#Arecanut | ಅಡಿಕೆ ಮಾರುಕಟ್ಟೆ ಏನಾಗುತ್ತಿದೆ ? | ಗಣೇಶ ಚತುರ್ಥಿ ಬಳಿಕ ಮಾರುಕಟ್ಟೆ ಚೇತರಿಕೆ ? |

August 18, 2023
1:23 PM
ಅಡಿಕೆ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಕಂಡುಬಂದಿದೆ. ಆದರೆ ಗಣೇಶ ಚೌತಿ ಬಳಿಕ ಅಡಿಕೆ ಧಾರಣೆಯಲ್ಲಿ ಮಹತ್ವದ ಬದಲಾವಣೆ ಕಾಣಲಿದೆ ಎಂದು ಮಾರುಕಟ್ಟೆ ವಲಯ ಹೇಳುತ್ತಿದೆ. ಇದೇ ವೇಳೆ ಗುಜರಾತಿನ ಅಹಮದಾಬಾದಿನಲ್ಲಿ  ಕೆಜಿ ಅಡಿಕೆಗೆ 600 ರೂಪಾಯಿಗೆ ಬೇಡಿಕೆ ವ್ಯಕ್ತವಾಗಿದೆ.

ಅಡಿಕೆ ಮಾರುಕಟ್ಟೆಯು ನಿರೀಕ್ಷಿತ ರೀತಿಯಲ್ಲಿ ಚೇತರಿಕೆ ಕಂಡಿಲ್ಲ. ಇದೀಗ ಚಾಲಿ ಹೊಸ ಅಡಿಕೆ ಹಾಗೂ ಹಳೆ ಅಡಿಕೆ ಧಾರಣೆಯಲ್ಲೂ ಏರಿಳಿತ ಕಂಡುಬಂದಿದೆ. ಈ ನಡುವೆ ಗಣೇಶ ಚೌತಿ ಬಳಿಕ ಅಡಿಕೆ ಧಾರಣೆಯಲ್ಲಿ ಮಹತ್ವದ ಬದಲಾವಣೆ ಕಾಣಲಿದೆ ಎಂದು ಮಾರುಕಟ್ಟೆ ವಿಶ್ಲೇಷಣೆ ಅಭಿಪ್ರಾಯ ಪಟ್ಟಿದೆ. ಇದೇ ವೇಳೆ ಗುಜರಾತಿನ ಅಹಮದಾಬಾದಿನಲ್ಲಿ  ಕೆಜಿ ಅಡಿಕೆಗೆ 600 ರೂಪಾಯಿಗೆ ಬೇಡಿಕೆ ವ್ಯಕ್ತವಾಗಿದೆ.

Advertisement
Advertisement

ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಕಳೆದ ಎರಡು  ತಿಂಗಳಿನಿಂದ ಚಾಲಿ ಅಡಿಕೆಯಲ್ಲಿ ಹೊಸ ಅಡಿಕೆ ಧಾರಣೆ ಏರುಗತಿಯಲ್ಲಿ ಸಾಗಿತ್ತು. ಹಳೆ ಅಡಿಕೆ ಧಾರಣೆ ಸ್ಥಿರತೆಯಲ್ಲಿತ್ತು. ಇದೀಗ ಹೊಸ ಅಡಿಕೆ ಧಾರಣೆ 445 ರೂಪಾಯಿ ಹಾಗೂ ಹಳೆ ಅಡಿಕೆ ಧಾರಣೆ 480 ರೂಪಾಯಿಯಲ್ಲಿದೆ. ಕಳೆದ ಒಂದು ವಾರದಿಂದ ಅಡಿಕೆ ಧಾರಣೆ ಇಳಿಕೆಯ ಹಾದಿಯಲ್ಲಿದೆ.

Advertisement

ಇದೇ ವೇಳೆ ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಇತರ ಎಲ್ಲಾ ಕಡೆಗಳಲ್ಲೂ ಅಡಿಕೆ ಧಾರಣೆ ಇಳಿಕೆಯ ಹಾದಿಯಲ್ಲಿ ಸಾಗಿದೆ. ಧಾರಣೆ ಇಳಿಕೆಗೆ ವಿವಿಧ ಕಾರಣ ನೀಡಲಾಗುತ್ತಿದೆ. ವಿದೇಶಿ ಅಡಿಕೆ ಆಮದು , ವಿಪರೀತ ದಾಸ್ತಾನು ಸೇರಿದಂತೆ ಹಲವು ಕಾರಣಗಳು ಮಾರುಕಟ್ಟೆ ವಲಯದಲ್ಲಿದೆ. ಕಳ್ಳದಾರಿಯ ಮೂಲಕ ಅಡಿಕೆ ಸಾಗಾಣಿಕೆ ಆಗಿರುವುದು ಚಾಲಿ ಅಡಿಕೆ ಮಾರುಕಟ್ಟೆ ಮೇಲೆ ಸ್ವಲ್ಪ ಪ್ರಮಾಣದ ಪರಿಣಾಮ ಬೀರಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಆಮದು ಅಡಿಕೆ ಲಭ್ಯವಾಗುತ್ತಿದೆ ಎಂದು ಮಾರುಕಟ್ಟೆ ವಲಯ ಹೇಳಿಕೊಂಡಿದೆ.

600 ರೂಪಾಯಿಗೆ ಅಡಿಕೆ ಬೇಡಿಕೆ

ಗಣೇಶ ಚೌತಿಯ ಬಳಿಕ ಹೊಸ ಅಡಿಕೆಯು ಮಾರುಕಟ್ಟೆ ಪ್ರವೇಶ ಮಾಡುತ್ತದೆ. ಈ ಸಂದರ್ಭ ಹೊಸ ಅಡಿಕೆ ಧಾರಣೆ ನಿಗದಿಯಾಗುತ್ತದೆ. ಆ ಬಳಿಕ ಅಡಿಕೆ ಧಾರಣೆ ಮತ್ತೆ ಏರಿಕೆಯಾಗುವುದು  ಸಾಮಾನ್ಯವಾಗಿ ಕಂಡುಬರುತ್ತದೆ. ಈ ಬಾರಿ ಕೂಡಾ ಅದೇ ಟ್ರೆಂಡ್‌ ಮುಂದುವರಿಯಲಿದೆ ಎನ್ನುವುದು ಮಾರುಕಟ್ಟೆ ವಲಯದ ಅಭಿಪ್ರಾಯ.

Advertisement

ದಕ್ಷಿಣ ಕನ್ನಡದಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ದರ ಕೆಜಿಗೆ 438 ರಿಂದ 445 ರೂಪಾಯಿ ಇದೆ. ಹಳೆ ಅಡಿಕೆ ಧಾರಣೆ 465 ರಿಂದ 48೦ ರವರೆಗೆ ಇದೆ.  ವಿಶೇಷವಾಗಿ ಮಲೆನಾಡು ಭಾಗದ ಚಾಲಿ ಅಡಿಕೆ ಉತ್ತಮ ಗುಣಮಟ್ಟ ಹೊಂದಿದ್ದು ಈ ಅಡಿಕೆಯನ್ನು ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಬೇಡಿಕೆ ಇದೆ. ಈಗಾಗಲೇ ಕೆಜಿ ಅಡಿಕೆಗೆ 600 ರೂಪಾಯಿಗೆ ಬೇಡಿಕೆ ವ್ಯಕ್ತವಾಗಿದೆ.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡು ಕಳೆದು ಹೋಗಿದೆ….! | ಯಾರಾದರೂ “ಮಲೆನಾಡಿಗೆ” ಈ ಮೊದಲಿನ “ಮಳೆಗಾಲ” ತಂದು ಕೊಡುವಿರಾ…. !
May 7, 2024
11:33 AM
by: ಪ್ರಬಂಧ ಅಂಬುತೀರ್ಥ
Karnataka Weather | 07-05-2024 | ಮಳೆಯ ಸೂಚನೆ ಬಂದೇ ಬಿಟ್ಟಿದೆ |ಹಲವು ಕಡೆ ಗುಡುಗು-ಸಿಡಿಲು ಇರಬಹುದು, ಇರಲಿ ಎಚ್ಚರಿಕೆ |
May 7, 2024
11:08 AM
by: ಸಾಯಿಶೇಖರ್ ಕರಿಕಳ
ಆಹಾರ ಬದಲಾವಣೆಯಿಂದ ವಾತಾವರಣದ ತಾಪಮಾನ ಏರಿಕೆಯ ಸಮಸ್ಯೆಗೂ ಪರಿಹಾರ…! | ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಖಾದರ್ ಪ್ರತಿಪಾದನೆ |
May 7, 2024
7:00 AM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror