಾಸ್‌ ಮಾರುಕಟ್ಟೆಯಲ್ಲಿ ಗರಿಷ್ಠ ₹535 ದರ ದಾಖಲಾಗಿದೆ. ಗುಣಮಟ್ಟದ ಅಡಿಕೆಗೆ ಬೇಡಿಕೆ ಇದ್ದರೂ ಧಾರಣೆ ಏರಿಕೆಯ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಸದ್ಯ ಅಡಿಕೆ ಮಾರುಕಟ್ಟೆಯ ಪರಿಸ್ಥಿತಿಯನ್ನು ಗಮನಿಸಿ ಮುಂದೆ ಅಡಿಕೆ ಮಾರುಕಟ್ಟೆ ಹೇಗೆನ್ನುವುದೇ ಕಷ್ಟವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಚೋಲ್‌ ಮತ್ತು ಡಬಲ್‌ ಚೋಲ್‌ ದರಗಳು ₹530 ಮಟ್ಟದಲ್ಲಿ ಸ್ಥಿರವಾಗಿದ್ದರೆ, ಹೊಸ ಅಡಿಕೆ ಗರಿಷ್ಠ ₹460 ದರದಲ್ಲಿ ವ್ಯಾಪಾರವಾಗಿದೆ.  ಮಾಸ್‌ ಲಿಮಿಟೆಡ್‌ ನಿಂತಿಕಲ್‌ ಮಾರುಕಟ್ಟೆಯಲ್ಲಿ Fresh New ಅಡಿಕೆ ₹465 ಮತ್ತು Fresh ಚೋಲ್‌ ₹535 ತಲುಪಿದೆ.

ಕಳೆದ ವಾರ ಕೆಲವು ಓಪನ್‌ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡಿದ್ದರೂ, ಸಹಕಾರಿ ಮಾರುಕಟ್ಟೆಗಳಲ್ಲಿ ಸ್ಥಿರತೆ ಕಂಡುಬಂದ ಕಾರಣದಿಂದ ಖಾಸಗಿ ಮಾರುಕಟ್ಟೆಯಲ್ಲೂ ಏರಿಕೆ ಕಾಣಲಿಲ್ಲ. ಮಾರುಕಟ್ಟೆ ತಜ್ಞರ ಅಭಿಪ್ರಾಯದಂತೆ, ಮುಂದಿನ ವಾರ ಹೊಸ ಅಡಿಕೆ ಪೂರೈಕೆ ಹಾಗೂ ಅಕಾಲಿಕ ಮಳೆಯ ಪರಿಣಾಮ ಮಾರುಕಟ್ಟೆ ದಿಕ್ಕು ನಿರ್ಧರಿಸುವ ಪ್ರಮುಖ ಅಂಶವಾಗಲಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ನಡುವೆ ರಬ್ಬರ್‌ ಮಾರುಕಟ್ಟೆಯಲ್ಲಿ RSS-4 ದರ ₹212 ಮಟ್ಟದಲ್ಲಿ ಮುಂದುವರಿದಿದೆ.  ಒಟ್ಟಾರೆ, ಅಡಿಕೆ ಮಾರುಕಟ್ಟೆ ಈಗ ಸಂಪೂರ್ಣವಾಗಿ ಗುಣಮಟ್ಟ ಆಧಾರಿತ ಹಂತದಲ್ಲಿದೆ.

ಕ್ಯಾಂಪ್ಕೊ ಅಡಿಕೆ ದರ (20-03-2026)

  • ಚೋಲ್‌ / ಡಬಲ್‌ ಚೋಲ್‌ : ₹395 → ₹530

  • ಹೊಸ ಅಡಿಕೆ : ₹260 → ₹460

 MASS LTD ಅಡಿಕೆ ದರ (20-03-2026)

  • New : ₹300 → ₹460

  • FC : ₹440 → ₹530

  • DC : ₹505 → ₹530

Best Fresh New : ₹465 
Best Fresh ಚೋಲ್ಲ್‌‌ : ₹535

 ರಬ್ಬರ್‌ ಮಾರುಕಟ್ಟೆ (20-03-2026)

  • RSS-4 : ₹212

  • LOT : ₹188

  • Scrap-1 : ₹127

  • Scrap-2 : ₹117

Arecanut markets on 20 March 2026 show strong demand for quality grades around ₹530, especially fresh chali in MASS market touching ₹535. Compared to earlier Davanagere trends where prices corrected from higher quintal levels, the market now appears stable with selective rise. Rubber prices remain range-bound near ₹212.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

2 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

9 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

20 hours ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

24 hours ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

1 day ago

ತೆಂಗಿನ ಮರದಿಂದ 3 ಕೋಟಿ ಜನರಿಗೆ ಬದುಕು…!, ಈಗ ₹7,038 ಕೋಟಿ ರಫ್ತು!

ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…

1 day ago