ಅಡಿಕೆ ಬೆಳೆಗಾರರಿಗೆ ಬೀಸಿಗೆ ಕಾಲ ಕಳೆದು ಮಳೆಗಾಲದ ಆರಂಭದ ವೇಳೆ ವಿಪರೀತವಾಗಿ ಕಾಡುವ ಸಮಸ್ಯೆ ಎಳೆ ಅಡಿಕೆ ಬೀಳುವುದು. ಇದಕ್ಕೆ ಬಹುಪಾಲು ಕಾರಣ ಪೆಂತಿ ಕೀಟ. ಇದೀಗ ಈ ಕೀಟಿ ನಿಯಂತ್ರಣಕ್ಕೆ ರಾಸಾಯನಿಕ ರಹಿತವಾಗಿ ನಿಯಂತ್ರಣ ಮಾಡುವ ಅಧ್ಯಯನವನ್ನು ಸಿಪಿಸಿಆರ್‌ಐ ವಿಜ್ಞಾನಿಗಳು ಆರಂಭಿಸಿದ್ದಾರೆ.
ಪುತ್ತೂರಿನ ಬಲ್ನಾಡಿನ ಕೃಷಿಕ ಸುರೇಶ್ ಭಟ್ ಅವರ ಕೃಷಿ ಭೂಮಿಯಲ್ಲಿ ಸಿಪಿಸಿಆರ್ ಐ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ.ಮಧು ಅವರು ಮಾಹಿತಿ ನೀಡಿದರು. ಅಡಿಕೆ ಬೀಳುವುದಕ್ಕೆ ಮುಖ್ಯವಾದ ಕಾರಣ ಪೆಂತಿ ಕೀಟ. ಹೆಚ್ಚಾಗಿ ಈ ಕೀಟವು ಅಲಸಂಡೆಯಲ್ಲಿರುತ್ತದೆ, ತಾತ್ಕಾಲಿಕವಾಗಿ ಅಡಿಕೆ ಹಿಂಗಾರಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಕೀಟವು ಅಡಿಕೆ ರಸ ಹೀರುವ ಕಾರಣದಿಂದ ಅಡಿಕೆ ಬೀಳುತ್ತದೆ. ಸದ್ಯ ರಾಸಾಯನಿಕ ಮಾತ್ರವೇ ಪರಿಹಾರವಾಗಿದೆ. ಹೆಚ್ಚುರಾಸಾಯನಿಕ ಸಿಂಪಡಣೆ ಮಾಡುವುದು ಕೃಷಿ ಬೆಳವಣಿಗೆ ದೃಷ್ಟಿಯಿಂದ ಹಾನಿಕಾರಕವಾದ ಕಾರಣ ಇದೀಗ ರಾಸಾಯನಿಕ ರಹಿತವಾದ ಪ್ರಯೋಗ ನಡೆಯುತ್ತಿದೆ. ರಾಸಾಯನಿಕ ರಹಿತವಾದ ಅಧ್ಯಯನ ಪ್ರಾರಂಭವಾಗಿದೆ. ಈ ಫಲಿತಾಂಶ ಬರಲು ಸಮಯ ಇದೆ, ಪ್ರಾರಂಭದ ಹಂತದಲ್ಲಿ ಈ ಪ್ರಯೋಗ ಇದೆ. ಮುಂದಿನ ದಿನಗಳಲ್ಲಿ ಕೃಷಿಕರಿಗೆ ಸಿಗಬಹುದು ಎಂದು ಡಾ.ಮಧು ಹೇಳಿದರು.
ಅನಗತ್ಯವಾಗಿ ರಾಸಾಯನಿಕ ಸಿಂಪಡಣೆ ಮಾಡುವುದು ಕಡಿಮೆ ಮಾಡಬೇಕಿದೆ. ವಿಷ ಸಿಂಪಡಣೆಯಿಂದ ಇತರ ಕೀಟಗಳೂ ನಾಶವಾಗುತ್ತದೆ. ಅನೇಕ ಕೀಟಗಳು ನಮಗೆ ಮಿತ್ರವಾಗಿರುತ್ತದೆ. ವಾತಾವರಣ ಶುದ್ಧತೆ ಹೆಚ್ಚಾಗಬೇಕು, ಆಗ ಆಹಾರ ಸರಪಳಿಯೂ ಬೆಳೆಯುತ್ತದೆ. ವಿಷ ಸಿಂಪಡಣೆಯ ಕಾರಣದಿಂದ ಗೊತ್ತಿಲ್ಲದೇ ಯಾವುದೋ ಒಂದು ಜಾತಿಯ ಕೀಟ ನಾಶವಾಗುತ್ತದೆ. ಟಾರ್ಗೆಟ್ ಕೀಟದ ಜೊತೆ ಇನ್ನೊಂದು ಕೀಟವೂ ನಾಶವಾಗುತ್ತದೆ.
ಮಂಗಳೂರಿನ ಶ್ರೀ ಸಂಗೀತ ಪಾಠಶಾಲೆಯ ವಾರ್ಷಿಕೋತ್ಸವ `ಸ್ವರಶ್ರೀ 2025' ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ…
ಕಳೆದ 5 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಅಡಿಕೆ ಕೃಷಿ ಶೇ. 50 ರಷ್ಟು ಹೆಚ್ಚಾಗಿದೆ.ಇದುವರೆಗೂ…
ಸರ್ಕಾರಿ ಆಯುರ್ವೇದ ಕಾಲೇಜು ಸ್ಥಾಪನೆಯಾದರೆ ಅಡಿಕೆಯ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗಬಹುದು. ಅಲ್ಲದೆ, ಸಾಂಪ್ರದಾಯಿಕ…
ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆ ಖರೀದಿಯ ಕಾಲಮಿತಿ ಹೆಚ್ಚಿಸುವಂತೆ ಕೇಂದ್ರ ಕೃಷಿ ಸಚಿವರಲ್ಲಿ…
ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ, ಗಣಿಗಾರಿಕೆ, ಮನರಂಜನೆ ಯೋಜನೆಗಳಲ್ಲಿನ ಅಂತರ್ಜಲ ಬಳಕೆದಾರರು ಕಡ್ಡಾಯವಾಗಿ…
ಕನ್ನಡ ಭಾಷೆಯನ್ನು ಆಡಳಿತದಲ್ಲಿ ಜಾರಿಗೆ ತರದಿದ್ದರೆ, ಆದೇಶಗಳಿಂದ ಅನುಷ್ಠಾನ ಮಾಡಲು ಸಾಧ್ಯವಾಗುವುದಿಲ್ಲ ಎಂದು…