ಅಡಿಕೆ ಧಾರಣೆ ಈಗ ಉತ್ತಮವಾಗಿದೆ. ಹೀಗಾಗಿ ಅಡಿಕೆ ಬೆಳೆ ವಿಸ್ತರಣೆ ವೇಗದಲ್ಲಿ ಸಾಗುತ್ತಿದೆ. ಇದೇ ವೇಳೆ ಹಲವು ಸಮಸ್ಯೆಗಳೂ ಕಾಡಲು ಆರಂಭಿಸಿದೆ. ಇದೀಗ ಹೊಸದಾಗಿ ನಡೆಸಿದ ಅಧ್ಯಯನದಲ್ಲಿ ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಫಲವತ್ತತೆ ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನಡೆಸಿದ ಅಧ್ಯಯನವು ಅಂತರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ವಿವಿದೆಡೆ ಹಲವು ವರ್ಷಗಳಿಂದ ಅಡಿಕೆ ಬೆಳೆಯಲಾಗುತ್ತಿದೆ. ಇದು ಸಾಂಪ್ರದಾಯಿಕ ಅಡಿಕೆ ಬೆಳೆಯುವ ಪ್ರದೇಶ. ಈ ಪ್ರದೇಶಗಳಲ್ಲಿ ಮಣ್ಣಿನ ಫಲವತ್ತತೆಯ ಬಗ್ಗೆ ತಂಡವು ಅಧ್ಯಯನ ನಡೆಸಿದೆ. ಇಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹೋಬಳಿಯಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳ ಮಣ್ಣಿನ ಫಲವತ್ತತೆಯನ್ನು ಪರಿಶೀಲನೆ ಮಾಡಲಾಗಿತ್ತು. ಶಿರಸಿ ತಾಲೂಕು ಸಾಂಪ್ರದಾಯಿಕ ಅಡಕೆ ಬೆಳೆಯುವ ಪ್ರದೇಶವಾಗಿದೆ. ಈಚೆಗೆ ಕಡಿಮೆ ಉತ್ಪಾದಕತೆಯ ಸಮಸ್ಯೆ ಕಂಡುಬಂದಿತ್ತು. ಈ ಎಲ್ಲಾ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹೋಬಳಿಯ 42 ಗ್ರಾಮಗಳ ಅಡಿಕೆ ತೋಟಗಳಿಂದ 150 ಮೇಲ್ಮೈ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲಾಗಿತ್ತು ಮತ್ತು ಮಣ್ಣಿನ ರಾಸಾಯನಿಕ ಗುಣಗಳ ಬಗ್ಗೆ ವಿಶ್ಲೇಷಿಸಲಾಗಿತ್ತು. ಇದರಲ್ಲಿ ಅಚ್ಚರಿಯ ಫಲಿತಾಂಶ ಲಭಿಸಿದೆ. ಫಲವತ್ತತೆಯ ಸ್ಥಿತಿಯು ಕಡಿಮೆಯಾಗಿದ್ದು, ಮಣ್ಣು ಸ್ವಲ್ಪ ಆಮ್ಲೀಯದಿಂದ ತಟಸ್ಥವಾಗಿರುವುದು ಬೆಳಕಿಗೆ ಬಂದಿದೆ. ಎನ್ ಪಿ ಕೆ ಮಟ್ಟದಲ್ಲೂ ವ್ಯತ್ಯಾಸ ಕಂಡು ಬಂದಿದೆ. ಸೂಕ್ಷ್ಮ ಪೋಷಕಾಂಶಗಳಿಗೆ ಸಂಬಂಧಿಸಿದಂತೆ, ಮಣ್ಣಿನಲ್ಲಿ Zn (28%) ಕೊರತೆಯಿದೆ ಮತ್ತು ಲಭ್ಯವಿರುವ Cu, mn ಕೊರತೆ ಇದ್ದರೆ ಇತರ ಸೂಕ್ಷ್ಮ ಪೋಷಕಾಂಶಗಳಲ್ಲಿ ಸದ್ಯ ಸಾಕಾಗುವ ಮಟ್ಟದಲ್ಲಿತ್ತು.
ಒಟ್ಟಾರೆ ಅಧ್ಯಯನದ ಪ್ರದೇಶವು ಲಭ್ಯವಿರುವ ಗೊಬ್ಬರದಲ್ಲಿ ನೈಟ್ರೋಜನ್ ಕಳಪೆಯಾಗಿದೆ ಮತ್ತು ಲಭ್ಯವಿರುವ ಝಿಂಕ್ ಕೊರತೆಯಿದೆ ಎಂದು ಸೂಚಿಸುತ್ತದೆ ಎಂದು ವರದಿ ಹೇಳಿದೆ.
ಅಡಿಕೆ ಬೆಳೆಗಾರರು ಅನೇಕ ವರ್ಷಗಳ ಬಳಿಕ ಮಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆಯ ಬಗ್ಗೆ ಚರ್ಚಿಸುವಂತೆ ಹಾಗೂ ಚಿಂತಿಸುವಂತೆ ಮಾಡಿದೆ. ಈಚೆಗೆ ರಾಸಾಯನಿಕ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈಗ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಕಾಣುತ್ತಿದೆ.
ಈಚೆಗೆ ಅಡಿಕೆ ಬೆಳೆಗೆ ಕಾಡುವ ವಿವಿಧ ರೋಗಗಳಿಗೂ ಸೂಕ್ಷ್ಮ ಪೋಷಕಾಂಶಗಳ ಕೊರತೆ ಹಾಗೂ ಮಣ್ಣಿನ ರಸಸಾರ ಕಡಿಮೆಯಾಗಿರುವುದೇ ಕಾರಣವೇ ಎಂಬ ಜಿಜ್ಞಾಸೆ ಈಗ ಆರಂಭವಾಗಿದೆ. ಹಲವಾರು ವರ್ಷಗಳಿಂದಲೂ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಈಚೆಗೆ ಸೂಕ್ಷ್ಮ ಪೋಷಕಾಂಶಗಳ ಕೊರತೆ ಹಾಗೂ ಹೆಚ್ಚಾಗಿರುವ ಫಾಸ್ಪರಸ್ ಕೂಡಾ ಗಿಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದು ಕಂಡುಬಂದಿದೆ. ಈ ಎಲ್ಲಾ ಕಾರಣಗಳಿಂದ ಈ ಅಧ್ಯಯನವು ಅಡಿಕೆ ಬೆಳೆಗಾರರು ಚಿಂತಿಸುವಂತೆ ಮಾಡಿದೆ. ಈಚೆಗೆ ಕಂಡುಬಂದಿರುವ ರೋಗಗಳೂ, ವೈರಸ್ ದಾಳಿಗಳೂ ಅನೇಕ ವರ್ಷಗಳಿಂದಲೂ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಹಾಗೂ ಬಹುಪಾಲು ಮಲೆನಾಡು ತಪ್ಪಲು ಭಾಗ ಹಾಗೂ ಮಲೆನಾಡು ಭಾಗಗಳಲ್ಲಿಯೇ ಕಂಡುಬಂದಿರುವುದು ಕೂಡಾ ಗಮನಾರ್ಹವಾಗಿದೆ.20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…