ಅಡಿಕೆ ಕಳ್ಳಸಾಗಾಣಿಕೆ ಮತ್ತೆ ತಡೆದ ಗಡಿಭದ್ರತಾ ಪಡೆ | ಅಡಿಕೆ ಮಾರುಕಟ್ಟೆಗೆ ಸಿಗುತ್ತಿದೆ ಭದ್ರತೆ | ಏನಾಗಬಹುದು ಅಡಿಕೆ ಮಾರುಕಟ್ಟೆ ?

January 18, 2021
11:53 AM

ಮಿಜೋರಾಂನ ಚಂಪೈ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಗಡಿ ಭದ್ರತಾ ಪಡೆಯು ಪತ್ತೆ ಮಾಡಿದೆ. 3.8 ಕೋಟಿ ರೂ.ಗಳ ಮೌಲ್ಯದ 2,100 ಚೀಲ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡು ತನಿಖೆಗೆ ಹಸ್ತಾಂತರಿಸಿದೆ. ಈಗಿನ ಮಾಹಿತಿ ಪ್ರಕಾರ ಮಾನ್ಮಾರ್‌ ನಿಂದ ಅಡಿಕೆಯನ್ನು  ಇಂಡೋ ಮಾನ್ಮಾರ್‌ ಗಡಿ ಮೂಲಕ ಮಿಜೋರಾಂ ದಾರಿಯಲ್ಲಿ ಸಾಗಾಟ ಮಾಡಲಾಗುತ್ತಿತ್ತು.

Advertisement
Advertisement

ಅಡಿಕೆ ಮಾರುಕಟ್ಟೆಗೆ ಮತ್ತೆ ಬಲ ಸಿಗುತ್ತಿದೆ. ಧಾರಣೆ ಸ್ಥಿರತೆ ಹಾಗೂ ಮಾರುಕಟ್ಟೆ ಏರಿಕೆಗೆ ನಿರೀಕ್ಷೆ ಕಂಡುಬಂದಿದೆ. ಲಾಕ್ಡೌನ್‌ ನಂತರ ದೇಶದ ಎಲ್ಲಾ ಗಡಿಭಾಗಗಳಲ್ಲೂ ಭದ್ರತೆಯನ್ನು ಹೆಚ್ಚಿಸಿರಿಸುವಿದರಿಂದ ಅಡಿಕೆ ಕಳ್ಳ ಸಾಗಾಣಿಕೆ ಕಷ್ಟವಾಗುತ್ತಿದೆ. ಅಕ್ರಮ ಹಾದಿಯಲ್ಲಿ ಅಡಿಕೆ ಆಮದು ಸಾಧ್ಯವಾಗುತ್ತಿಲ್ಲ.

Advertisement

ಇದೀಗ ಮತ್ತೆ ಮಾನ್ಮಾರ್‌ ನಿಂದ ಅಡಿಕೆಯನ್ನು ಕಳ್ಳದಾರಿಯ ಮೂಲಕ ದೇಶದೊಳಕ್ಕೆ ಸಾಗಿಸುವಾಗ ಅಸ್ಸಾಂ ಗಡಿಭದ್ರತಾ ಪಡೆಯು ತಡೆದಿದೆ. ಖಚಿತ ಮಾಹಿತಿ ಮೇರೆಗೆ, 23 ಸೆಕ್ಟರ್ ನ ಅಸ್ಸಾಂ ರೈಫಲ್ಸ್ ಮತ್ತು ಕಸ್ಟಮ್ಸ್ ವಿಭಾಗದ 8 ನೇ ಬೆಟಾಲಿಯನ್ ಜಂಟಿ ತಂಡವು ಅಡಿಕೆ ದಾಸ್ತಾನು ಮಾಡಿದ್ದ ಗೋಡೌನ್ ಮೇಲೆ ದಾಳಿ ನಡೆಸಿತು. ಈ ಸಂದರ್ಭ 3.52 ಕೋಟಿ ರೂ.ಗಳ ಮೌಲ್ಯದ 2,100 ಚೀಲ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

