#Arecanut | ಬೆಳೆಯುತ್ತಿದೆ ಅಡಿಕೆ ಮಾರುಕಟ್ಟೆ | 2032 ರ ವೇಳೆಗೆ ಮಾರುಕಟ್ಟೆಯ ತುತ್ತತುದಿಗೆ ತಲುಪಲಿದೆ |

August 24, 2023
5:25 PM
ಅಡಿಕೆ ಮಾರುಕಟ್ಟೆಯು ಬೆಳೆಯುತ್ತಿದೆ. ಮುಂದಿನ 10 ವರ್ಷಗಳಲ್ಲಿ ಅಡಿಕೆ ಮಾರುಕಟ್ಟೆ ಇನ್ನಷ್ಟು ಬೆಳೆಯಲಿದೆ. ಆದರೆ ಬಳಕೆಯ ಹಂತದಲ್ಲಿ ಆರೋಗ್ಯದ ಸಮಸ್ಯೆ ಕಾರಣಗಳಿಂದ ಸಮಸ್ಯೆಯಾಗಲಿದೆ.

ಅಡಿಕೆ ಮಾರುಕಟ್ಟೆಯು ಬೆಳೆಯುತ್ತಿದೆ. 2032  ರ ವೇಳೆಗೆ ಅಡಿಕೆ ಮಾರುಕಟ್ಟೆಯ US$ 1438.2 ಮಿಲಿಯನ್ ಮೌಲ್ಯದ ಜಾಗತಿಕ ವ್ಯಾಪಾರದಲ್ಲಿ ಕಾಣಿಸಿಕೊಳ್ಳಬಹುದು. ಇದೇ ವೇಳೆಯ ಅಡಿಕೆಯ ಬೇಡಿಕೆ, ಆರೋಗ್ಯ ಪರಿಣಾಮ ಹಾಗೂ ಇತರ ಪ್ರಭಾವಗಳೂ ಅಂತಿಮ ಹಂತದಲ್ಲಿ ಕಾಣಬಹುದು ಎಂದು ಮಾರುಕಟ್ಟೆ ವಿಶ್ಲೇಷಣಾ ಖಾಸಗಿ ಸಂಸ್ಥೆ ಅಭಿಪ್ರಾಯಪಟ್ಟಿದೆ.

Advertisement

ಈಗ ಅಡಿಕೆ ಮಾರುಕಟ್ಟೆಯು ಜಾಗತಿಕವಾಗಿ ಗುರುತಿಸಿಕೊಂಡಿದೆ. ಅಡಿಕೆಯನ್ನು ಹಲವು ದೇಶಗಳಲ್ಲಿ ಜಗಿಯುವ ಉದ್ದಶಗಳಿಗಾಗಿ ಬಳಕೆ ಮಾಡುತ್ತಾರೆ. ಇದರ ಜೊತೆಗೆ  ಸಾಂಪ್ರದಾಯಿಕ ಔಷಧಿಗಳಿಗೂ ಬಳಕೆ ಮಾಡುತ್ತಾರೆ. ಹಾಗಿದ್ದರೂ ಅಡಿಕೆಯ ಮೇಲೆ ಕೆಲವು ಆಪಾದನೆಗಳೂ ಇವೆ. ಈ ಎಲ್ಲದರ ನಡುವೆಯೂ ಜಾಗತಿಕ ಅಡಿಕೆ ಬೇಡಿಕೆಯು 2022 ರಲ್ಲಿ US$ 834.0 ಮಿಲಿಯನ್ ಮೌಲ್ಯದ್ದಾಗಿದೆ ಎಂದು ನಿರೀಕ್ಷಿಸಲಾಗಿದೆ. 2022 ರಿಂದ 2032 ರವರೆಗೆ ಸುಮಾರು ಶೇ.5.6 ರಷ್ಟು ಬೆಳೆಯುವ ನಿರೀಕ್ಷೆ ಇದೆ.

ಆಗ್ನೇಯ ಏಷ್ಯಾ ಮತ್ತು ಇತರ ಕಡೆ, ಜನರು ಅಡಿಕೆಯನ್ನು ತಿನ್ನಲು ಬಳಕೆ ಮಾಡುತ್ತಾರೆ . ಭಾರತವು ಅಡಿಕೆಯ ವಿಶ್ವದ ಅಗ್ರ ಉತ್ಪಾದಕ ಮತ್ತು ಗ್ರಾಹಕ. ಮಿತಿಮೀರಿದ ಅಡಿಕೆ ಸೇವನೆಯು  ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವ ಕಾರಣದಿಂದ  ಅಡಿಕೆ ಮಾರುಕಟ್ಟೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವಾಗಲೂ ಸಮಸ್ಯೆಯಿಂದಲೇ ಕಾಣುತ್ತಿದೆ. ಹಾಗಿದ್ದರೂ ಅಡಿಕೆ ಜಾಗತಿಕವಾಗಿ ಗುರುತಿಸಿಕೊಂಡಿದೆ.

ಭಾರತವು ಅಡಿಕೆಯ ಅತಿದೊಡ್ಡ ಉತ್ಪಾದಕ ಮತ್ತು ಗ್ರಾಹಕ. ಅಡಿಕೆಯ ಜಾಗತಿಕ ಉತ್ಪಾದನೆಯ ಅರ್ಧಕ್ಕಿಂತ ಹೆಚ್ಚಿನ ಭಾಗಕ್ಕೆ ಭಾರತವು ಕಾರಣವಾಗಿದೆ. ಭಾರತ, ಬಾಂಗ್ಲಾದೇಶ, ಇಂಡೋನೇಷಿಯಾ, ಥೈಲ್ಯಾಂಡ್, ಶ್ರೀಲಂಕಾ ಮತ್ತು ಮ್ಯಾನ್ಮಾರ್, ಅಡಿಕೆಗೆ  ಬೇಡಿಕೆಯನ್ನು ಪೂರೈಸುವ ದೇಶಗಳಾಗಿವೆ.

ಈಗ ಅಡಿಕೆ ಮಾರುಕಟ್ಟೆಯಲ್ಲಿ ಉತ್ಪಾದನೆ ಹಾಗೂ ಬಳಕೆ ಎರಡೂ ಕೂಡಾ ಒಂದು ಹಂತದಲ್ಲಿದೆ. ಇನ್ನು ಮುಂದಿನ 10 ವರ್ಷಗಳಲ್ಲಿ  ಉತ್ಪಾದನೆಯಲ್ಲಿ ಮತ್ತಷ್ಟು  ಏರಿಕೆ  ಕಾಣಲಿದೆ. ಹೀಗಾಗಿ ಮಾರುಕಟ್ಟೆ ವಿಸ್ತಾರವಾಗುತ್ತದೆ. ಬಳಕೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಆರೋಗ್ಯ ಸಂಬಂಧಿತ ದೂರುಗಳೇ ಈಗ ಇರುವ ಸವಾಲುಗಳಾಗಿವೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದ ತೋಟಗಾರಿಕಾ ಹಣ್ಣಿನ ಬೆಳೆಗಳತ್ತ ಚಿತ್ತ | ಜಾಗತಿಕ ಮಾರುಕಟ್ಟೆಗೆ ಭಾರತೀಯ ತಾಜಾ ಹಣ್ಣುಗಳ ಪರಿಚಯ |
April 22, 2025
7:18 AM
by: ದ ರೂರಲ್ ಮಿರರ್.ಕಾಂ
ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಕುರಿತು ಹೆಚ್ಚು ತಿಳುವಳಿಕೆ ನೀಡಬೇಕಾದ ಅಗತ್ಯವಿದೆ
April 22, 2025
6:51 AM
by: The Rural Mirror ಸುದ್ದಿಜಾಲ
ಹಾವು, ಕಾಗೆ, ನಾಯಿಗಳು ಕನಸಿನಲ್ಲಿ ಬಂದ್ರೆ ನಿರ್ಲಕ್ಷ್ಯ ಮಾಡ್ಬೇಡಿ…!
April 22, 2025
6:41 AM
by: ದ ರೂರಲ್ ಮಿರರ್.ಕಾಂ
ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ | ಆಲಿಕಲ್ಲು, ಗುಡುಗು ಸಹಿತ ಭಾರಿ ಮಳೆ
April 22, 2025
6:30 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group