MIRROR FOCUS

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬೇಸಿಗೆಯಲ್ಲಿ ಸಣ್ಣ ಅಡಿಕೆ ಸಸಿಗಳಿಗೆ ಮೈಟ್ ಬಾಧೆ ಸಾಮಾನ್ಯ. ಅದರಲ್ಲೂ, ನೀರು ಮತ್ತು ನೆರಳಿನ ನಿರ್ವಹಣೆ ಸರಿಯಿಲ್ಲದ ತೋಟಗಳಲ್ಲಿ ಇದರ ಬಾಧೆ ಇನ್ನೂ ಹೆಚ್ಚು. ಆದರೆ, ಕಳೆದ ಎರಡು ವರ್ಷಗಳಿಂದ ದೊಡ್ಡ ಮರಗಳನ್ನೂ ಇದು ಬಾಧಿಸುತ್ತಿದೆ.……… ಮುಂದೆ ಓದಿ…….

Advertisement

“ಅಡಿಕೆ ಮರದ ಸೋಗೆಗಳು ಹಳದಿಯಾಗುತ್ತಿವೆ. ಕಳೆದ ಒಂದು ವಾರದಿಂದ ಅದರ ಲಕ್ಷಣ ಹೆಚ್ಚಾಗುತ್ತಿದೆ, ಯಾಕಿರಬಹುದು? ಒಮ್ಮೆ ತೋಟಕ್ಕೆ ಭೇಟಿ ನೀಡಬಹುದೇ?” ಸವಣೂರಿನ ಕೃಷಿಕರೊಬ್ಬರ ಪ್ರಶ್ನೆ. ಜನವರಿ ಮತ್ತು ಫೆಬ್ರವರಿ ತಿಂಗಳ ಇಬ್ಬನಿ ಬೀಳುವ ಸಮಯದಲ್ಲಿ ಬಿಸಿಲು ಬೀಳುವ ಎಲೆಯ ಭಾಗವು ಹಳದಿಯಾಗುವುದ್ದಿದೆ. ಈ ವರ್ಷ ಇದು ಸ್ವಲ್ಪ ಹೆಚ್ಚು. ಬಹುಶಃ, ಗಾಳಿಯ ಆರ್ದ್ರತೆ ಕಡಿಮೆಯಿದ್ದದ್ದು ಅದಕ್ಕೆ ಪೂರಕವಾಗಿರಬಹುದು. ಹಾಗಾಗಿ, ಕರೆ ಮಾಡಿದ ಕೃಷಿಕರಿಗೆ ಅಡಿಕೆ ಮರದ ಚಿತ್ರ ಕಳಿಸಲು ಹೇಳಿ ನಂತರ ಮೈಟ್ ಇದೆಯೇ ಎಂದು ಪರೀಕ್ಷಿಸಲು ಹೇಳಿದೆ. ಆಶ್ಚರ್ಯಕರವಾಗಿ ದೊಡ್ಡ ಮರಗಳ ಎಲೆಯಲ್ಲಿ ಮೈಟ್ ಲಕ್ಷಣವಿತ್ತು. ಫೆಬ್ರವರಿಯಲ್ಲಿ ದೊಡ್ಡ ಮರಗಳಿಗೆ ಮೈಟ್ ಸಾಮಾನ್ಯವಾಗಿ ಬಾಧಿಸುವುದು ಕಡಿಮೆ. ಮಾರ್ಚ್ ಮೇ ತಿಂಗಳಲ್ಲಿ ಹೆಚ್ಚು. ಅಲ್ಲದೆ, ಕಳೆದ ಒಂದು ವಾರದಿಂದ ಕೆಲವು ಸಸಿ ತೋಟ ಮತ್ತು ಫಲ ನೀಡುವ ತೋಟಗಳಲ್ಲಿ ಇದರ ಬಾಧೆ ಕಾಣಿಸಿಕೊಂಡಿದ್ದು, ಈ ವರ್ಷ ಮೈಟ್ ಹಾವಳಿ ಹೆಚ್ಚಾಗುವ ಸಾಧ್ಯತೆ ಇದೆ. ಆದುದರಿಂದ, ನಾವು ಎಚ್ಚರಿಕೆ ವಹಿಸಬೇಕಾಗಿದೆ.

ಗುರುತಿಸುವುದು ಹೇಗೆ: ನುಸಿ ಅಥವಾ ಮೈಟ್ ಅತ್ಯಂತ ಸಣ್ಣ ಗಾತ್ರವನ್ನು ಹೊಂದಿದ್ದು, ಬರಿಗಣ್ಣಿನಲ್ಲಿ ಸುಲಭವಾಗಿ ಗುರುತಿಸುವುದು ಕಷ್ಟ. ಬಿಳಿ ನುಸಿಯು ಬಿಳಿ ಬಣ್ಣದ ಬಲೆಯೊಳಗೆ ಅವಿತುಕೊಂಡು ರಸಹೀರುತ್ತವೆ. ಹಾಗಾಗಿ, ಬೆರಳ ತುದಿಯಿಂದ ಅಡಿಕೆ ಎಲೆಯ ಅಡಿ ಭಾಗವನ್ನು ಉಜ್ಜಿದಾಗ ಬಿಳಿ ಬಣ್ಣದ ಬಲೆ ಅಥವಾ ಕೆಂಪು ಬಣ್ಣ ಬೆರಳ ತುದಿಗೆ ಅಂಟಿಕೊಂಡರೆ ಮೈಟ್ ಕೀಟವೆಂದು ಗುರುತಿಸಬಹುದು.

ನಿರ್ವಹಣೆ:

  • ಬೇಸಿಗೆಯ ಸಮಯದಲ್ಲಿ ಈ ಕೀಟದ ಬಾಧೆ ಹೆಚ್ಚಿದ್ದು, ಮಳೆಗಾಲದಲ್ಲಿ ಕಡಿಮೆ ಆಗುತ್ತದೆ.
  • ಪೊಟ್ಯಾಸಿಯಂ ಸೇರಿದಂತೆ ಇತರ ಪೋಷಕಾಂಶಗಳ ಸಮತೋಲಿತ ನಿರ್ವಹಣೆ, ನೀರುಣಿಸುವುದು ಹಾಗೂ ಸಸಿಗಳಿಗೆ ನೆರಳು ಒದಗಿಸುವುದು ಮೈಟ್ ಬಾಧೆಯನ್ನು ಕಡಿಮೆ ಮಾಡಲು ಸಹಕಾರಿ.
  • ಫೆಬ್ರವರಿ – ಮೇ ತಿಂಗಳಲ್ಲಿ ಅಡಿಕೆ ಸಸಿ ಮತ್ತು ಮರಗಳನ್ನು ಸರಿಯಾಗಿ ಗಮನಿಸುತ್ತಿರಬೇಕು. ಪ್ರಾರಂಭಿಕ ಹಂತದಲ್ಲಿಯೇ ಮೈಟ್ / ನುಸಿಯನ್ನು ಗುರುತಿಸಿ, ಬೇವಿನ ಎಣ್ಣೆ + ಸೋಪ್ ಅನ್ನು ಒಂದು ಲೀಟರ್ ನೀರಿಗೆ 5 ಎಂ.ಎಲ್ ಪ್ರಮಾಣದಲ್ಲಿ ಅಥವಾ ಗಂಧಕದ ಹುಡಿ ( Wettable Sulfur) ಅನ್ನು ಪ್ರತೀ ಲೀಟರ್ ನೀರಿಗೆ 2ಗ್ರಾಂ ಪ್ರಮಾಣದಲ್ಲಿ ಎಲೆಯ ಕೆಳಭಾಗಕ್ಕೆ ಸಿಂಪಡಿಸಬೇಕು. ಇವು ಬಳಕೆಗೆ ಸುರಕ್ಷಿತ.
  • ಹೆಚ್ಚಿನ ಬಾಧೆಯಿದ್ದರೆ, ಸ್ಪೈರೋಮೆಸಿಫೆನ್ ( Spiromesifen ) ಅಥವಾ ಪ್ರೋಪರ್ಗೈಟ್ ( Propargite ) ನುಸಿನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಎಂ.ಎಲ್ ಪ್ರಮಾಣದಲ್ಲಿ ಎಲೆಗೆ ಸಿಂಪಡಿಸಬಹುದು.
  • ಕಾಕ್ಸಿನೆಲ್ಲಿಡ್ ದುಂಬಿ (ಗುಲಗಂಜಿ ಕೀಟ),ಅಂಬ್ಲಿಸಿಯಸ್ (ಪರಭಕ್ಷಕ ನುಸಿ), ಪರಭಕ್ಷಕ ತ್ರಿಪ್ಸ್ ಸೇರಿದಂತೆ ಸುಮಾರು ಆರಕ್ಕಿಂತಲೂ ಹೆಚ್ಚು ಪರೋಪಕಾರಿ ಕೀಟಗಳು ನುಸಿಯನ್ನು ನಿಯಂತ್ರಿಸುತ್ತವೆ. ಹಾಗಾಗಿ, ಯಾವುದೇ ಕೀಟನಾಶಕವನ್ನು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಅಡಿಕೆ ತೋಟದಲ್ಲಿ ಸಿಂಪಡಿಸಬೇಕು. ಶಿಲಿಂದ್ರನಾಶಕ ಸಿಂಪಡಿಸುತ್ತಿದ್ದರೆ, ಜೊತೆಗೆ ಕೀಟನಾಶಕವೂ ಇರಲಿ ಎನ್ನುವುದು ಬೇಡ.

ಅಡಿಕೆಯ ಕೀಟ ಬಾಧೆಯ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರಿಂದ ಮಾಹಿತಿ. ಸಿಪಿಸಿಆರ್‌ಐ ವಿಜ್ಞಾನಿ ಡಾ.ಭವಿಷ್ಯ ಅವರು ಈ ಹಿಂದೆ ನಡೆದ ಕೃಷಿ ಮಾಹಿತಿ ಕಾರ್ಯಕ್ರಮಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು.ಅವರ ಮಾಹಿತಿ ಹಾಗೂ ಸಿಪಿಸಿಆರ್‌ಐ ನಿರ್ದೇಶಕರ ಮಾಹಿತಿ ಮೇಲಿದೆ.

During the dew-laden months of January and February, the exposed portions of the leaves exhibit a yellowing phenomenon. The likelihood of mite infestation decreases for larger trees by February. The situation in March exceeds that of May in terms of potential impact. There is an anticipated increase in mite infestations this year; therefore, it is imperative that precautions are duly taken.

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಭಯಾರಣ್ಯದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧಕ್ಕೆ ಮನವಿ

ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದೆಂದು ಸಂಸತ್ ಸದಸ್ಯ ತೇಜಸ್ವಿ…

34 minutes ago

ಪಂಚಗ್ರಹಿ ಯೋಗ ಎಂದರೇನು..? | ಈ ಯೋಗವು ಮಹತ್ವದ್ದಾಗಿದೆ ಏಕೆ.. ?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

40 minutes ago

ಕೃಷಿ ಸಖಿಯರ ಪ್ರಥಮ ಪ್ರಗತಿ ಪರಿಶೀಲನಾ ಸಭೆ | ವಿವಿಧ ತರಕಾರಿ ಬೀಜಗಳ ವಿತರಣೆ | ತರಕಾರಿ ಬೆಳೆಸುವ ವಿಧಾನಗಳ ಬಗ್ಗೆ ಮಾಹಿತಿ |

ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ…

8 hours ago

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಎರಡು ದಿನ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ವಿವಿಧೆಡೆ ಇಂದು ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ರಾಜಧಾನಿ ಬೆಂಗಳೂರಿನಲ್ಲಿ ಮಳೆ…

12 hours ago

ಹೆಚ್ಚಿದ ತಾಪಮಾನ | ರಾಜ್ಯದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಯ ಕೆಲಸದ ಅವಧಿ ಬದಲಾವಣೆ ಆದೇಶ

ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚಿದ ತಾಪಮಾನ ಹಿನ್ನೆಲೆಯಲ್ಲಿ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ…

12 hours ago

ಹವಾಮಾನ ವರದಿ | 03-04-2025 | ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ | ಎ.4 ರಿಂದ ಮಳೆ ಪ್ರಮಾಣ ಕಡಿಮೆ

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.ಎಪ್ರಿಲ್ 4ರಿಂದ ವ್ಯಾಪ್ತಿ ಹಾಗೂ ಪ್ರಮಾಣ…

14 hours ago