ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲ ಭಾಗಗಳಲ್ಲಿ ಎಳೆ ಅಡಿಕೆ (ನಳ್ಳಿ) ಉದುರುವ ಸಮಸ್ಯೆ ಕಾಣಿಸಿಕೊಂಡಿದ್ದು, ಅಂದಾಜು 8 ರಿಂದ 10 ಶೇಕಡಾ ಮಟ್ಟಿಗೆ ಬೆಳ ನಷ್ಟವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಂದಾಜು ತಿಳಿಸಿದೆ.
ಅಡಿಕೆ ಬೆಳೆಯ ಸಮಸ್ಯೆಯ ಬಗ್ಗೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಸದನದಲ್ಲಿ “ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲ ಭಾಗಗಳಲ್ಲಿ ಎಳೆ ಅಡಿಕೆ (ನಳ್ಳಿ) ಉದುರುವ ಸಮಸ್ಯೆ ಉಂಟಾಗಿದ್ದು ಅಂದಾಜು ಎಷ್ಟು ಪ್ರಮಾಣದ ಬೆಳ ನಷ್ಟವಾಗಿದ,; ಎಷ್ಟು ಪ್ರಮಾಣದ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ” ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ತೋಟಗಾರಿಕಾ ಸಚಿವರು, ಬೆಳೆ ನಷ್ಟವಾದ ಸಂದರ್ಭಗಳಲ್ಲಿ ತೋಟಗಾರಿಕೆ ಇಲಾಖೆಯಿಂದ ನೇರ ಪರಿಹಾರ ನೀಡುವ ಕಾರ್ಯಕ್ರಮ ಇಲ್ಲದಿದ್ದರೂ, ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಅಡಿಕೆ ಬೆಳೆಯನ್ನು ಅಧಿಸೂಚಿತ ಬೆಳೆಗಳ ಪಟ್ಟಿಗೆ ಸೇರಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ನಷ್ಟ ಉಂಟಾದರೆ ವಿಮಾ ಪರಿಹಾರ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಏರಿಕೆ ಹಾಗೂ ಅಕಾಲಿಕ ಮಳೆಯ ಪರಿಣಾಮವಾಗಿ ಹಿಂಗಾರು ಸಾಯುವುದು, ಕರಟುವುದು ಹಾಗೂ ಎಲೆಚುಕ್ಕೆ ರೋಗ ಹೆಚ್ಚುತ್ತಿರುವ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ತೋಟಗಾರಿಕೆ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ಒಟ್ಟು 88,559 ಹೆಕ್ಟೇರ್ ಅಡಿಕೆ ತೋಟಗಳು ಎಲೆಚುಕ್ಕೆ ರೋಗದಿಂದ ಹಾನಿಗೊಳಗಾಗಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಜಿಲ್ಲಾವಾರು ಎಲೆಚುಕ್ಕೆ ರೋಗ ಹಾನಿ (ಹೆಕ್ಟೇರ್)
-
ಚಿಕ್ಕಮಗಳೂರು – 25,210
-
ಶಿವಮೊಗ್ಗ – 32,124
-
ಉತ್ತರ ಕನ್ನಡ – 8,730
-
ಹಾಸನ – 360
-
ದಕ್ಷಿಣ ಕನ್ನಡ – 20,830
-
ಉಡುಪಿ – 455
-
ಕೊಡಗು – 850
ಇನ್ನೊಂದೆಡೆ, ಎಲೆಚುಕ್ಕೆ ನಿಯಂತ್ರಣಕ್ಕಾಗಿ ಶಿಫಾರಸ್ಸಾಗಿರುವ ಪ್ರೋಪಿಕೊನಜೋಲ್ ಸೇರಿದಂತೆ ರಾಸಾಯನಿಕ ಸಿಂಪಡಣೆಗಳು ಜೇನು ಸಾಕಾಣಿಕೆಗೆ ಹಾನಿಕಾರಕವಾಗುವ ಸಾಧ್ಯತೆ ಇದೆ ಎಂಬ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ, ಜೇನು ಕೃಷಿಗೆ ಹಾನಿಯಾಗದಂತೆ ಜೈವಿಕ ಹಾಗೂ ಜೀವಾಣುನಾಶಕ ಪರ್ಯಾಯ ವಿಧಾನಗಳನ್ನು ಪರಿಗಣಿಸಿ ಶಿಫಾರಸ್ಸು ಮಾಡುವ ಉದ್ದೇಶವಿದೆ ಎಂದು ಸಂಬಂಧಿತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ಸದ್ಯ ಎಲೆಚುಕ್ಕಿಗೆ ಯಾವುದೇ ಬಯೋ ಅಥವಾ 100% ಗ್ಯಾರಂಟಿ ಔಷಧಿಗಳಿಲ್ಲ, ಈ ಬಗ್ಗೆ ಅಧ್ಯಯನವಾಗಿಲ್ಲ ಎಂದೂ ಪರೋಕ್ಷವಾಗಿ ತಿಳಿಸಿದೆ.
An estimated 8–10% immature arecanut nut drop has been reported in parts of Dakshina Kannada and Udupi districts. Meanwhile, leaf spot disease has affected about 88,559 hectares of arecanut plantations across Karnataka, and the government is considering biological alternatives to chemical fungicides to protect beekeeping.

