ಅಡಿಕೆ ಚೊಗರಿನ ಸೀರೆ ಈಗಾಗಲೇ ಸದ್ದು ಮಾಡಿದೆ. ಕೈಮಗ್ಗ ಬಟ್ಟೆಗೆ ಅಡಿಕೆ ಚೊಗರು ಹಾಗೂ ನೈಸರ್ಗಿಕ ಬಣ್ಣದಿಂದ ತಯಾರು ಮಾಡಿರುವ ಸೀರೆ ವಿವಿಧ ಕಡೆ ಗಮನ ಸೆಳೆದಿತ್ತು. ಇದೀಗ ಕೈಮಗ್ಗ ಬಟ್ಟೆಗೆ ಅಡಿಕೆ ಚೊಗರು ಬಳಕೆ ಮಾಡಿ ಪಂಚೆ ಹಾಗೂ ಶಾಲು ಸಿದ್ಧವಾಗಿದೆ.ಕಾರ್ಕಳದ..
ಕಾರ್ಕಳದ ಕದಿಕೆ ಟ್ರಸ್ಟ್ ಮೂಲಕ ನೇಕಾರಿಕೆ ತರಬೇತಿ ಪಡೆಯುತ್ತಿರುವ ತಂಡವು ಈ ಪಂಚೆ ತಯಾರು ಮಾಡುತ್ತಿದೆ. ಕುಂದಾಪುರದ ಹೊಸೇರಿ ಹಾಡಿಮನೆಯ ಪ್ರದೇಶದಲ್ಲಿ ಈ ತರಬೇತಿ ನಡೆಯುತ್ತಿದೆ. ಇಲ್ಲಿಯ ಉತ್ಪನ್ನಕ್ಕೆ ಬಾಗಳ್ ಎಂದು ಹೆಸರಿಸಲಾಗಿದೆ. ಈ ಪ್ರದೇಶದಲ್ಲಿ ಪುರಾತನವಾದ ರೆಂಜೆ/ಬಕುಳ ಮರ ಇದೆ, ಅಲ್ಲೇ ಊರಿನ ದೈವದ ಗುಡಿಯೂ ಇದೆ. ಈ ಎಲ್ಲಾ ಕಾರಣಕ್ಕೆ ಬಾಗಳ್ ಎಂದು ಆ ಪುರಾತನ ಮರದ ಹೆಸರನ್ನು ಉಲ್ಲೇಖಿಸಲಾಗಿದೆ. ಕುಂದಗನ್ನಡದಲ್ಲಿ ಈ ಮರವನ್ನು ಬಾಗಳ್ ಎನ್ನುತ್ತಾರೆ. ಹೀಗಾಗಿ ಬಾಗಳ್ ಎಂದು ಹೆಸರಿಸಲಾಗಿದೆ. ಈ ಬಗ್ಗೆ….
ಅಡಿಕೆಯ ಚೊಗರಿನ ಬಟ್ಟೆ ಉತ್ಪನ್ನಗಳಿಗೆ ಈಗಾಗಲೇ ಬೇಡಿಕೆ ವ್ಯಕ್ತವಾಗಿದ್ದು, ಈಗ ಅಡಿಕೆ ಚೊಗರಿನ ಪಂಚೆ ಹಾಗೂ ಶಾಲು ಕೂಡಾ ತಯಾರಿಕೆಯಾಗಿದೆ. ಗ್ರಾಮೀಣ ಉತ್ಪನ್ನ ಹಾಗೂ ಅಡಿಕೆಯ ಮೌಲ್ಯವರ್ಧನೆ ಇಲ್ಲಿ ಪ್ರಮುಖವಾಗಿದೆ. ಇದರ ಜೊತೆಗೆ ನೇಕಾರಿಕೆ ಉಳಿಸಲು ಹಲವು ಪ್ರಯತ್ನ ನಡೆಯುತ್ತಿದೆ. ಈ ಕಾರಣದಿಂದ ಬಟ್ಟೆ ಖರೀದಿ ಮಾಡುವ ಮೂಲಕ ದೇಸೀ ಉದ್ಯಮಕ್ಕೆ, ಕೈಮಗ್ಗ, ನೇಕಾರಿಕೆ ಉಳಿಸಲು ಬೆಂಬಲ ವ್ಯಕ್ತಪಡಿಸಬಹುದು. ಅಡಿಕೆ ಚೊಗರು ಅಂಚಿನ ಪಂಚೆ ಶಾಲು ಸೆಟ್ ಕೂಡಾ ಕದಿಕೆ ಟ್ರಸ್ಟ್ ಮೂಲಕ ಲಭ್ಯ ಇದೆ. ಪಂಚೆ : 800 ರೂಪಾಯಿ, ಶಾಲು : 600 ರೂಪಾಯಿ, ಎರಡೂ ಜೊತೆ ಗೆ 1400 ರೂಪಾಯಿ ಹಾಗೂ ಕಳುಹಿಸುವ ವೆಚ್ಚ ಪ್ರತ್ಯೇಕ ವಿಧಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ 9880835299 ಸಂಪರ್ಕ ಮಾಡಬಹುದು. ಖರೀದಿ ಆಸಕ್ತರು ಕಾಯ್ದಿರಿಸಬೇಕಾಗುತ್ತದೆ. ತಯಾರಾದಂತೆ ಆಸಕ್ತರಿಗೆ ಕಳುಹಿಸಿಕೊಡುತ್ತಾರೆ.(ಅಡಿಕೆ ಚೊಗರಿನ ಪಂಚೆ ಹಾಗೂ ಶಾಲು ಹಾಕಿರುವ ಫೋಟೋ ಕೆಳಗೆ ಇದೆ….)
ಮಿಜೋರಾಂನ ಚಾಂಫೈನಲ್ಲಿ ಅಸ್ಸಾಂ ರೈಫಲ್ಸ್ 466 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದೆ. ಈ…
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ …
ಪ್ರತಿ 15 ದಿನಗಳಿಗೊಮ್ಮೆ ಶಾಲೆ ಮತ್ತು ಅಂಗನವಾಡಿಗಳ ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸಿ ತಪಾಸಣೆ…
ಬಂಗಾಳಕೊಲ್ಲಿಯ ಆಂದ್ರಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಒಡಿಸ್ಸಾ ಕರಾವಳಿ ತನಕ ಸಾಗಿ,…
ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ತೋಟಗಾರಿಕಾ ಬೆಳೆಗಳಿಗೆ…
ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ…