ಅಡಿಕೆ ಧಾರಣೆ, ಅಡಿಕೆ ಬೆಳೆ ವಿಸ್ತರಣೆಯ ನಡುವೆಯೇ ಅಡಿಕೆ ಬೆಳೆಯ ಬಗ್ಗೆಯೂ ಕಾಳಜಿ ಹೆಚ್ಚುತ್ತಿದೆ. ಇದೀಗ ಅಡಿಕೆಯಲ್ಲಿ ಸಸ್ಯ ಆರೋಗ್ಯ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮವನ್ನು ಮಾರ್ಚ್ 7 ರಂದು ಪುತ್ತೂರಿನ ಬಲ್ನಾಡಿನಲ್ಲಿ ಆಯೋಜಿಸಲಾಗಿದೆ.
` ಅಡಿಕೆಯ ಕುರಿತು ಸಮಗ್ರ ಮಾಹಿತಿ ‘ ಈ ಕುರಿತು 7ರಂದು ಬೆಳಗ್ಗೆ 10 ಗಂಟೆಗೆ ಪುತ್ತೂರಿನ ಬಲ್ನಾಡು ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು ಅವರ ತೋಟದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮ್ ಕಿಶೋರ್ ಮಂಚಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಸರಗೋಡು ಸಿಪಿಸಿಆರ್‌ಐನ ಬೆಳೆ ಸಂರಕ್ಷಣಾ ವಿಭಾಗದ ಮುಖ್ಯಸ್ಥ ಡಾ.ವಿನಾಯಕ್ ಹೆಗಡೆ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದ ನಂತರ ಪೋಷಕಾಂಶ ನಿರ್ವಹಣೆ, ಎಲೆ ಚುಕ್ಕೆ ರೋಗ, ಹಿಂಗಾರು ಒಣಗಿಸುವ ರೋಗ ಪತ್ತೆ ಮತ್ತು ನಿರ್ವಹಣೆ, ಕೀಟ ನಿರ್ವಹಣೆ, ರೈತ ಉತ್ಪಾದಕ ಸಂಸ್ಥೆಯ ಸಾಧ್ಯತೆ, ಅಡಿಕೆ ಕೃಷಿಯಲ್ಲಿ ಕೃಷಿ ಅನುಭವ ಸೇರಿದಂತೆ ನಾನಾ ಮಾಹಿತಿ ನೀಡಲಿದ್ದಾರೆ. ನಂತರ ಸಂವಾದ ಕಾರ್ಯಕ್ರಮ ಸಮಯ 2 ರಿಂದ 3.30ರವರೆಗೆ ನಡೆಯಲಿದೆ. ಈ ಕಾರ್ಯಕ್ರಮವು ವಿಟ್ಲ ಸಿಪಿಸಿಆರ್ ಐ ಮತ್ತು ಅಡಿಕೆ ಮತ್ತು ಸಾಂಬಾರ ಬೆಳೆಗಳ ಅಭಿವೃದ್ಧಿ ನಿರ್ದೆಶನಾಲಯದ ಜಂಟಿ ಆಶ್ರಯದಲ್ಲಿ ಜರುಗಲಿದೆ.
- ಮರದ ಆರೋಗ್ಯ ವರ್ಧನೆಯಲ್ಲಿ ಪೋಷಕಾಂಶ ನಿರ್ವಹಣೆಯ ಪ್ರಾಮಿಖ್ಯತೆ ಮತ್ತು ಅಡಿಕೆ ಗಿಡದ ಸಾಕಷ್ಟು ಪೋಷಕಾಂಶ ನಿರ್ವಹಣೆ – ಡಾ . ರವಿ ಭಟ್
- ಅಡಿಕೆಯ ಹಿಂಗಾರ ಒಣಗುಚ ರೋಗ, ಎಲೆಚುಕ್ಕೆ, ಬುಡಕೊಳೆ ಮತ್ತಿತರ ಶಿಲೀಂದ್ರ ರೋಗಗಳ ಸಮಗ್ರ ನಿರ್ವಹಣೆ – ಡಾ.ವಿನಾಯಕ ಹೆಗಡೆ
- ಬೇರುಹುಳ, ಪೆಂಟಿ ಕೀಟ, ಭತ್ತದ ಜೀರುಂಡೆ ಮತ್ತು ಇತರೇ ಕೀಟಗಳ ನಿರ್ವಹಣೆ – ಡಾ ರಾಜ್ ಕುಮಾರ್ ಮತ್ತು ಡಾ. ಮಧು ಟಿ ಎಸ್
- ರೋಗ ನಿಯಂತ್ರಣಕ್ಕೆ ಚಿಕಿತ್ಸೆ ನೀಡಲು ರಾಮ್ ಕಿಶೋರ್ ಮಂಚಿ ಕೌಶಲ್ಯ ತಂಡ
- ಅಂತರ ಬೆಳೆಯಾಗಿ ಮೆಣಸು: ಪೋಷಕಾಂಶ ಮತ್ತು ರೋಗ ನಿರ್ವಹಣೆ, ಕೃಷಿ ಅನುಭವ – ಬಿ. ಸುರೇಶ್ ಬಲ್ನಾಡು
ಕಾರ್ಯಕ್ರಮದ ವಿಶೇಷತೆಗಳು: ಆರೋಗ್ಯ ರೋಗ, ಕೀಟ ಮತ್ತು ಪೋಷಕಾಂಶಗಳಿಗೆ ಸಂಬಂಧಿಸಿದ ಲೈವ್ ಮಾದರಿಗಳ ಮಾಹಿತಿ, ವಿವರಣೆ ಮತ್ತು ನಿರ್ವಹಣೆ ಕ್ರಮಗಳು ಪೋಷಕಾಂಶ ನಿರ್ವಹಣೆಯ ಕಸ್ಟಮೈಸ್ ಮಾಡಿದ ಮಾಹಿತಿ, ರಸವಾರಿ/ನೀರಿನಲ್ಲಿ ಕರಗಿದ ರಸಗೊಬ್ಬರದ ಮಾಹಿತಿ ಮಹತ್ವ ಮತ್ತು ಲಘು ಪೋಷಕಾಂಶಗಳ ನಿರ್ವಹಣೆ ಪೋಷಕಾಂಶದ ಸಸ್ಯಗಳ ಮೇಲೆ ಪರಿಣಾಮ ಬೀರುವ ಬೇರು ಕೊಳೆತ ಮತ್ತು ಬೇರು ಕೊಳೆತವನ್ನು ನಿಯಂತ್ರಿಸಿ ಮೊಳಕೆ ಹೆಚ್ಚಾಗುತ್ತದೆ. ಬೆಳವಣಿಗೆ , ಟ್ರೈಕೋಡರ್ಮಾ ಮತ್ತು ಬೇರು ಹುಳು ನಿರ್ವಹಣೆಗೆ ಜಂತುಹುಳುಗಳ ಬಳಕೆಯ ಮಾಹಿತಿ ಮತ್ತು ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು ಲಭ್ಯವಿರುತ್ತವೆ.