Advertisement
ಸುದ್ದಿಗಳು

ಅಡಿಕೆ ಪರ್ಯಾಯ ಬಳಕೆ | ಸಿದ್ಧವಾಗಿದೆ ಅಡಿಕೆ ಚೊಗರಿನ ಪಂಚೆ-ಶಾಲು |

Share

ಅಡಿಕೆ ಚೊಗರಿನ ಸೀರೆ ಈಗಾಗಲೇ ಸದ್ದು ಮಾಡಿದೆ. ಕೈಮಗ್ಗ ಬಟ್ಟೆಗೆ ಅಡಿಕೆ ಚೊಗರು ಹಾಗೂ ನೈಸರ್ಗಿಕ ಬಣ್ಣದಿಂದ ತಯಾರು ಮಾಡಿರುವ ಸೀರೆ ವಿವಿಧ ಕಡೆ ಗಮನ ಸೆಳೆದಿತ್ತು. ಇದೀಗ ಕೈಮಗ್ಗ ಬಟ್ಟೆಗೆ ಅಡಿಕೆ ಚೊಗರು ಬಳಕೆ ಮಾಡಿ ಪಂಚೆ ಹಾಗೂ ಶಾಲು ಸಿದ್ಧವಾಗಿದೆ.ಕಾರ್ಕಳದ..

ಕಾರ್ಕಳದ ಕದಿಕೆ ಟ್ರಸ್ಟ್ ಮೂಲಕ ನೇಕಾರಿಕೆ ತರಬೇತಿ ಪಡೆಯುತ್ತಿರುವ ತಂಡವು  ಈ ಪಂಚೆ ತಯಾರು ಮಾಡುತ್ತಿದೆ. ಕುಂದಾಪುರದ ಹೊಸೇರಿ ಹಾಡಿಮನೆಯ ಪ್ರದೇಶದಲ್ಲಿ ಈ ತರಬೇತಿ ನಡೆಯುತ್ತಿದೆ. ಇಲ್ಲಿಯ ಉತ್ಪನ್ನಕ್ಕೆ ಬಾಗಳ್‌ ಎಂದು ಹೆಸರಿಸಲಾಗಿದೆ. ಈ ಪ್ರದೇಶದಲ್ಲಿ ಪುರಾತನವಾದ ರೆಂಜೆ/ಬಕುಳ ಮರ ಇದೆ, ಅಲ್ಲೇ ಊರಿನ ದೈವದ ಗುಡಿಯೂ ಇದೆ. ಈ ಎಲ್ಲಾ ಕಾರಣಕ್ಕೆ ಬಾಗಳ್‌ ಎಂದು ಆ ಪುರಾತನ ಮರದ ಹೆಸರನ್ನು ಉಲ್ಲೇಖಿಸಲಾಗಿದೆ. ಕುಂದಗನ್ನಡದಲ್ಲಿ ಈ ಮರವನ್ನು ಬಾಗಳ್‌ ಎನ್ನುತ್ತಾರೆ. ಹೀಗಾಗಿ ಬಾಗಳ್‌ ಎಂದು ಹೆಸರಿಸಲಾಗಿದೆ. ಈ ಬಗ್ಗೆ….

ಅಡಿಕೆ ಚೊಗರಿನ ಪಂಚೆ-ಶಾಲು
ಬಟ್ಟೆ ತಯಾರಿಕೆ

ಅಡಿಕೆಯ ಚೊಗರಿನ ಬಟ್ಟೆ ಉತ್ಪನ್ನಗಳಿಗೆ ಈಗಾಗಲೇ ಬೇಡಿಕೆ ವ್ಯಕ್ತವಾಗಿದ್ದು, ಈಗ ಅಡಿಕೆ ಚೊಗರಿನ ಪಂಚೆ ಹಾಗೂ ಶಾಲು ಕೂಡಾ ತಯಾರಿಕೆಯಾಗಿದೆ. ಗ್ರಾಮೀಣ ಉತ್ಪನ್ನ ಹಾಗೂ ಅಡಿಕೆಯ ಮೌಲ್ಯವರ್ಧನೆ ಇಲ್ಲಿ ಪ್ರಮುಖವಾಗಿದೆ. ಇದರ ಜೊತೆಗೆ ನೇಕಾರಿಕೆ ಉಳಿಸಲು ಹಲವು ಪ್ರಯತ್ನ ನಡೆಯುತ್ತಿದೆ. ಈ ಕಾರಣದಿಂದ ಬಟ್ಟೆ ಖರೀದಿ ಮಾಡುವ ಮೂಲಕ ದೇಸೀ ಉದ್ಯಮಕ್ಕೆ, ಕೈಮಗ್ಗ, ನೇಕಾರಿಕೆ ಉಳಿಸಲು ಬೆಂಬಲ ವ್ಯಕ್ತಪಡಿಸಬಹುದು. ಅಡಿಕೆ ಚೊಗರು ಅಂಚಿನ ಪಂಚೆ ಶಾಲು ಸೆಟ್ ಕೂಡಾ ಕದಿಕೆ ಟ್ರಸ್ಟ್‌ ಮೂಲಕ ಲಭ್ಯ ಇದೆ. ಪಂಚೆ : 800 ರೂಪಾಯಿ, ಶಾಲು : 600 ರೂಪಾಯಿ, ಎರಡೂ ಜೊತೆ ಗೆ 1400 ರೂಪಾಯಿ ಹಾಗೂ ಕಳುಹಿಸುವ ವೆಚ್ಚ ಪ್ರತ್ಯೇಕ ವಿಧಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ 9880835299 ಸಂಪರ್ಕ ಮಾಡಬಹುದು. ಖರೀದಿ ಆಸಕ್ತರು ಕಾಯ್ದಿರಿಸಬೇಕಾಗುತ್ತದೆ. ತಯಾರಾದಂತೆ ಆಸಕ್ತರಿಗೆ ಕಳುಹಿಸಿಕೊಡುತ್ತಾರೆ.(ಅಡಿಕೆ ಚೊಗರಿನ ಪಂಚೆ ಹಾಗೂ ಶಾಲು ಹಾಕಿರುವ ಫೋಟೋ ಕೆಳಗೆ ಇದೆ….)

ಅಡಿಕೆ ಚೊಗರಿನ ಪಂಚೆ-ಶಾಲು

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…

17 minutes ago

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

10 hours ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

1 day ago