 

ಇದಾದ ಬೆನ್ನಲ್ಲೆ ಇನ್ನೊಂದು ದಾಸ್ತಾನು ಕೇಂದ್ರಕ್ಕೆ ದಾಳಿ ನಡೆಸಿದ ಅಸ್ಸಾಂ ಗಡಿ ಭದ್ರತಾ ಪಡೆಯು ಮಿಜೋರಾಂನ ಚಂಪೈ ಜಿಲ್ಲೆಯಲ್ಲಿ 21  ಲಕ್ಷ ರೂಪಾಯಿ ಮೌಲ್ಯದ ಅಡಿಕೆಯನ್ನು ಹಾಗೂ ಮಣಿಪುರದ ಚುರಚಾಂದ್‌ ಪುರದಿಂದ 31  ಲಕ್ಷ ರೂಪಾಯಿ ಮೌಲ್ಯದ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡಿದೆ.

Advertisement

 

Advertisement
ಏನಾಗಬಹುದು ಅಡಿಕೆ ಮಾರುಕಟ್ಟೆ ?
ಅಡಿಕೆ ಅಕ್ರಮ ಸಾಗಾಟಕ್ಕೆ ಈಗ ಬಹುತೇಕ ಬ್ರೇಕ್‌ ಬಿದ್ದಿರುವುದು  ಅಡಿಕೆ ಬೆಳೆಗಾರರಿಗೆ ಪ್ರಯೋಜನಕಾರಿಯಾಗಿದೆ. ಮುಂದೆ ಅಕ್ಟೋಬರ್‌, ನವೆಂಬರ್‌ ವರೆಗೆ ಉತ್ತರ ಭಾರತದ ವಿವಿದೆಡೆ ಚುನಾವಣೆಗಳೂ ಇರುವುದರಿಂದ ಗಡಿಭದ್ರತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಅಡಿಕೆ ಮಾರುಕಟ್ಟೆ ತೇಜಿ ಇರಬಹುದು ಎಂಬುದು ಮಾರುಕಟ್ಟೆ ಲೆಕ್ಕಾಚಾರ.

ಇದೇ ವೇಳೆ ಈ ಬಾರಿ ಅಡಿಕೆ ಫಸಲು ತೀರಾ ಕಡಿಮೆ ಇರುವುದರಿಂದ ಹೊಸ ಅಡಿಕೆ ಧಾರಣೆಯೂ ಇಳಿಕೆ ಕಾಣದು ಎಂಬುದು ಮಾರುಕಟ್ಟೆಯಲ್ಲಿನ ಸದ್ಯದ ಲೆಕ್ಕಾಚಾರ.  

Advertisement

ಆದರೆ ಅಡಿಕೆ ಧಾರಣೆ ಏರಿಳಿಕೆಗೆ ವಿವಿಧ ಪ್ರಯತ್ನಗಳು ಆಗಾಗ ನಡೆಯುತ್ತಿರುವುದನ್ನು ಬೆಳೆಗಾರರು ಗಮನಿಸಿದರೆ ಅಡಿಕೆ ಮಾರುಕಟ್ಟೆ ಸ್ಥಿರತೆ ಹಾಗೂ ಧಾರಣೆ ಏರಿಕೆಗೆ ಹೆಚ್ಚು ಅನುಕೂಲವಾಗಲಿದೆ.

 

 

Advertisement

 

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ : ಗೋ ಸಂತತಿಯ ಉಳಿವು ಅಂದರೆ ಧರ್ಮದ ಉಳಿವು
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಬರಗಾಲದ ಪರಿಣಾಮ | ತರಕಾರಿ ಬೆಲೆ ಏರಿಕೆಯ ಬಿಸಿ | ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ…. ಎಲ್ಲವೂ ದರ ಏರಿಕೆ |.
April 25, 2024
2:39 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror